ಹೌದು ಸಾಧನೆ ಮಾಡುವುದಕ್ಕೆ ಬಡತನವಾದರೇನು ಸಿರಿತನವಾದರೇನು ಸಾಧಿಸುವ ಛಲ ಒಂದು ಇದ್ದರೆ ಸಾಕು ಏನು ಬೇಕಾದರೂ ಸಾದಿಸಬಹುದು ಅನ್ನೋದಕ್ಕೆ ಈ ಅಧಿಕಾರಿಯೇ ಸಾಕ್ಷಿ ಇವರು ಎಷ್ಟೊಂದು ಶ್ರಮವಹಿಸಿ ತಮ್ಮ ಜೀವನ ಸಾಗಿಸಿದ್ದಾರೆ ಮತ್ತು ಅವರ ಸಾಧನೆಯ ಒಂದು ಒಂದು ಸಾಲುಗಳು ಇಲ್ಲಿವೆ ನೋಡಿ.

ಚಿಕ್ಕ ವಯಸ್ಸಿನಲ್ಲೇ IAS ಅಧಿಕಾರಿಯಾದ ಬಡ ರಿಕ್ಷಾ ಚಾಲಕನ ಮಗನೀತ. ದಿನಕ್ಕೆ 18 ಗಂಟೆಗಳ ಕಾಲ ಅಧ್ಯಯನ ಮಾಡಿ 21ನೇ ವಯಸ್ಸಿಗೆ ಕಠಿಣ ಪರಿಶ್ರಮದಿಂದ ಯಶಸ್ಸಿನ ಶಿಖರವನ್ನೇರಿದ ಈತ ಐಎಎಸ್ ಕನಸು ಕಟ್ಟಿಕೊಳ್ಳುವ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾನೆ.

ಬಡತನದ ಬೇಗೆಯಲ್ಲಿಯೂ ತನ್ನ ಗುರಿಗೆ ಯಾವುದೇ ರೀತಿಯಲ್ಲಿ ಬಾಧೆಯಾಗದಂತೆ ದೃಢ ಚಿತ್ತದಿಂದ ಮುಂದುವರಿದ ಗೋವಿಂದ ಮತ್ತೀಗ ಅತ್ಯುನ್ನತ ಅಧಿಕಾರಿಯಾಗಿದ್ದಾನೆ.

ಒಂದು ಚಿಕ್ಕ ಕೋಣೆಯಲ್ಲಿ ವಾಸವಾಗಿತ್ತು ಗೋವಿಂದ ಅವರ ಕುಟುಂಬ. ಉಸ್ಮಾನಪುರ ಸರಕಾರಿ ಶಾಲೆಯಲ್ಲಿ ಓದಿದ ಅವರು ಬಳಿಕ ವಾರಣಾಸಿಯ ಸರಕಾರಿ ಕಾಲೇಜಿನಲ್ಲಿ ಗಣಿತದಲ್ಲಿ ಪದವಿ ಪಡೆದರು. IAS ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಪಾಸಾಗಿದ್ದಷ್ಟೇ ಅಲ್ಲ 48ನೇ ರ‍್ಯಾಂಕ್ ಪಡೆದ ಹೆಗ್ಗಳಿಕೆ ಇವರದು.

ಓದಲು ಕುಳಿತುಕೊಂಡಾಗ ಕರೆಂಟ್ ಹೋಗಿ ಬಿಡುತ್ತಿತ್ತು. ಹೋದರೆ ಕೆಲವೊಮ್ಮೆ ಸಂಪೂರ್ಣ ದಿನ ಪತ್ತೆಯೇ ಇರುತ್ತಿರಲಿಲ್ಲ. ಕರೆಂಟ್ ಹೋದರೆ ಪಕ್ಕದಲ್ಲಿಯೇ ಜನರೇಟರ್ ಆರಂಭವಾಗುತ್ತಿತ್ತು. ಈ ಅಸಹನೀಯ ಶಬ್ಧ ಕೇಳಲೇ ಆಗುವುದಿಲ್ಲ. ಮತ್ತೆ ಗಮನಕೊಟ್ಟು ಓದಲು ಹೇಗೆ ಸಾಧ್ಯ. ಹೀಗಾಗಿ ಕಿಟಕಿಗಳನ್ನು ಬಂದ್ ಮಾಡಿ, ಕಿವಿಗೆ ಹತ್ತಿ ಹಾಕಿಕೊಂಡು ಅವರು ಓದುತ್ತಿದ್ದರು.

ಪದವಿ ಮುಗಿಸಿ ನಾಗರಿಕ ಸೇವೆ ಪರೀಕ್ಷೆಗೆ ತಯಾರಿ ನಡೆಸಲು ದಿಲ್ಲಿಗೆ ಬಂದ ಅವರಿಗೆ ಆರ್ಥಿಕ ಸಮಸ್ಯೆ ಎದುರಾಯಿತು. ಹೀಗಾಗಿ ಅವರ ತಂದೆ ಊರಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದರು. ಆದರೆ ಭೂಮಿ ಮಾರಿ ಅವರಿಗೆ ಸಿಕ್ಕಿದ್ದು ಕೇವಲ 4ಸಾವಿರ ರೂ ಮಾತ್ರ. ಆದರೆ ಹಾಗೋ ಹೀಗೋ ಮಾಡಿ ತರಬೇತಿ ಪಡೆಯುವುದನ್ನು ಮುಂದುವರಿಸಿದ ಅವರು ದಿನಕ್ಕೆ ಓದುತ್ತಿದ್ದುದು ಬರೋಬ್ಬರಿ 18 ರಿಂದ 20 ಗಂಟೆ.

2006ರಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರಿಗೆ ಫಲಿತಾಂಶ ಬರುವ ಮೊದಲಿನ 10 ದಿನ ನಿದ್ದೆಯೇ ಹತ್ತಿರ ಸುಳಿಯಲಿಲ್ಲ. ಕೊನೆಗೂ ಫಲಿತಾಂಶ ಬಂತು ಅವರು 48ನೇ ರ‍್ಯಾಂಕ್ ಪಡೆದು ಪಾಸಾಗಿದ್ದರು. ಇದನ್ನವರಿಂದ ನಂಬಲಾಗಲಿಲ್ಲ. ಕೈ ನಡುಗಿತು, ಬಾಯಿ ಕಂಪಿಸಿತು. ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ತಕ್ಷಣವೇ ಅವರದನ್ನು ತಂದೆಗೆ ತಿಳಿಸಿ ಖುಷಿಪಟ್ಟರು. ತಮ್ಮ ಈ ಸಾಧನೆ ಹಿಂದಿನ ಸ್ಪೂರ್ತಿ ಎಪಿಜೆ ಅಬ್ಲುಲ್ ಕಲಾಂ ಎನ್ನುತ್ತಾರೆ ಗೋವಿಂದ.

Leave a Reply

Your email address will not be published. Required fields are marked *