ಕೂದಲನ್ನು ದಟ್ಟವಾಗಿ ಬೆಳೆಸುವ ಮತ್ತು ಕೂದಲಿನ ಪೋಷಣೆ ಮಾಡುವ ವಿಧಾನ ನಾವು ಸುಂದರವಾಗಿ ಕಾಣಬೇಕು ಅಂದರೆ ಕೂದಲು ಬಹಳನೇ ಪ್ರಾಮುಖ್ಯತೆಯನ್ನು ವಹಿಸಿಕೊಳ್ಳುತ್ತದೆ ಕಪ್ಪಗಿರುವ ಕೂದಲು ಹೆಚ್ಚು ಆಕರ್ಷಣೆ ಮಾಡುತ್ತದೆ ಹಾಗಾಗಿ ಕೂದಲಿನ ಬಗ್ಗೆ ಎಲ್ಲರೂ ಕೂಡ ಕಾಳಜಿವಹಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ, ಕೂದಲಿನ ಹೊಟ್ಟು, ಕೂದಲು ಉದುರುವಿಕೆ, ಈ ರೀತಿಯ ನಾನಾ ಸಮಸ್ಯೆಗಳನ್ನು ಅನುಭವಿಸುತ್ತ ಇರುತ್ತಾರೆ. ಒಂದು ವೇಳೆ ನಮ್ಮ ತಲೆ ಕೂದಲು ತೆಳುವಾದರೆ ನೋಡುವುದಕ್ಕೆ ಅಂದವಾಗಿ ಕಾಣುವುದಿಲ್ಲ. ಹಾಗಾಗಿ ಹೆಚ್ಚಾಗಿ ಎಲ್ಲರೂ ಕೂಡ ತಲೆ ಕೂದಲಿನ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಾರೆ.
ಕೂದಲು ದಟ್ಟವಾಗಿ ಬೆಳೆಯಲು ಹಾಗೂ ಕೂದಲಿನ ಸಂರಕ್ಷಣೆ ಮಾಡುವ ಒಂದು ಅದ್ಭುತವಾದ ಮನೆಮದ್ದಿನ ಬಗ್ಗೆ ನಿಮಗೆ ತಿಳಿಸುತ್ತೇವೆ. ಈ ಒಂದು ಹೋಂ ರೆಮಿಡಿಯನ್ನು ವಾರದಲ್ಲಿ ಒಂದು ಬಾರಿ ಬಳಕೆ ಮಾಡುವುದರಿಂದ ನಿಮ್ಮ ಕೂದಲು ಸಾಫ್ಟ್ ಆಗಿ ಸಿಲ್ಕಾಗಿ ಸ್ಮೂತ್ ಆಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ. ಮೊದಲಿಗೆ ಎರಡು ಟೇಬಲ್ ಸ್ಪೂನ್ ಮೆಂತೆಯನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ಪೂರ್ತಿ ನೆನೆಯಲು ಬಿಡಬೇಕು. ತದನಂತರ ಬೆಳಗ್ಗೆ ಎದ್ದ ಕೂಡಲೇ ನೆನೆದಿರುವ ಮೆಂತೆಯನ್ನು ಒಂದು ಮಿಕ್ಸಿ ಜಾರಿಗೆ ಹಾಕಿ
ನಂತರ ಅದಕ್ಕೆ ಎರಡು ಟೇಬಲ್ ಸ್ಪೂನ್ ಮೊಸರನ್ನು ಹಾಕಿ ನಂತರ ಐದು ದಾಸವಾಳದ ಎಲೆಗಳನ್ನು ಹಾಕಿ ನಂತರ ಈ ಮೂರನ್ನು ಕೂಡ ಚೆನ್ನಾಗಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಬೇಕು. ನಂತರ ಈ ಮಿಶ್ರಣವನ್ನು ಒಂದು ಬಟ್ಟಲಿಗೆ ಹಾಕಿ ಕೊಂಡು ನಂತರ ಇದಕ್ಕೆ ಒಂದು ಮೊಟ್ಟೆಯನ್ನು ಒಡೆದು ಹಾಕಿ ಎಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ನಂತರ ಈ ಮಿಶ್ರಣವನ್ನು ತಲೆಗೆ ಅಪ್ಲೈ ಮಾಡಿಕೊಂಡು ಒಂದು ಗಂಟೆಗಳ ಕಾಲ ಹಾಗೆಯೇ ಬಿಡಬೇಕು. ನಂತರ ಬೆಚ್ಚಗಿರುವ ನೀರಿನಲ್ಲಿ ತಲೆ ತೊಳೆದುಕೊಳ್ಳಬೇಕು ಹೀಗೆ ವಾರಕ್ಕೆ ಒಂದು ಬಾರಿ ಮಾಡುವುದರಿಂದ ಕೂದಲುದುರುವ ಸಮಸ್ಯೆ ನಿವಾರಣೆಯಾಗುತ್ತದೆ.
ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.