ಪ್ರತಿ ಜೀವಿ ತಾನು ಮಾಡಿದ ಕರ್ಮಫಲ ದಿಂದಲೇ ಮುಂದಿನ ಜನ್ಮದಲ್ಲಿ ತನ್ನ ತಂದೆ ತಾಯಿಯನ್ನ ಹಾಗು ಕುಟುಂಬ ಸಧಸ್ಯರನ್ನ ಆಯ್ಕೆ ಮಾಡಿಕೊಳ್ಳಲಾಗುತ್ತದೆ, ಒಂದು ಕುಟುಂಬದಲ್ಲಿ ಯಾರಾದರೂ ಸ್ತ್ರೀ ಅಥವಾ ತಂದೆ ತಾಯಿಯವರಿಗೆ ಅನ್ಯಾಯ ಮಾಡಿದರೆ ಅಥವಾ ಪಿತೃ ಕಾರ್ಯಗಳು ಮಾಡದಿದ್ದರೂ ಅಂತವರಿಗೆ ಪಿತೃ ಶಾಪ ಅಥವಾ ಸ್ತ್ರೀ ಶಾಪ ತಗಲುತ್ತದೆ.

ಅದು ಒಬ್ಬರಿಗೆ ಮಾತ್ರವಲ್ಲದೆ ಬರುವ ಪೀಳಿಗೆಗೂ ಅದು ತಲುಪುತ್ತದೆ, ಜೊತೆಯಲ್ಲಿ ಸರ್ಪಗಳನ್ನ ಸಾಯಿಸಿದಾಗ ಸರ್ಪ ದೋಷ ಬಂದಿರ ಬಹುದು, ಈ ಎಲ್ಲ ಕಾರಣ ಗಳಿಂದ ನಿಮ್ಮ ಜೀವನದಲ್ಲಿ ಅಭಿವೃದ್ಧಿ ಸಿಕ್ಕಿರುವುದಿಲ್ಲ, ಅದರಂತೆ ಉದ್ಯೋಗಗಳು ಸಿಕ್ಕಿರುವುದಿಲ್ಲಾ ಜೊತೆಯಲ್ಲಿ ಸಂತಾನ ದೋಷ ಹಾಗು ವ್ಯಾಪಾರ ನಷ್ಟ ಈ ತರಹದ ಸಮಸ್ಯೆ ಗಳನ್ನ ಎದುರಿಸ ಬೇಕಾಗುತ್ತದೆ.

ವಯಸ್ಸಿನಲ್ಲಿ ಕೆಟ್ಟ ಚಟಗಳಿಗೆ ಬಿದ್ದರೆ ಆ ಪಾಪ ನಿಮ್ಮ ಪೀಳಿಗೆಗೆ ವ್ಯಾಧಿಯ ರೂಪದಲ್ಲಿ ವಂಶ ಪಾರಂಪರೆಯಾಗಿ ಕಾಡುತ್ತದೆ, ಆದ್ದರಿಂದ ನಾವು ವಯಸ್ಸಿನಲ್ಲಿ ಇರುವವಗ ಧಾರ್ಮವನ್ನ ಪಾಲಿಸಿದರೆ ನಮಗೆ ಹುಟ್ಟುವ ಮಕ್ಕಳು ಸಹ ಅದೇ ಧರ್ಮವನ್ನು ಹಂಚಿಕೊಂಡು ಹುಟ್ಟುತ್ತಾರೆ ಹಾಗು ಜೀವನದಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.

ಈ ಲೋಕದಲ್ಲಿ ಹುಟ್ಟುವ ಪ್ರತಿ ಜೀವಿಯಲ್ಲಿಯೂ ಗುರು ಅವತಾರವಾದ ದತ್ತಾತ್ರೇಯನು ಇರುತ್ತಾನೆ, ತಿಳಿದೋ ತಿಳಿಯದೇನೋ ಗುರುವನ್ನ ನಿರ್ಲಕ್ಷ್ಯ ಮಾಡುವುದರಿಂದ ಗುರು ಶಾಪಕ್ಕೆ ತುತ್ತಾಗ ಬೇಕಾಗುತ್ತದೆ, ಆದ್ದರಿಂದ ಬೃಹಸ್ಪತಿ ಅಥವಾ ಗುರುವಿನ ಧ್ಯಾನ ಮಾಡುವುದರಿಂದ ಗುರು ಶಾಪದಿಂದ ಪಾರಾಗಬಹುದು.

Leave a Reply

Your email address will not be published. Required fields are marked *