ಜೋತಿಷ್ಯ ಶಾಸ್ತ್ರ ಮನುಷ್ಯನ ಹಿತಿಹಾಸ, ಭವಿಷ್ಯ ಎಲ್ಲವನ್ನು ನಿಖರವಾಗಿ ಹೇಳುತ್ತದೆ ಎಂಬುದು ನಿಮಗೆ ಗೊತ್ತಿರುವ ವಿಷ್ಯ, ಅದೇ ಜೋತಿಷ್ಯ ಶಾಸ್ತ್ರವು ಮನುಷ್ಯನ ಗುಣವನ್ನು ಹೇಳುತ್ತದೆ, ಅತಿಯಾದ ಕೋಪ, ಮೋಸ ಮಾಡುವ ಗುಣ, ಒಳ್ಳೆ ನಡತೆ ಅದೇ ತರ ಲೈಂಗಿಕ ಕ್ರಿಯೆಗೆ ಹೆಚ್ಚು ಆಸಕ್ತಿ ತೋರುವ ಗುಣವನ್ನು ಯಾವ ರಾಶಿಯವರು ಹೊಂದಿದ್ದಾರೆ ಎಂಬುದನ್ನು ಇಂದು ನಿಮಗೆ ತಿಳಿಸುತ್ತೇವೆ.

ವೃಷಭ : ನಿಮ್ಮನ್ನು ಅತಿಯಾಗಿ ಕಾಳಜಿ ಮಾಡುವ ಅಥವಾ ಪ್ರೀತಿಸುವ ವ್ಯಕ್ತಿಯು ನಿಮ್ಮ ಸಂಗಾತಿಯಾಗಿದ್ದರೆ ಅವರು ರೋಮ್ಯಾನ್ಸ್ ವಿಚಾರದಲ್ಲಿ ಬೆಸ್ಟ್, ವಿಶ್ವಾಸಾರ್ಹ ಹಾಗೆ ರೋಮ್ಯಾಂಟಿಕ್ ಸ್ವಭಾವದ ಇವರು ತಮ್ಮವರ ಮುಂದೆ ಬೇಗ ಸೋತುಬಿಡುತ್ತಾರೆ.

ತುಲಾ : ನೀವೇನಾದರೂ ತುಲಾ ರಾಶಿಯ ಪುರುಷರನ್ನ ಮದುವೆಯಾಗಿದ್ದರೆ, ರೋಮ್ಯಾಂಟಿಕ್ ವಿಚಾರದಲ್ಲಿ ನೀವು ಅದೃಷ್ಟ ವಂತರು, ಕೇವಲ ರೊಮ್ಯಾನ್ಸ್ ಅಷ್ಟೇ ಅಲ್ಲದೆ ಸಾಕಷ್ಟು ಪ್ರೀತಿ ಕಾಳಜಿಯನ್ನು ಹೊಂದಿರುತ್ತಾರೆ, ಪ್ರೀತಿಯ ವಿಷಯ ಬಂದಾಗ ಇವರು ತುಂಬಾ ವಿಶ್ವಾಸನೀಯ ವ್ಯಕ್ತಿಗಳಾಗಿರುತ್ತಾರೆ.

ಧನು : ಈ ರಾಶಿಯವರದು ಮಾತು ಕಡಿಮೆ ಕೆಲಸ ಜಾಸ್ತಿ, ಇವರನ್ನು ಅರ್ಥ ಮಾಡಿಕೊಳ್ಳುವುದೇ ದೊಡ್ಡ ಕಷ್ಟದ ಮಾತು ಆದರೆ ಇವರು ಹೊಂದಿಕೊಳ್ಳು ಒಳ್ಳೆಯ ಪತಿ, ಅವರು ತಮ್ಮ ಸಂಗಾತಿಯನ್ನು ಉತ್ತಮ ರಿತಿಯಲ್ಲಿ ಅರ್ಥಮಾಡಿಕೊಂಡು ಅವರ ಸಂತೋಷಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.

ಮಕರ : ಮಕರ ರಾಶಿಯ ಯುವಕರು ನಿಮಗೆ ಅನುಮಾನ ಬರುವ ಹಾಗೆ ವರ್ತನೆ ಮಾಡಿದರು ತಾವು ಪ್ರೀತಿಸುವ ಸಂಗಾತಿಯನ್ನ ಕೊನೆಯ ವರೆಗೂ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಆದರೆ ಅವರು ಪ್ರೀತಿಸುವ ನಿಜವಾದ ಸಂಗಾತಿ ನಿವಾಗಿರಬೇಕು, ಈ ರಾಶಿಯ ವ್ಯಕ್ತಿಗಳು ಹೆಚ್ಚು ತಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತಾರೆ ಎನಿಸಿದರೂ ಪ್ರೀತಿಯ ವಿಷಯಕ್ಕೆ ಬಂದಾಗ ಅವರು ತಮ್ಮ ಸಂಗಾತಿಗೆ ಹೆಚ್ಚು ಪ್ರೀತಿ ನೀಡಲು ಇಷ್ಟಪಡುತ್ತಾರೆ.

ಕುಂಭ : ಕುಂಭ ರಾಶಿಯವರು ತುಂಬಾ ರೊಮ್ಯಾಂಟಿಕ್​ ವ್ಯಕ್ತಿತ್ವದವರು ಅವರಿಗೆ ತಮ್ಮ ಸಂಗಾತಿ ಬೇಸರದಿಂದಿರುವುದನ್ನು ಸಹಿಸಿಕೊಳ್ಳಲಾಗುವುದಿಲ್ಲ ಹಾಗಾಗಿ ಅವರ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ ಆದರೆ ಕೆಲವು ಬಾರಿ ಅವರು ಹೊರ ಜಗತ್ತಿನ ವಿಷಯದಲ್ಲಿ ಹೆಚ್ಚು ತೊಡಕಿಕೊಂಡುಬಿಡುತ್ತಾರೆ ಆಗ ತಮ್ಮ ಸಂಗಾತಿಯ ಕಡೆ ಗಮನ ನಿಡುವುದು ಕಡಿಮೆಯಾಗಬಹುದು ಹಾಗಾಗಿ ಈ ರಾಶಿಯ ವ್ಯಕ್ತಿಯನ್ನು ಪಡೆದ ಮಹಿಳೆ ಭಾವನಾತ್ಮಕವಾಗಿ ಗಟ್ಟಿಯಾಗಬೇಕಾಗುತ್ತದೆ.

Leave a Reply

Your email address will not be published. Required fields are marked *