ಜೀನ್ಸ್ ಪ್ಯಾಂಟ್ ಪ್ರಸ್ತುತ ದಿನಮಾನಗಳಲ್ಲಿ ಹೆಚ್ಚಾಗಿ ಜೀನ್ಸ್ ಪ್ಯಾಂಟ್ ದರಿಸುವವರನ್ನ ನಾವು ಕಾಣಬಹುದಾರಿಗೆ. ಇದು ಬಹಳ ಚಿರಪರಿಚಿತವಾದ ಉಡುಪು. ಇಂದಿನ ದಿನಗಳಲ್ಲಿ ಮಹಿಳೆಯರು ಪುರುಷರು ಎಂಬ ಭೇದವಿಲ್ಲದೆ ಪ್ರತಿಯೊಬ್ಬರು ಈ ಜೀನ್ಸ್ ಪ್ಯಾಂಟ್ ಅನ್ನು ಧರಿಸುತ್ತಾರೆ. ಕೆಲವರು ಫ್ಯಾಷನ್ ಗಾಗಿ ಧರಿಸಿದರೆ ಇನ್ನು ಕೆಲವರು ಕಂಫರ್ಟ್ ಗಾಗಿ ಧರಿಸುತ್ತಾರೆ.

ಸಾಮಾನ್ಯವಾಗಿ ಈ ಜೀನ್ಸ್ ಪ್ಯಾಂಟ್ ನಲ್ಲಿ ನಾವು ನಾಲ್ಕು ಜೇಬುಗಳನ್ನ ಕಾಣುತ್ತೇವೆ, ಹಿಂದೆ ಎರಡು ಮುಂದೆ ಎರಡು. ಅದರಲ್ಲೂ ವಿಶೇಷವಾಗಿ ಮುಂದಿನ ಎರಡು ದೊಡ್ಡ ಜೇಬುಗಳ ಜೊತೆಗೆ ಚಿಕ್ಕ ಜೇಬುಗಳನ್ನ ಸಹ ಕಾಣುತ್ತೇವೆ. ಆದರೆ ಇವುಗಳು ಇರುವುದು ಯಾಕೆ ಇದರ ಉದ್ದೇಶ ಏನು ಎಂಬುದು ಹಲವರಿಗೆ ತಿಳಿದಿಲ್ಲ.

ನಾವು 1800 ಇಸವಿಯಷ್ಟು ಹಿಂದಕ್ಕೆ ಹೋಗೋಣ, ಆ ಕಾಲದಲ್ಲಿ ಕೌಬಾಯ್ಸ್ ಸರಪಳಿಗೆ ಚಿಕ್ಕ ಗಡಿಯಾರವನ್ನು ಸೇರಿಸಿ ತಮ್ಮ ಕೋಟಿನಲ್ಲಿ ಇರಿಸಿಕೊಳ್ಳುತ್ತಿದ್ದರಂತೆ. ಪ್ರಪಂಚ ಸುತ್ತಾಡುವ ಇವರು ತಮ್ಮ ಗಡಿಯಾರ ಕೆಳಗೆಬಿದ್ದು ಒಡೆದು ಹೋಗದಿರಲೆಂದು ಈ ರೀತಿ ಜಾಗ್ರತೆ ವಹಿಸುತ್ತಿದ್ದರು. ಇದು ಇನ್ನಷ್ಟು ಸ್ಟೈಲಾಗಿ ಕಾಣುವಂತೆ ಮಾಡುವ ಸಲುವಾಗಿ “ಲೆವೀಸ್” ಕಂಪೆನಿಯ ಜೀನ್ಸ್ ಪ್ಯಾಂಟ್ ಗಳಿಗೆ ಈ ರೀತಿ ಚಿಕ್ಕ ಜೇಬನ್ನು ಒದಗಿಸಲು ಪ್ರಾರಂಭಿಸಿದರು. ಈ ರೀತಿಯ ಚಿಕ್ಕ ಜೇಬುಗಳನ್ನು ಮೊಟ್ಟ ಮೊದಲನೇ ಬಾರಿಗೆ 1897 ರಲ್ಲಿ ಲೆವೀಸ್ ಕಂಪನಿ ಈ ರೀತಿಯ ಜೀನ್ಸ್ ಪ್ಯಾಂಟ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿತು.

ಜೀನ್ಸ್ ಪ್ಯಾಂಟ್ ನ ಈ ಚಿಕ್ಕ ಜೇಬಿನಿಂದಾಗುವ ಪ್ರಯೋಜನಗಳು: ಈ ಜೇಬುಗಳನ್ನು ಕೇವಲ ಸ್ಟೈಲ್ ಗಾಗಿ ಮಾತ್ರವಲ್ಲದೆ, ಕೀ ಚೈನ್, ಸಣ್ಣ ಸರಪಳಿ ಹೊಂದಿರುವ ಗಡಿಯಾರಗಳನ್ನು ಇಡಬಹುದಾಗಿದೆ. ಇನ್ನೂ ನಾಣ್ಯಗಳು, ಬಸ್ಸು ಟಿಕೇಟ್, ಸಿನಿಮಾ ಟಿಕೇಟುಗಳು ಹಾಗು ಅಂಗಿ ಜೇಬುಗಳಿಂದ ಕೆಳಗೆ ಬೀಳಬಹುದಾದ ವಸ್ತುಗಳನ್ನು ಈ ಜೇಬುಗಳಲ್ಲಿ ಸುರಕ್ಷಿತವಾಗಿಡಬಹುದು. ಮಹಿಳೆಯರು ಲಿಪ್ ಬಾಮ್, ಲಿಪ್ ಸ್ಟಿಕ್, ಚಿಕ್ಕ ಬಾಚಣಿಗೆಗಳನ್ನ ಇಡಬಹುದು. ಕಾಂಡೋಮುಗಳು, ಚಾಕು, ಐ ಪಾಡ್, ಪೆನ್ ಡ್ರೈವ್ ಹೀಗೆ ಅತಿ ಚಿಕ್ಕ ವಸ್ತುಗಳನ್ನು ಅಂದರೆ, ಜೇಬಿನಿಂದ ಹೊರತೆಗೆಯುವಾಗ ಕೆಳಗೆ ಬೀಳುವಂತಹ ಚಿಕ್ಕ ಚಿಕ್ಕ ವಸ್ತುಗಳನ್ನ ಈ ಜೇಬಿನಲ್ಲಿ ಸುರಕ್ಷಿತವಾಗಿ ಇಡಬವಹುದು.
ಸಂಗ್ರಹ ಮಾಹಿತಿ

Leave a Reply

Your email address will not be published. Required fields are marked *