ನಿದ್ದೆ ಮಾಡುವಾಗ ಬಹುತೇಕರು ಗೊರಕೆ ಹೊಡೆಯುತ್ತಾರೆ. ಆದರೆ ಗೊರಕೆ ಉಸಿರಾಟದ ಸಮಸ್ಯೆಗಳೊಂದಿಗೆ ಸೇರಿಕೊಂಡಾಗ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು. ಉಸಿರಾಟದ ತೊಂದರೆಗಳನ್ನು ಉಂಟು ಮಾಡಬಹುದು. ಈ ಗೊರಕೆ ಸಮಸ್ಯೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳಿವೆ. ಅವು ಯಾವುವು ಎಂದು ತಿಳಿಯೋಣ.ದಿನವಿಡೀ ದುಡಿಯುವವರು ರಾತ್ರಿ ನೆಮ್ಮದಿಯಾಗಿ ನಿದ್ದೆ ಮಾಡಬೇಕೆಂದು ಬಯಸುತ್ತಾರೆ. ಆದರೆ, ಈ ನಿದ್ರೆಯನ್ನು ಕೆಡಿಸುವ ಮುಖ್ಯ ಅಂಶವೆಂದರೆ ಇತರರ ಗೊರಕೆಯ ಶಬ್ದ. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಗೊರಕೆಯ ಸಮಸ್ಯೆ ಇದ್ದರೆ, ಅನೇಕರು ಅವರ ಪಕ್ಕದಲ್ಲಿ ಮಲಗಲು ಹಿಂಜರಿಯುತ್ತಾರೆ.

ಇತರರ ಕಿರಿಕಿರಿಯನ್ನು ಬದಿಗಿಟ್ಟು ನೋಡುವುದಾದರೆ ಗೊರಕೆ ಅನೇಕ ಕಾಯಿಲೆಗಳ ಲಕ್ಷಣವಾಗಿದೆ. ಗೊರಕೆ, ಉಸಿರಾಟದ ಸಮಸ್ಯೆಗಳೊಂದಿಗೆ ಸೇರಿಕೊಂಡಾಗ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಇದು ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಕಾರಣವಾಗಬಹುದು. ಈ ಗೊರಕೆ ಸಮಸ್ಯೆಯನ್ನು ನಿವಾರಿಸಲು ಕೆಲವು ಮನೆಮದ್ದುಗಳಿವೆ. ಅವು ಯಾವುವು ಎಂದು ತಿಳಿಯೋಣ. ಸೋಯಾ ಹಾಲು ಗೊರಕೆಯ ಸಮಸ್ಯೆ ಇರುವವರು ಹಸುವಿನ ಹಾಲು ಕುಡಿಯುವ ಬದಲು ಸೋಯಾ ಹಾಲನ್ನು ಕುಡಿಯುವುದು ಉತ್ತಮ. ಹಸುವಿನ ಹಾಲಿನಲ್ಲಿರುವ ಕೆಲವು ಪ್ರೋಟೀನ್ಗಳು ಅಲರ್ಜಿಯನ್ನು ಉಂಟುಮಾಡಬಹುದು. ಮೂಗಿನ ಮಾರ್ಗಗಳನ್ನು ಮುಚ್ಚುವುದು, ಗೊರಕೆಯನ್ನು ಹೆಚ್ಚಿಸುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗಬಹುದು.

ಶುಂಠಿ ಮತ್ತು ಜೇನುತುಪ್ಪ ಶುಂಠಿ ಮತ್ತು ಜೇನುತುಪ್ಪದ ಮಿಶ್ರಣವು ಅನೇಕ ಸಮಸ್ಯೆಗಳಿಗೆ ಅತ್ಯುತ್ತಮ ಪರಿಹಾರವನ್ನು ನೀಡುತ್ತದೆ. ಇದು ಲಾಲಾರಸ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ, ಗಂಟಲನ್ನು ಮೃದುಗೊಳಿಸುತ್ತದೆ. ಇದು ಗೊರಕೆಯಿಂದ ಪರಿಹಾರವನ್ನು ನೀಡುತ್ತದೆ. ಆದ್ದರಿಂದ ನೀವು ಪ್ರತಿದಿನ ಸ್ವಲ್ಪ ಶುಂಠಿ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸುತ್ತಾ ಬನ್ನಿ. ಹಣ್ಣುಗಳು ದೇಹದಲ್ಲಿ ಮೆಲಟೋನಿನ್ ಮಟ್ಟವನ್ನು ಹೆಚ್ಚಿಸುವುದರಿಂದ ಗೊರಕೆಯ ಸಮಸ್ಯೆಯನ್ನು ಬಹಳವಾಗಿ ಕಡಿಮೆ ಮಾಡಬಹುದು. ಮೆಲಟೋನಿನ್ ಒಂದು ಹಾರ್ಮೋನ್ ಆಗಿದ್ದು ಅದು ನಿದ್ರೆಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ಅನಾನಸ್, ಬಾಳೆಹಣ್ಣು ಮತ್ತು ಕಿತ್ತಳೆಯಂತಹ ಹಣ್ಣುಗಳಲ್ಲಿ ಮೆಲಟೋನಿನ್ ಅಧಿಕವಾಗಿರುತ್ತದೆ. ಇವುಗಳನ್ನು ತಿನ್ನುವುದರಿಂದ ದೇಹದಲ್ಲಿ ಮೆಲಟೋನಿನ್ ಮಟ್ಟ ಹೆಚ್ಚುತ್ತದೆ. ಆಲಿವ್ ಎಣ್ಣೆ ರಾತ್ರಿ ಮಲಗುವ ಮುನ್ನ ಅರ್ಧ ಚಮಚ ಆಲಿವ್ ಎಣ್ಣೆ ಮತ್ತು ಜೇನುತುಪ್ಪವನ್ನು ಸೇವಿಸುವುದು ಗೊರಕೆಯ ಸಮಸ್ಯೆಗೆ ಪರಿಪೂರ್ಣ ಪರಿಹಾರವಾಗಿದೆ. ಇದು ಗಂಟಲಿನಲ್ಲಿ ಕಂಪನಗಳನ್ನು ಕಡಿಮೆ ಮಾಡುತ್ತದೆ ಮತ್ತು ಗೊರಕೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *