ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತ್ತು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ ರೈತ ಸಮುದಾಯಗಳಿಗೆ ಕೃಷಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸುವ ದೃಷ್ಟಿಯಿಂದ ಗಂಗಾ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿ ನಿಗಮ, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಮತ್ತು ಅಲ್ಪಸಂಖ್ಯಾತರ ಇಲಾಖೆಗಳ ನಿಗಮವದ ಸಹಕಾರದ ವತಿಯಿಂದ ಈ ಯೋಜನೆಯ ಫಲಾನುಭಿವಗಳನ್ನು ಗುರುತಿಸಲಾಗಿದ್ದು ಅವರಿಗೆ ಬೋರ್ ವೆಲ್ ಗಳಿಗೆ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಬೋರ್ ವೆಲ್ ಗಳಿಗೆ ನೀಡಲಾಗುವ ವಿದ್ಯುತ್ ಗೆ ಸಂಬಂಧಿಸಿದಂತೆ ವಿದ್ಯುತ್ ಕಂಪನಿಗಳಲ್ಲಿ ಮತ್ತು ನೊಂದಾಯಿಸಿ ನಂತರ ಉಚಿತವಾಗಿ ಬೋರ್ ವೆಲ್ ಗಳಿಗೆ ವಿದ್ಯುತ್ ನೀಡುವ ವ್ಯವಸ್ಥೆಯು ಜಾರಿಯಲ್ಲಿದೆ.

ವೈಯಕ್ತಿಕ ನೀರಾವರಿ ಬೋರ್ ವೆಲ್ ಯೋಜನೆ: 1 ಎಕರೆಗಿಂತ ಹೆಚ್ಚಿನ ಜಮೀನನ್ನು ಹೊಂದಿರುವ ಉಡುಪಿ, ಕೊಡಗು, ದಕ್ಷಿಣ ಕನ್ನಡ, ಚಿಕ್ಕ ಮಗಳೂರು, ಹಾಸನ, ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಮತ್ತು ಹಿಂದುಳಿದ ಹಾಗೂ ಅಲ್ಪ ಸಂಖ್ಯಾತ ಸಮುದಾಯಗಳ ಜಮೀನಿನಲ್ಲಿ ಭೂಗರ್ಭ ಶಾಸ್ತ್ರಜ್ಞರ ನೆರವಿನಿಂದ ಬೋರ್ ವೆಲ್ ಬಿಂದುವನ್ನು ಗುರುತಿಸಲು ಆದೇಶ ಹೊರಡಿಸಿದ್ದು ಇತರೆ ಜಿಲ್ಲೆಗಳಲ್ಲಿ 2 ರಿಂದ 5 ಎಕರೆ ಜಮೀನುಗಳಿಗೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬೋರ್ ವೆಲ್ ನ ವೆಚ್ಚವು ಅಂದಾಜು 3 ಲಕ್ಷ ರೂಪಾಯಿಗಳಷ್ಟಿದ್ದು ಸರ್ಕಾರವು ರೈತರಿಗೆ 2.50 ಲಕ್ಷ ಸಬ್ಸಿಡಿ ನೀಡುತ್ತಿದ್ದು ಉಳಿಕೆ 50,000 ರೂಪಾಯಿಗೆ ವಾರ್ಷಿಕ 4% ದರದಲ್ಲಿ ಸಾಲ ಸೌಲಭ್ಯವನ್ನು ಕಲ್ಪಿಸಿದ್ದು 3 ವರ್ಷಗಳ ಮರುಪಾವತಿ ಕಾಲಾವಕಾಶವನ್ನು ನಿಗದಿ ಮಾಡಿದೆ.

ಸಮುದಾಯ ನೀರಾವರಿ ಬೋರ್ ವೆಲ್ ಯೋಜನೆ: ಈ ಯೋಜನೆಯಡಿಯಲ್ಲಿ ಅಕ್ಕ ಪಕ್ಕಕ್ಕೆ ಹೊಂದಿಕೊಂಡಂತೆ ಇರುವ ಒಟ್ಟು 8 ಎಕರೆ ಕೃಷಿ ಜಮೀನನ್ನು ಹೊಂದಿದ ಮೂವರು ರೈತರಿಗೆ 4 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಟ್ಟು ಎರಡು ಬೋರ್ ವೆಲ್ ಗಳನ್ನು ನೀಡಲಾಗುತ್ತಿದ್ದು, ಒಟ್ಟು 8 ರಿಂದ 15 ಎಕರೆ ಜಮಿನನ್ನು ಹೊಂದಿದ ರೈತರಿಗೆ 6 ಲಕ್ಷ ರೂಪಾಯಿಗಳಿಗೆ 3 ಬೋರ್ ವೆಲ್ ಗಳನ್ನು ನೀಡಲಾಗುತ್ತಿದೆ. ಯಶಸ್ವಿಯಾದ ಬೋರ್ ವೆಲ್ ಗಳಿಗೆ ಇತರೆ ಬಿಡಿ ಭಾಗಗಳೊಂದಿಗೆ ವಿದ್ಯುತ್ತನ್ನೂ ಸಹ ನೀಡಲಾಗುತ್ತಿದೆ.

ಏತ ನೀರಾವರಿ ಯೋಜನೆ: ಸರ್ಕಾರದ ವತಿಯಿಂದ ಸಾಕಷ್ಟು ಸಬ್ಸಿಡಿಯನ್ನು ನೀಡಲಾಗುತ್ತಿದ್ದು ನೀರಾವರಿ ಸೌಲಭ್ಯಗಳಿಗೆ ಸಾಕಷ್ಟು ರೀತಿಯಲ್ಲಿ ಸಹಕಾರಿಯಾಗುತ್ತಿದೆ. ಈ ಯೋಜನೆಯಡಿಯಲ್ಲಿ ಅಕ್ಕ ಪಕ್ಕಕ್ಕೆ ಹೊಂದಿಕೊಂಡಂತೆ ಇರುವ ಒಟ್ಟು 8 ಎಕರೆ ಕೃಷಿ ಜಮೀನನ್ನು ಹೊಂದಿದ ಮೂವರು ರೈತರಿಗೆ 4 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಒಟ್ಟು ಎರಡು ಬೋರ್ ವೆಲ್ ಗಳನ್ನು ನೀಡಲಾಗುತ್ತಿದ್ದು, ಒಟ್ಟು 8 ರಿಂದ 15 ಎಕರೆ ಜಮಿನನ್ನು ಹೊಂದಿದ ರೈತರಿಗೆ 6 ಲಕ್ಷ ರೂಪಾಯಿಗಳಿಗೆ 3 ಬೋರ್ ವೆಲ್ ಗಳನ್ನು ನೀಡಲಾಗುತ್ತಿದೆ. ಯಶಸ್ವಿಯಾದ ಬೋರ್ ವೆಲ್ ಗಳಿಗೆ ಇತರೆ ಬಿಡಿ ಭಾಗಗಳೊಂದಿಗೆ ವಿದ್ಯುತ್ತನ್ನೂ ಸಹ ನೀಡಲಾಗುತ್ತಿದೆ.

ಅರ್ಹತೆಗಳು: ಸಣ್ಣ ಮತ್ತು ಕೆಳ ಹಂತದ ರೈತರು ಕಳೆದ 15 ವರ್ಷಗಳಿಂದ ಕರ್ನಾಟಕದಲ್ಲಿ ವಾಸಿಸುತ್ತಿರುವ ನಿವಾಸಿಗಳು ಕಡ್ಡಾಯವಾಗಿ ಪರಿಶಿಷ್ಟ ಜಾತಿ/ಪಂಗಡ ಅಥವಾ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿರಬೇಕು ಕುಟುಂಬದ ವಾರ್ಷಿಕ ಆದಾಯವು ಗರಿಷ್ಠ 22,000 ಕ್ಕಿಂತ ಕಡಿಮೆ ಇರಬೇಕು.

ಇಲ್ಲಿಯ ವರೆಗೂ ಈ ಯೋಜನೆಯಿಂದಾಗಿ 20,107 ರೈತರ ಒಟ್ಟು 50, 267 ಎಕರೆ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯವು ದೊರೆತಿದ್ದು 284 ಕೋಟಿ ರೂಪಾಯಿಗಳ ವೆಚ್ಚದಲ್ಲಿ 58,145 ಬೋರ್ ವೆಲ್ ಗಳನ್ನು ಒದಗಿಸಿದ್ದು ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಅವುಗಳಿಗೆ ಬಿಡಿ ಭಾಗಗಳು ಮತ್ತು ವಿದ್ಯುತ್ ಸಂಪರ್ಕ ಸೌಲಭ್ಯವನ್ನೂ ಸಹ ನೀಡಲಾಗಿದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ

Leave a Reply

Your email address will not be published. Required fields are marked *