ಬೆಳ್ಳೆಗ್ಗೆ ಖಾಲಿ ಹೊಟ್ಟೆಯಲ್ಲಿ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಆಗುವ ಉಪಯೋಗಗಳು ಮೂಲವ್ಯಾಧಿ, ಮಲಬದ್ಧತೆ, ಕಿವಿನೋವು, ರಕ್ತದೊತ್ತಡ ಇತ್ಯಾದಿ ಅನೇಕ ಕಾಯಿಲೆಗಳಿಗೆ ಇದು ರಾಮಬಾಣ.

ಹಸಿವನ್ನು ಹೆಚ್ಚಿಸುವ ಕೆಲಸವನ್ನೂ ಇದು ಮಾಡುತ್ತದೆ. ಬೆಳ್ಳೆಗ್ಗೆ ಬೆಳ್ಳುಳ್ಳಿ ಸೇವಿಸಿದ ಒಂದು ಗಂಟೆಯಲ್ಲಿ ಜೀರ್ಣವಾಗಿ ಅದು ಆರೋಗ್ಯ ವೃದ್ಧಿ ಕೆಲಸ ಮಾಡಲು ಶುರುವಾಗುತ್ತದೆ. ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶರೀರದಲ್ಲಿರುವ ವಿಷ ಪದಾರ್ಥವನ್ನು ಮಲ ಹಾಗೂ ಮೂತ್ರದ ಮೂಲಕ ಹೊರ ಹಾಕುತ್ತದೆ.
ದೇಹದ ಆಲಸ್ಯ ಕಡಿಮೆ ಮಾಡಿ ಶರೀರಕ್ಕೊಂದು ವಿಶೇಷ ಶಕ್ತಿ ಕೊಡುತ್ತದೆ. ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಕ್ಯಾನ್ಸರ್ ಕೋಶಗಳು ಶಕ್ತಿ ಕಳೆದುಕೊಳ್ಳುತ್ತವೆ.

ಪ್ರತಿದಿನ ಹುರಿದ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಲಭವಾಗಿ ದೇಹದ ಬೊಜ್ಜು ಕರಗಿಸುವಲ್ಲಿ ಸಹಾಯ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಶ್ವಾಸನಾಳಕ್ಕೆ ಬಹಳ ಪ್ರಯೋಜನಕಾರಿಯಾಗಿದೆ.

ಅಸ್ತಮಾ, ಕೆಮ್ಮು, ಕಫ ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಯ ಪ್ರಕಾರ ಪ್ರತಿದಿನ 5-6 ಬೆಳ್ಳುಳ್ಳಿ ಮೊಗ್ಗನ್ನು ತಿನ್ನುವ ವ್ಯಕ್ತಿಗೆ ಕೆಲವೇ ಗಂಟೆಗಳಲ್ಲಿ ಅದರ ಪರಿಣಾಮ ಕಾಣುತ್ತದೆ. ಕೇವಲ ಬೆಳ್ಳುಳ್ಳಿ ಸೇವನೆಯಿಂದ ಅಷ್ಟೇ ಅಲ್ಲ, ಬೆಳ್ಳುಳ್ಳಿಯನ್ನು ಅರೆದು ಚೇಳು ಕುಟುಕಿದ ಜಾಗಕ್ಕೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

Leave a Reply

Your email address will not be published. Required fields are marked *