ದಾಳಿಂಬೆಯನ್ನು ಸೇವನೆ ಮಾಡುವುದು ನಮ್ಮ ದೇಹಕ್ಕೆ ತುಂಬಾ ಲಾಭದಾಯಕ ಯಾಕೆಂದರೆ ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ವಿಟಮಿನ್ ಎ ಮತ್ತು ಪಾಲಿ ಕಾಸಿದ್ ಗುಣ ಇರುತ್ತೆ ಇದು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ ನಾವು ಸುಂದರವಾಗಿರಲು ಕೂಡ ಸಹಾಯ ಮಾಡುತ್ತದೆ. ದಾಳಿಂಬೆ ಹಣ್ಣು ಯಾವುದಾದರೂ ಒಂದು ರೀತಿಯಲ್ಲಿ ನಮಗೆ ಉಪಯೋಗವಾಗಿರುತ್ತೆ ಒಂದು ಮಾತಿದೆ ಒಂದು ದಾಳಿಂಬೆ ನೂರು ರೋಗಗಳಿಗೆ ಔಷಧಿ ಅಂತ.

ಒಂದು ವೇಳೆ ನೀವು ಒಂದು ವಾರದ ತನಕ ಪ್ರತಿದಿನ ದಾಳಿಂಬೆಯನ್ನು ಅಥವಾ ದಾಳಿಂಬೆ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ಯಾವ ರೀತಿ ಪ್ರಯೋಜನವಿದೆ ಎಂದು ಈಗ ನಿಮಗೆ ಹೇಳುತ್ತೇವೆ ನೋಡಿ. ಒಂದು ವೇಳೆ ಸಾಮಾನ್ಯ ತೂಕಕ್ಕಿಂತ ಹೆಚ್ಚು ತೂಕ ಇಲ್ಲದವರಿಗೆ ಇದು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಮಾಡುತ್ತದೆ. ಹೆಚ್ಚು ಬೊಜ್ಜು ಇದ್ದವರು ಸಹ ದಾಳಿಂಬೆ ಹಣ್ಣಿನ ಸೇವಿಸಿ ಬೊಜ್ಜನ್ನ ಕಡಿಮೆ ಮಾಡಿಕೊಳ್ಳಬಹುದು. ಮಧುಮೇಹ ಕಾಯಿಲೆ ಇರುವವರು ಇದನ್ನು ಸೇವಿಸಬಹುದು ಇದು ಸಿಹಿಯಾದರು ದಾಳಿಂಬೆಯಲ್ಲಿ ಪ್ರೊಟೀನ್ ಇರುವ ಕಾರಣ ಇದನ್ನ ತಿಂದರೆ ದೇಹದಲ್ಲಿ ಸಕ್ಕರೆ ಪ್ರಮಾಣವನ್ನು ಹೆಚ್ಚಲು ಬಿಡುವುದಿಲ್ಲ.

ದಾಳಿಂಬೆಯಲ್ಲಿ ಹಲವು ಆಂಟಿ ಆಕ್ಸಿಡೆಂಟುಗಳು ಹೇರಳವಾಗಿರುವುದರಿಂದ ದೇಹ ಕ್ಯಾನ್ಸರ್ ರೋಗವನ್ನು ಎದುರಿಸಲು ಹೆಚ್ಚು ಶಕ್ತಿ ಪಡೆಯುತ್ತದೆ. ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಕ್ಯಾನ್ಸರ್ ಇದ್ದರೆ ಅಥವಾ ಕ್ಯಾನ್ಸರ್ ಲಕ್ಷಣಗಳು ಗೋಚರಿಸುತ್ತಿದ್ದರೆ ದಾಳಿಂಬೆಯ ನಿಯಮಿತ ಸೇವನೆ ಕ್ಯಾನ್ಸರ್ ನ ಆಗಮನವನ್ನು ದೂರವಿಡುತ್ತದೆ. ಹೃದಯದ ಸಂಬಂಧಿ ರೋಗಿಗಳಿಗೆ ದಾಳಿಂಬೆಯನ್ನು ತಿನ್ನಲೇಬೇಕು ಯಾಕೆಂದರೆ ಇದರಿಂದ ದೇಹದ ರಕ್ತ ಸಂಚಾರ ಸರಿಯಾಗಿರುತ್ತದೆ ಹೃದಯಕಾತ ಸಂಭವಿಸುವುದಿಲ್ಲ ಮತ್ತು ಇದು ದೇಹದ ಕೊಲೆಸ್ಟ್ರಾಲನ್ನು ಕಡಿಮೆ ಮಾಡಿ ರಕ್ತವನ್ನು ಶುದ್ದಿಗೊಳಿಸುತ್ತದೆ.ದಾಳಿಂಬೆ ಹಣ್ಣಿನಲ್ಲಿ ಸುಲಭವಾಗಿ ಕರಗದ ನಾರಿನಂಶವಿರುವ ಕಾರಣ ಕರುಳಿನಲ್ಲಿ ಪಚನಕ್ರಿಯೆಯ ನಂತರ ತ್ಯಾಜ್ಯಗಳೊಂದಿಗೆ ಸುಲಭವಾಗಿ ಮಿಳಿತಗೊಂಡು ಸುಖವಿಸರ್ಜನೆಗೆ ಸಹಾಯ ಮಾಡುತ್ತದೆ.

ಈ ನಾರು ದಾಳಿಂಬೆ ಕಾಳಿನ ಒಳಗಿನ ಬೀಜದಲ್ಲಿ ಶೇಖರವಾಗಿದ್ದು ಪ್ರತಿದಿನದ ಬಹಿರ್ದೆಶೆಗೆ ನೆರವಾಗುತ್ತದೆ.ದಾಳಿಂಬೆಯಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಶಾರೀರಿಕ ಆರೋಗ್ಯದ ಜೊತೆಗೆ ಚರ್ಮದ ಕಾಂತಿಯನ್ನೂ ಹೆಚ್ಚಿಸುವ ಕಾರಣ ವೃದ್ಧಾಪ್ಯದ ಚಿಹ್ನೆಗಳು ಬೇಗನೇ ಆವರಿಸದು. ನಮ್ಮ ಚರ್ಮ ಕೊಲಾಜೆನ್ ಮತ್ತು ಎಲಾಸ್ಟಿಕ್ ನಾರುಗಳಿಂದ ಮಾಡಲ್ಪಟ್ಟಿದೆ .ಈ ಕೊಲಾಜೆನ್ ಸುಸ್ಥಿತಿಯಲ್ಲಿಡಲು ವಿಟಮಿನ್ ಸಿ ಅಗತ್ಯ. ದಾಳಿಂಬೆಯಲ್ಲಿ ಸಮ ಪ್ರಮಾಣದಲ್ಲಿರುವ ವಿಟಮಿನ್ ಸಿ ಚರ್ಮದ ಆರೈಕೆ ಮತ್ತು ರಕ್ಷಣೆಗೆ ಕಾರಣವಾಗಿದೆ.

ವಿಟಮಿನ್ ಸಿ ನ ಇನ್ನೊಂದು ಉಪಯೋಗವೆಂದರೆ ರೋಗ ನಿರೋಧಕ ಶಕ್ತಿಯನ್ನು ಉತ್ತಮಪಡಿಸುವುದು. ಮಳೆಗಾಲದಲ್ಲಿ ಗಾಳಿ, ನೀರಿನ ಮೂಲಕ ದೇಹಕ್ಕೆ ಧಾಳಿಯಿಡುವ ಹಲವು ಕ್ರಿಮಿಗಳನ್ನು ಎದುರಿಸಲು ದೇಹವನ್ನು ಸದೃಢಗೊಳಿಸಲು ದಾಳಿಂಬೆಯಲ್ಲಿ ಹೇರಳವಾಗಿರುವ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟುಗಳು ನೆರವಾಗುತ್ತವೆ.

Leave a Reply

Your email address will not be published. Required fields are marked *