ಕೆಂಪು ಅಕ್ಕಿಯನ್ನು ಬಿಳಿ ಅಕ್ಕಿಯಂತೆ ಬಳಸಬಹುದು. ಅದನ್ನು ಬಳಸುವ ಮುನ್ನ ಮೂರು ಬಾರಿ ನೀರಿನಲ್ಲಿ ತೊಳೆದು ಬಳಸಬೇಕು. ಕೆಂಪು ಅಕ್ಕಿಯನ್ನು ಬಿಳಿ ಅಕ್ಕಿಯ ಬಳಕೆಗೆ ಬದಲಾಗಿ ಬಳಸಬಹುದು. ಮಧುಮೇಹ ಮತ್ತುಡಯಾಬಿಟಿಸ್ ಇರುವವರಿಗೆ ಇದು ತುಂಬಾ ಮುಖ್ಯ ಯಾವ ಆಹಾರ ತಿನ್ನಬೇಕು ಯಾವ ಪ್ರಮಾಣದಲ್ಲಿ ತಿನ್ನಬೇಕು ಮತ್ತು ಎಷ್ಟು ಹೊತ್ತಿಗೆ ತಿನ್ನಬೇಕು ಇವೆಲ್ಲವೂ ಮುಖ್ಯವಾಗುತ್ತವೆ. ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರು ಅನ್ನವನ್ನು ಹೆಚ್ಚು ತಿನ್ನಬಾರದು ಎಂದು ಹೇಳುತ್ತಾರೆ ಅನ್ನ ತಿಂದರೆ ಸಕ್ಕರೆ ಕಾಯಿಲೆ ಮತ್ತಷ್ಟು ನಿಯಂತ್ರಣ ತಪ್ಪಲು ಮಾತು ಇದೆ.

ಆದರೆ ಇದು ನಿಜಾನಾ ಸಾಮಾನ್ಯವಾಗಿ ನಾವು ಮನೆಯಲ್ಲಿ ತಯಾರು ಮಾಡುವ ಅನ್ನ ಬೆಳ್ಳಗೆ ಇರುತ್ತದೆ ಅಂದರೆ ಅದು ಬಿಳಿ ಬಣ್ಣದ ಅಕ್ಕಿ ಇಂದ ತಯಾರು ಮಾಡಿರುವ ಅನ್ನವಾಗಿರುತ್ತದೆ ಇದು ದೇಹದ ಬ್ಲಡ್ ಶುಗರ್ ಹೆಚ್ಚು ಮಾಡುತ್ತದೆ ಎಂದರೆ ಕೆಂಪು ಅಥವಾ ಕಂದು ಬಣ್ಣದ ಅಕ್ಕಿ ಹೇಗೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಯಾಕೆಂದರೆ ಎಲ್ಲಾ ಅಕ್ಕಿ ಒಂದೇ ರೀತಿ ಇರುವುದಿಲ್ಲ

ಅದರಂತೆ ಅವುಗಳ ಗುಣಲಕ್ಷಣಗಳು ಕೂಡ ಒಂದೇ ಆಗಿರುವುದಿಲ್ಲ ಹಾಗಾದರೆ ಕೆಂಪು ಅಕ್ಕಿಯ ಆರೋಗ್ಯದ ಗುಣಲಕ್ಷಣಗಳ ಬಗ್ಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ. ಸಕ್ಕರೆ ಕಾಯಿಲೆ ಇರುವವರು ಯಾವ ಆಹಾರ ತಿನ್ನುತ್ತಾರೆ ಎಂಬುದು ಬಹಳ ಮುಖ್ಯವಾಗುತ್ತದೆ ಏಕೆಂದರೆ ಕೆಲವೊಂದು ಆಹಾರಗಳು ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚು ಮಾಡಬಲ್ಲ ಗುಣವನ್ನು ಹೊಂದಿರುತ್ತವೆ, ಅದೇ ರೀತಿ ಯಾವ ಆಹಾರಗಳು ದೇಹದಲ್ಲಿ ಬಹಳ ಬೇಗನೆಜೀರ್ಣವಾಗುತ್ತದೆ ಅವುಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಇದ್ದಕ್ಕಿದ್ದಂತೆ ಹೆಚ್ಚು ಮಾಡುವ ಸಾಧ್ಯತೆ ದಟ್ಟವಾಗಿರುತ್ತದೆ.

ಹಾಗೆ ನಿಧಾನವಾಗಿ ಜೀರ್ಣವಾಗುವ ಆಹಾರಗಳು ಕಡಿಮೆ ಪ್ರಮಾಣದಲ್ಲಿ ತುಂಬಾ ನಿಧಾನವಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಮಾಡಬಲ್ಲವೂ. ಈ ಗುಂಪಿಗೆ ಕಂದು ಬಣ್ಣದ ಅಕ್ಕಿ ಮತ್ತು ಕೆಂಪು ಅಕ್ಕಿ ಸೇರುತ್ತವೆ.ಮಧುಮೇಹ ಹೊಂದಿರುವ ರೋಗಿಗಳು ಅನ್ನವನ್ನು ಹೆಚ್ಚು ಸೇವಿಸಬಾರದು. ಕೆಂಪು ಅಕ್ಕಿಯಲ್ಲಿ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಇರುವುದರಿಂದ ಮಧುಮೇಹಿಗಳು ಮಿತವಾಗಿ ಸೇವಿಸಬಹುದು.

ಇದರಲ್ಲಿ ನಾರಿನಂಶ ಸಮೃದ್ಧವಾಗಿರುವುದರಿಂದ ಜೀರ್ಣ ಕ್ರಿಯೆ ಅಥವಾ ಚಯಾಪಚಯ ಕ್ರಿಯೆಯು ಉತ್ತಮವಾಗಿ ನಡೆಯುವುದು.ಕೆಲವು ಅಧ್ಯಯನಗಳು ಹೇಳುವ ಪ್ರಕಾರ ಕೆಂಪು ಅಕ್ಕಿಯಲ್ಲಿ ಮೆಗ್ನೀಸಿಯಮ್ ಪ್ರಮಾಣ ಅಧಿಕವಾಗಿರುತ್ತದೆ. ಇದು ಆಮ್ಲಜನಕದ ಮಟ್ಟವನ್ನು ಹೆಚ್ಚಿಸುವುದು ಹಾಗೂ ಒಟ್ಟಾರೆ ಉಸಿರಾಟದ ವ್ಯವಸ್ಥೆಯನ್ನು ಸುಧಾರಿಸುವುದು. ಇದರ ನಿಯಮಿತವಾದ ಸೇವನೆಯು ಅಸ್ತಮ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುವುದು.

Leave a Reply

Your email address will not be published. Required fields are marked *