ಇಷ್ಟೊಂದು ಪ್ರಯೋಜನಗಳು ಕಬ್ಬಿನ ಹಾಲಿನಲ್ಲಿ ಸಿಗಬೇಕಾದರೆ ವರ್ಷದ ಎಲ್ಲಾ ದಿನಗಳಲ್ಲಿ ಇದನ್ನು ಸೇವಿಸಬಹುದು.ಬೇಸಿಗೆ ಕಾಲದಲ್ಲಿ ನಾವು ಎಲ್ಲಾದರೂ ಹೊರಗಡೆ ಹೋದಾಗ ಎದುರಾಗುವ ವಿಪರೀತ ಶಕೆ ಹಾಗೂ ಬೆವರಿನ ಕಾರಣದಿಂದ ದೇಹಕ್ಕೆ ತಂಪಾದ ಮತ್ತು ಆರೋಗ್ಯಕರವಾದ ಯಾವುದಾದರೂ ಪಾನೀಯವನ್ನು ಕುಡಿಯಬೇಕು ಎಂದು ಮನಸ್ಸಿಗೆ ಬಂದರೆ ಅದು ಎಳನೀರು ಅಥವಾ ಕಬ್ಬಿನ ರಸವೇ ಆಗಿರುತ್ತದೆ. ಬೇಕೆಂದ ಕಡೆಗಳಲ್ಲಿ ಎಳನೀರು ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆದರೆ ಕಬ್ಬಿನಹಾಲು ಮಾತ್ರ ಬಹುತೇಕ ಕಡೆ ರಸ್ತೆ ಬದಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಕಬ್ಬಿನ ಹಾಲಿಗೆ ಎರಡು ಬಗೆಯ ಗುಣಲಕ್ಷಣಗಳಿವೆ. ಬೇಸಿಗೆ ಕಾಲದಲ್ಲಿ ಇದನ್ನು ಕುಡಿದರೆ ನಮ್ಮ ದೇಹ ತಂಪಾಗುತ್ತದೆ. ಅದೇ ರೀತಿ ಮಳೆಗಾಲದಲ್ಲಿ ಸೇವನೆ ಮಾಡಿದರೆ ನಮ್ಮ ದೇಹ ಬಿಸಿಯಾಗುತ್ತದೆ. ಒಟ್ಟಿನಲ್ಲಿ ನಮ್ಮ ದೇಹದ ತಾಪಮಾನವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಗುಣಲಕ್ಷಣ ಕಬ್ಬಿನ ಹಾಲಿನಲ್ಲಿ ಕಂಡುಬರುತ್ತದೆ.

ಇದರಲ್ಲಿ ಅನೇಕ ಬಗೆಯ ಪೌಷ್ಠಿಕಾಂಶಗಳು ಸಿಗುವ ಹೊರತಾಗಿಯೂ ನಮ್ಮ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ಗುಣಲಕ್ಷಣ ಇದೆ. ಕಾಮಾಲೆ ರೋಗದಿಂದ ಬಳಲುತ್ತಿರುವವರಿಗೆ ಮತ್ತು ರಕ್ತಹೀನತೆ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಇದು ಪರಿಹಾರ ಒದಗಿಸುತ್ತದೆ ಎನ್ನುವುದು ಒಂದು ಉದಾಹರಣೆ ಆಗಿದೆ.ಕಬ್ಬಿನ ಹಾಲು ಸೇವನೆ ಮಾಡಲು ಎಷ್ಟು ರುಚಿಕರವೂ ಅಷ್ಟೇ ಆರೋಗ್ಯಕರ. ಇದರಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣ ಲಕ್ಷಣ ಕಂಡು ಬರುತ್ತದೆ. ಅಷ್ಟೇ ಅಲ್ಲದೆ ಇದರಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿಗಳು ಇರುವ ಕಾರಣ ದೇಹದ ತೂಕ ನಿರ್ವಹಣೆ ಮಾಡುವಲ್ಲಿ ಸಹಕಾರಿಯಾಗಿರುತ್ತದೆ. ಇಷ್ಟೇ ಅಲ್ಲದೆ ಇದರಲ್ಲಿ ಅಪಾರ ಪ್ರಮಾಣದ ಇನ್ನಿತರ ಆರೋಗ್ಯ ಪ್ರಯೋಜನಗಳು ಕೂಡ ಸಿಗುತ್ತದೆ. ಈಗ ಅವುಗಳನ್ನು ಒಂದೊಂದಾಗಿ ನೋಡೋಣ ಬನ್ನಿ ಫ್ರೆಂಡ್ಸ್.

ಮೊದಲೇ ಹೇಳಿದಂತೆ ಜಾಂಡಿಸ್ ಸಮಸ್ಯೆ ಹೊಂದಿದವರಿಗೆ ಕಬ್ಬಿನ ಹಾಲು ಬಲು ಪ್ರಯೋಜನಕಾರಿ ಎಂದು ತಿಳಿದು ಬಂದಿದೆ. ಏಕೆಂದರೆ ಜಾಂಡೀಸ್ ಬಂದಂತಹ ಸಂದರ್ಭದಲ್ಲಿ ವೈದ್ಯರು ಕೂಡ ಇದನ್ನು ಕುಡಿಯಲು ಸಲಹೆ ನೀಡುತ್ತಾರೆ. ಕಬ್ಬಿನ ರಸದಲ್ಲಿ ಕರಗುವ ನಾರುಗಳು ಹೆಚ್ಚಿನ ಪ್ರಮಾಣದಲ್ಲಿವೆ ಹಾಗೂ ಇವು ಕರುಳಿನ ಒಳಗೆ ಆಹಾರದ ಚಲನೆ ಸುಲಭವಾಗಿಸಲು ಸಹಾಯ ಮಾಡುತ್ತವೆ. ತನ್ಮೂಲಕ ಮಲಬದ್ಧತೆ, ಹೊಟ್ಟೆಯುಬ್ಬರಿಕೆ ಮತ್ತು ಹೊಟ್ಟೆಯ ಸೆಡೆತ ಎದುರಾಗದೇ ಇರಲು ನೆರವಾಗುತ್ತದೆ. ಜೀರ್ಣಕ್ರಿಯೆಗೆ ನೆರವಾಗುವ ಜೊತೆಗೇ ಮೂತ್ರಪಿಂಡಗಳ ಕಾರ್ಯನಿರ್ವಹಣೆಯಲ್ಲಿನೂ ನೆರವಾಗುವ ಮೂಲಕ ಈ ಅಂಗಗಳ ಕ್ಷಮತೆ ಯನ್ನೂಹೆಚ್ಚಿಸುತ್ತದೆ. ತನ್ಮೂಲಕ ಮೂತ್ರವಿಸರ್ಜನೆ ಇನ್ನಷ್ಟು ಉತ್ತಮವಾಗುತ್ತದೆ. ಇದೇ ಕಾರಣಕ್ಕೆ ಕಬ್ಬಿನ ಹಾಲನ್ನು (ಎಳನೀರಿನ ಬಳಿಕ) ಉತ್ತಮ ಮೂತ್ರವರ್ಧಕ ಎಂದು ಕರೆಯಲಾಗುತ್ತದೆ.

ಕಬ್ಬಿನ ರಸದ ಸೇವನೆಯಿಂದ ತೂಕ ಹೆಚ್ಚುತ್ತದೆ ಎಂದು ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಈ ಬಗ್ಗೆ ನೀವು ನಿಜವಾದ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು. ನಮಗೆ ತಿಳಿದಿರುವಂತೆ ಕಬ್ಬಿನ ರಸದಲ್ಲಿ ಕರಗುವ ನಾರಿನಂಶ ಅಧಿಕವಾಗಿದ್ದು ಇದನ್ನು ಜೀರ್ಣಿಸಲು ದೇಹದಲ್ಲಿ ಈಗಾಗಲೇ ಸಂಗ್ರಹವಾಗಿದ್ದ ಕೊಬ್ಬಿನ ಕಣಗಳನ್ನು ಬಳಸಿಕೊಳ್ಳುತ್ತದೆ. ತೂಕ ಇಳಿಕೆಗೆ ಇದೇ ಕಾರಣ. ಅಲ್ಲದೇ ಕರುಳಿನ ವಿಲ್ಲೈಗಳು ಎಂಬ ಒಳಪದರದಲ್ಲಿರುವ ಸೂಕ್ಷ್ಮ ಅಂಗಗಳು ಆಹಾರದಿಂದ ಪೋಷಕಾಂಶಗಳನ್ನು ಹೀರಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಕಬ್ಬಿನ ಹಾಲಿನಲ್ಲಿ ಕೊಬ್ಬು ಇಲ್ಲವೇ ಇಲ್ಲ ಹಾಗೂ ಸಕ್ಕರೆಯೂ ನೈಸರ್ಗಿಕ ಗ್ಲೂಕೋಸ್ ಆಗಿದ್ದು ಸೂಕ್ತ ಸಾಂದ್ರತೆಯಲ್ಲಿ ಇರುವ ಕಾರಣ ತೂಕ ಇಳಿಕೆಗೆ ಪರೋಕ್ಷವಾಗಿ ನೆರವಾಗುತ್ತದೆ. ಈ ಗುಣಗಳು ತೂಕ ಇಳಿಕೆಯ ಪ್ರಯತ್ನಗಳಿಗೆ ಪೂರಕವಾಗಿರುವುದರಿಂದ ಈ ಪ್ರಯತ್ನಗಳು ಹೆಚ್ಚಿನ ಫಲ ನೀಡುತ್ತವೆ.

Leave a Reply

Your email address will not be published. Required fields are marked *