ನಮಸ್ತೆ ಪ್ರಿಯ ಓದುಗರೇ, ದೇವರನ್ನು ನಾವು ಯಾರು ಕಂಡಿಲ್ಲ ದೇವರು ಹೇಗೆ ಇದ್ದಾನೆ ಅನ್ನುವುದು ಕೂಡ ನಮಗೆ ಗೊತ್ತಿಲ್ಲ. ಆದರೆ ದೇವರು ನಮಗೆ ಕನಸಿನ ಮೂಲಕ ತನ್ನ ಮಹಿಮೆಯನ್ನು ತೋರಿಸುತ್ತಾನೆ. ಕನಸುಗಳನ್ನು ಕಾಣದೆ ಇರುವ ಮನುಷ್ಯ ಇಲ್ಲ. ಕನಸುಗಳು ಯಾರಿಗೆ ತಾನೇ ಬೀಳುವುದಿಲ್ಲ ಹೇಳಿ. ಕನಸುಗಳಲ್ಲಿ ನಾವು ಇಷ್ಟ ಪಟ್ಟ ಆಸೆಗಳು ಈಡೇರದೆ ಇದ್ದರೂ ಕೂಡ ಕನಸಿನಲ್ಲಿ ಮಾತ್ರ ಈಡೇರುತ್ತದೆ. ಕನಸುಗಳನ್ನು ಕಾಣುವುದಕ್ಕೆ ಇದೆ ಸಮಯಬೇಕು, ಇದೇ ರೀತಿಯಾಗಿ ಇರಬೇಕು ಅನ್ನುವ ಚೌಕಟ್ಟು ಇಲ್ಲ ಮಿತ್ರರೇ.

ಮೇಲೆ ಹೇಳಿದ ಹಾಗೆ ನಾವು ದೇವರು ಹೇಗೆ ಇದ್ದಾನೆ ಅಂತ ನಾವು ನೋಡಿಲ್ಲ ಗೆಳೆಯರೇ. ಆದರೆ ಪ್ರತಿಯೊಬ್ಬರ ಕನಸಿನಲ್ಲಿ ದೇವರು ಮತ್ತೆ ದೇವತೆಗಳು ಒಂದಲ್ಲ ಒಂದು ಬಾರಿ ಬಂದಿರುತ್ತಾರೆ. ದೇವರು ಈ ರೀತಿ ಕನಸಿನಲ್ಲಿ ಬಂದರೆ ಒಂದೊಂದಕ್ಕೆ ಒಂದೊಂದು ರೀತಿಯ ಪ್ರತೀಕವಾಗಿದೆ. ಹಾಗೆಯೇ ನಂಬಿಕೆ ಕೂಡ ಇದೆ. ದೇವರು ಕನಸಿನಲ್ಲಿ ಸುಮ್ಮನೆ ಬರುವುದಿಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಯಾವ ದೇವರು ಬಂದರೆ ಅದೃಷ್ಟವೋ ಅಥವಾ ದುರದೃಷ್ಟವೋ ಅಂತ ಇಂದಿನ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಬನ್ನಿ.

ಕನಸುಗಳು ನಮ್ಮ ಮುಂದಿನ ಭವಿಷ್ಯದ ಮುನ್ಸೂಚನೆಗಳು ಆಗಿರುತ್ತವೆ. ಪ್ರತಿ ಕನಸಿಗೂ ವಿಧವಾದ ಅರ್ಥಗಳನ್ನು ಒಳಗೊಂಡಿರುತ್ತವೆ. ಕೆಲವು ಕನಸುಗಳು ಬೆಳಗಿವ ಜಾವದವರೆಗೆ ನೆನಪು ಇದ್ದರೆ ಇನ್ನುಳಿದ ಕನಸುಗಳನ್ನು ನಾವು ಕನಸಿನಲ್ಲಿಯೇ ಮರೆತು ಹೋಗುತ್ತೇವೆ. ಕನಸುಗಳಿಗೆ ನಾನಾ ನಿಗೂಢತೆ ಇದ್ದು ಇದಕ್ಕೆ ನಾವು ಕಾಸು ಕೊಡಬೇಕಾಗಿಲ್ಲ. ಸ್ವಪ್ನ ಶಾಸ್ತ್ರದ ಪ್ರಕಾರ ದುರ್ಗಾದೇವಿ ಕನಸಿನಲ್ಲಿ ಬಂದರೆ ತುಂಬಾನೇ ಶುಭ ಅಂತ ನಂಬಲಾಗಿದೆ. ಅದರಲ್ಲೂ ತಾಯಿ ದುರ್ಗಾದೇವಿ ಕೆಂಪು ಸೀರೆಯಲ್ಲಿ ನಗುತ್ತಾ ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ಪವಾಡಗಳು ನಡೆಯುತ್ತವೆ.

ಹಾಗೆಯೇ ನೀವು ಮುಟ್ಟಿದ್ದೆಲ್ಲ ಚಿನ್ನ ಆಗಿದ್ದು ಎಲ್ಲ ಕ್ಷೇತ್ರದಲ್ಲಿ ನಿಮ್ಮನ್ನು ಯಶಸ್ಸು ಕೈ ಎತ್ತಿ ಕರೆಯುತ್ತದೆ. ಜೊತೆಗೆ ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಬೇಗನೆ ಗುಣಮುಖವಾಗುತ್ತದೆ ಅಂತ ಸೂಚನೆ ನೀಡುತ್ತಾಳೆ ತಾಯಿ. ದೇವರ ದೇವ ಮಹಾದೇವ ಲಿಂಗ ಸ್ವರೂಪಿ ಶಿವನನ್ನು ಕನಸಿನಲ್ಲಿ ಕಾಣುವುದು ಒಂದು ಅದೃಷ್ಟವೇ ಸರಿ. ಶಿವಲಿಂಗ ಕನಸಿನಲ್ಲಿ ಬರುವುದು ತುಂಬಾನೇ ಅಪರೂಪ. ಒಂದು ವೇಳೆ ನಿಮ್ಮ ಕನಸಿನಲ್ಲಿ ಶಿವಲಿಂಗದ ದರ್ಶನವಾದರೆ ನಿಮ್ಮ ಜೀವನದಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತವೆ.

ಶ್ರೀ ಕೃಷ್ಣ ಕನಸಿನಲ್ಲಿ ಬಂದರೆ ನಿಮ್ಮ ಜೀವನವು ಸಮೃದ್ಧಿಯಾಗಿ ಬೆಳೆಯುತ್ತದೆ. ಕೃಷ್ಣನು ನಸು ನಗುತ್ತಾ ನಿಮ್ಮ ಕನಸಿನಲ್ಲಿ ಬಂದರೆ ನಿಮಗೆ ರಾಜಯೋಗ ದಕ್ಕುತ್ತದೆ. ಹಾಗೆಯೇ ಶ್ರೀರಾಮನು ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ನಿಮಗೆ ಯಶಸ್ಸು ದೊಡ್ಡದಾದ ಮಟ್ಟದಲ್ಲಿ ಸಿಗುತ್ತದೆ. ಮತ್ತು ನೀವು ಆರ್ಥಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಅದನ್ನು ಕೂಡ ದೂರ ಮಾಡುವ ಸಂಕೇತವನ್ನು ಶ್ರೀರಾಮನು ನೀಡುತ್ತಾನೆ. ಗಣೇಶನನ್ನು ವಿಘ್ನ ವಿನಾಶಕ ಅನ್ನುತ್ತೇವೆ. ಆತ ಇದ್ದ ಕಡೆಗೆ ಸಮಸ್ಯೆಗಳಿಗೆ ಜಾಗವಿಲ್ಲ.

ಆತನನ್ನು ನೀವು ಕನಸಿನಲ್ಲಿ ಕಂಡರೆ ನಿಮಗೆ ಇರುವ ಎಲ್ಲ ಸಂಕಷ್ಟಗಳು ಪರಿಹಾರ ಆಗುತ್ತವೆ ಮತ್ತು ಅರ್ಧದಲ್ಲಿ ನಿಂತ ಕೆಲಸಗಳು ಮತ್ತೆ ಶುರು ಆಗುತ್ತವೆ. ಹಾಗೆಯೇ ಶುಭಕಾರ್ಯಗಳು ನಡೆಯುತ್ತವೆ ಅಂತ ಸೂಚನೆಯನ್ನು ನೀಡುತ್ತಾನೆ ಲಂಬೋದರ. ಕನಸಿನಲ್ಲಿ ಬೃಹತ್ ಆಂಜನೇಯನನ್ನು ಕಂಡರೆ ನಿಮಗೆ ಇರುವ ಶತ್ರು ಬಾಧೆ ದೂರವಾಗುತ್ತದೆ. ಹಾಗೆಯೇ ಆಂಜನೇಯ ಸ್ವಾಮಿಯ ದೇವಸ್ಥಾನವನ್ನು ಕನಸಿನಲ್ಲಿ ಕಂಡರೆ ನೀವು ಅಂದುಕೊಂಡ ಎಲ್ಲ ಕೆಲಸಗಳು ನೆರವೇರುತ್ತದೆ ಅಂತ ಸೂಚಿಸುತ್ತಾನೆ ಆಂಜನೇಯ.

ನಿದ್ರಿಸುವ ಹನುಮಂತ ಕಂಡರೆ ನಿಮಗೆ ಉತ್ತಮವಾದ ಆರೋಗ್ಯವೂ ಲಭಿಸುತ್ತದೆ. ನಗುವ ಆಂಜನೇಯ ಸ್ವಾಮಿಯನ್ನೂ ಕಂಡರೆ ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಮೃದ್ದಿ ದೊರೆಯುತ್ತದೆ. ಬ್ರಹ್ಮಾಂಡ ನಾಯಕ ಶ್ರೀ ವೈಕುಂಠ ಸ್ವಾಮಿ ಯಾರ ಕನಸಿನಲ್ಲಿ ಬರುತ್ತಾನೆಯೋ ಅವರೇ ಪುಣ್ಯಶಾಲಿಗಳು. ಇನ್ನೂ ಲಕ್ಷ್ಮೀದೇವಿಯನ್ನು ಕನಸಿನಲ್ಲಿ ಅಥವಾ ಯಾವುದೋ ರೂಪದಲ್ಲಿ ಕಂಡರೆ ನಿಮ್ಮ ಮನೆಯೂ ಹಣದಿಂದ ತುಂಬುತ್ತದೆ.

ಇನ್ನೂ ದೇವಾನು ದೇವತೆಗಳು ಕೋಪದಲ್ಲಿ ಕನಸಿನಲ್ಲಿ ಬಂದರೆ ಅದು ಭವಿಷ್ಯದಲ್ಲಿ ತೊಂದರೆಯ ಮುನ್ಸೂಚನೆ ಅಂತ ಅರ್ಥ. ಅಥವಾ ನಿಮಗೆ ಅಪಾಯ ಕಾದಿದೆ ಅಂತ ಅರ್ಥ ಇಲ್ಲವಾದರೆ ನೀವು ಹರಕೆ ಹೊತ್ತಿದ್ದರೆ ಅದು ಅಪರಿಪೂರ್ಣ ಅಂತ ಸೂಚಿಸಲಾಗುತ್ತದೆ. ಇಷ್ಟು ಕನಸಿನಲ್ಲಿ ಬರುವ ದೇವತೆಗಳ ಸಂಪೂರ್ಣ ಮಾಹಿತಿ. ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ.

Leave a Reply

Your email address will not be published. Required fields are marked *