ಎಲ್ಲರಿಗೂ ನಮಸ್ಕಾರ ಸ್ನೇಹಿತರೇ ನೋಡಿ ಕನಸಿನಲ್ಲಿ ಏನಾದರೂ ಹೂಗಳೇ ಆಗಲಿ ಅಥವಾ ಸುಂದರವಾದ ಪಕ್ಷಿಗಳು ಸುಂದರವಾದ ಪ್ರಕೃತಿ ಈ ರೀತಿ ಕಾಣಿಸಿಕೊಂಡರೆ ಅದು ಮನಸ್ಸಿಗೆ ಬಹಳ ಖುಷಿಯನ್ನು ತರುತ್ತದೆ. ಎಂದು ಹೇಳಲಾಗುತ್ತದೆ. ಇಂತಹ ಕನಸುಗಳು ಬಿದ್ದಾಗ ನಾವು ಸಹಜವಾಗಿ ಖುಷಿಪಡುತ್ತೇವೆ ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಬೀಳುವಂತಹ ಕೆಲವು ವಸ್ತುಗಳು ಯಾವುದೋ ಒಂದು ಸೂಚನೆ ನೀಡುತ್ತದೆ ಎಂದು ಹೇಳಲಾಗುತ್ತದೆ. ಅದು ಭವಿಷ್ಯದಲ್ಲಿ ಯಾವುದಾದರೂ ಕೆಟ್ಟ ಘಟನೆಗಳು ಅಥವಾ ಒಳ್ಳೆಯ ಘಟನೆಗಳು ನಡೆಯುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ. ಅದೇ ರೀತಿಯಾಗಿ ಕನಸಿನಲ್ಲಿ ಹೂಗಳು ಕಾಣಿಸಿಕೊಂಡರೆ ಅದು ಭವಿಷ್ಯದಲ್ಲಿ ನಡೆಯುವಂತಹ ಕೆಲವು ಸೂಚನೆಗಳನ್ನು ನಿಮಗೆ ನೀಡುತ್ತದೆ ಅದು ನಿಮ್ಮ ಮನಸ್ಸಿಗೆ ಭಾವನೆಗಳನ್ನು ಸೂಚಿಸುತ್ತದೆ ಹೇಳಲಾಗುತ್ತದೆ . ಆದರೆ ಕನಿಷ್ಠದಲ್ಲಿ ಹೂಗಳು ಕಂಡರೆ ಅದು ಯಾವ ರೀತಿಯ ಸೂಚನೆಗಳು ನೀಡುತ್ತದೆ ಎಂದು ಮತ್ತು ಯಾವ ರೀತಿ ಶುಭ ಮತ್ತು ಅಶುಭ ಎಂದು ನೋಡೋಣ ಬನ್ನಿ.

ಮೊದಲನೆಯದಾಗಿ ಕನಸಿನಲ್ಲಿ ಏನಾದರೂ ಕಮಲದಹೂ ಕಾಣಿಸಿಕೊಂಡರೆ ಅದನ್ನು ಬಹಳ ಶುಭ ಎಂದು ಹೇಳಲಾಗುತ್ತದೆ ಕಮಲದ ಹೂವು ಮಹಾಲಕ್ಷ್ಮಿ ದೇವಿಯನ್ನು ಸೂಚಿಸುವುದರಿಂದ ಇದು ನಿಮ್ಮ ಸಂಪತ್ತಿನ ಸೂಚನೆಯನ್ನು ನೀಡುತ್ತದೆ. ಭವಿಷ್ಯದಲ್ಲಿ ಒಳ್ಳೆಯ ಹಣಕಾಸಿನ ಲಾಭಗಳನ್ನು ನೀವು ಪಡೆಯುತ್ತೀರಾ ಎನ್ನುವ ಸೂಚನೆಯನ್ನು ನೀಡುತ್ತದೆ. ಹಾಗೂ ಮತ್ತು ಕನಸಿನಲ್ಲಿ ಕಮಲದಹೂ ಬರುವುದು ಒಳ್ಳೆಯದು. ಇದು ಕನಸಿನಲ್ಲಿ ಏನಾದರೂ ಮಲ್ಲಿಗೆ ಹೂವು ಕಾಣಿಸಿಕೊಳ್ಳುತ್ತಿದ್ದರೆ ಅದು ನಿಮಗೆ ಭವಿಷ್ಯದಲ್ಲಿ ಯಾವುದೋ ಒಂದು ಸಂದೇಶವನ್ನು ನೀಡುತ್ತದೆ ಎನ್ನುವ ಅರ್ಥ. ಭವಿಷ್ಯದಲ್ಲಿ ನಿಮ್ಮ ಜೀವನ ಉತ್ತಮವಾಗಿರುತ್ತದೆ ಉತ್ತಮವಾದ ತಿರುವನ್ನು ಪಡೆಯುತ್ತದೆ ಎಂದು ಸೂಚನೆಯನ್ನು ನೀಡಿದೆ. ಇನ್ನು ಕನಸಿನಲ್ಲಿ ಏನಾದರೂ ಹೂವಿನ ಹಾರ ಕಾಣಿಸಿಕೊಳ್ಳುತ್ತಿದ್ದಾರೆ ಅದು ಶುಭ ಸೂಚನೆಯಾಗಿದೆ ಮನೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳು ನಡೆಯುತ್ತದೆ ಎನ್ನುವ ಸೂಚನೆಯನ್ನು ನೀಡುತ್ತದೆ ಇನ್ನು ಕನಸಿನಲ್ಲಿ ಏನಾದರೂ ಗುಲಾಬಿಹೂ ಕಾಣಿಸಿಕೊಂಡರೆ ಅದು ಮುಂದಿನ ದಿನಗಳಲ್ಲಿ ನಿಮಗೆ ಇರುವ ಪ್ರೀತಿ ಗೌರವ ಸ್ಥಾನವನ್ನು ಹೆಚ್ಚಾಗುತ್ತದೆ ಎನ್ನುವ ಸೂಚನೆ ನೀಡುತ್ತದೆ.

Leave a Reply

Your email address will not be published. Required fields are marked *