ನಾವು ನಮ್ಮ ರಾಜ್ಯದಲ್ಲಿ ಅಥವಾ ನಮ್ಮ ದೇಶದಲ್ಲಿ ಹಲವಾರು ರೀತಿಯಾದಂತಹ ಅಧಿಕಾರಿಗಳನ್ನು ಕಂಡಿದ್ದೇವೆ ಕೆಲವೊಬ್ಬರು ಹಣದ ಆಮಿಷದಿಂದ ನಮಗೆ ತುಂಬಾನೇ ದುಃಖ ತಂದರೆ ಇನ್ನೂ ಕೆಲವರು ಅವರು ಮಾಡುವಂತಹ ಸಾಮಾಜಿಕ ಕೆಲಸಗಳಿಗೆ ಅವರು ತಮ್ಮದೇ ಆದ ಹೆಸರುಗಳನ್ನು ಮಾಡಿಕೊಂಡಿದ್ದಾರೆ ಇವತ್ತಿನ ಮಾಹಿತಿ ಕೂಡ ನಿಮಗೆ ಅದೇ ರೀತಿಯಲ್ಲಿ ಇದೆ. ತಮ್ಮ ಕೆಲಸ ನಿಷ್ಠಾವಂತ ಮಾಡಿ ತಮ್ಮ ರಾಜ್ಯವನ್ನು ಮುಂದುವರಿಸಬೇಕು ಅಥವಾ ತಮ್ಮ ಜಿಲ್ಲೆಯನ್ನು ಇಡೀ ರಾಜ್ಯದಲ್ಲಿಯ ಹೆಸರು ಮಾಡಬೇಕು ಎಂಬುದೇ ಇವರನ್ನು ಗುರಿಯಾಗಿರುತ್ತದೆ.

ಕೆಲವೊಬ್ಬರು ಹುಟ್ಟಿರುವುದು ಜನಸೇವೆಗೆ ಎಂದು ಅನಿಸುತ್ತದೆ ಈ ಜಿಲ್ಲಾಧಿಕಾರಿ ಕೂಡ ಜನರು ಸ್ವಚ್ಛವಾದ ನೀರು ಕುಡಿಯಬೇಕು ಎಂದು ಎಂಥ ಸಾಹಸಕ್ಕೂ ಹಿಂಜರಿಯಲಿಲ್ಲ ಗೊತ್ತಾ ಹಾಗಾದರೆ ಹೀಗೆ ಮಾಡಿದ ಸಾಹಸವೆನಾದರೂ ಏನು ನೋಡೋಣ ಬನ್ನಿ. ಕರ್ನಾಟಕದವರು ಆದರ್ಶ ಶಿಲ್ಪ ಪ್ರಭಾಕರ್ ಅವರು ತಮಿಳುನಾಡಿನ ಹತ್ತಿರ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಜಿಲ್ಲೆಯಲ್ಲಿ ಖಾಯಿಲೆಗಳು ಹೆಚ್ಚಾಗುತ್ತಿದ್ದ ಕಾರಣ ಜಿಲ್ಲೆಯ ಜನ ಸ್ವಚ್ಛವಾದ ನೀರು ಕುಡಿಯುತ್ತಿದ್ದಾರೆ ಎಂದು ವಾಟರ್ ಟ್ಯಾಂಕ್ಗಳನ್ನು ಪರಿಶೀಲನೆ ಮಾಡಲು ಹೊರಟ ಶಿಲ್ಪ ಅವರು.

ವಾಟರ್ ಟ್ಯಾಂಕ್ ಗಳ ಬಳಿ ಹೋದಾಗ ಅಲ್ಲಿನ ಸಿಬ್ಬಂದಿ ಎಲ್ಲ ಸ್ವಚ್ಛವಾಗಿದೆ ಎಂದು ಹೇಳಿದರು ಅವರನ್ನು ನಂಬಿ ಸುಮ್ಮನೆ ಹೋಗುವ ಮನಸ್ಸು ಶಿಲ್ಪಾವರದ್ದು ಅಲ್ಲ ವಾಟರ್ ಗಳು ಸ್ವಚ್ಛವಾಗಿ ಇದೆಯೋ ಇಲ್ಲವೋ ಚೆಕ್ ಮಾಡುವುದನ್ನು ಏಕೈಕಿ 140 ಅಡಿ ಟ್ಯಾಂಕನ್ನು ಹತ್ತಿ ಬಿಟ್ಟರು ಶಿಲ್ಪ ಪ್ರಭಾಕರ್. ಇದನ್ನು ನೋಡಿ ಅವರ ಜೊತೆ ಬಂದಿದ್ದ ಸಿಬ್ಬಂದಿ ಒಂದು ಕ್ಷಣ ಶಾಕ್ ಆದರೂ ಅಷ್ಟು ಎತ್ತರದ ಟ್ಯಾಂಕನ್ನು ಹತ್ತಲು ಗಂಡಸರೇ ಭಯಪಡುತ್ತಾರೆ ಆದರೆ ಹಿಂದೆ ಮುಂದೆ ನೋಡದೆ ವಾಟರ್ ಟ್ಯಾಂಕ್ ತುತ್ತ ತುದಿಗೆ ಹತ್ತಿದರು ಜಿಲ್ಲಾಧಿಕಾರಿ ಶಿಲ್ಪ ಅವರು.

ಟ್ಯಾಂಕ್ ಒಳಗೆ ಪರಿಶೀಲಿಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ಕೊಟ್ಟರು. ಮತ್ತು ಇನ್ನೊಂದು ಸ್ಥಳಕ್ಕೆ ಹೋಗಿ ಅಲ್ಲಿಯೂ ಟ್ಯಾಂಕ್ ಹತ್ತಿ ಪರಿಶೀಲಿಸಿದರು ಜಿಲ್ಲಾಧಿಕಾರಿ ಇದನ್ನು ಕಂಡು ಟ್ಯಾಂಕ್ ಕ್ಲೀನಿಂಗ್ ಸಿಬ್ಬಂದಿ ಬೆಚ್ಚಿಬಿದ್ದರೂ ನಾನು ಯಾವುದೇ ಕ್ಷಣ ಬಂದು ಟ್ಯಾಂಕ್ ಒಳಗೆ ಚೆಕ್ ಮಾಡುತ್ತೇನೆ ಕ್ಲೀನಾಗಿರಲಿಲ್ಲ ಎಂದರೆ ಸಸ್ಪೆಂಡ್ ಮಾಡುತ್ತೇನೆ ಎಂದು ಎಚ್ಚರಿಕೆ ರವಾನಿಸಿದ್ದಾರೆ ಶಿಲ್ಪಾ ಪ್ರಭಾಕರ್ ಶುದ್ಧ ನೀರನ್ನು ಪೂರೈಸಿದರೆ ಅರ್ಧಕ್ಕಿಂತ ಹೆಚ್ಚು ರೋಗಗಳನ್ನು ನಿಯಂತ್ರಿಸಬಹುದು ಹಾಕಿ ಜನರಿಗೆ ಒಳ್ಳೆಯ ನೀರು ಪೂರೈಸುವುದು ನನ್ನ ಕರ್ತವ್ಯ ಎಂದು ಹೇಳಿದ ಶಿಲ್ಪ ಅವರು ನನಗೆ ವಾಟರ್ ಟ್ಯಾಂಕ್ ಹತ್ತಿರ ಯಾವುದೇ ಅನುಭವ ಇರಲಿಲ್ಲ ಇದೇ ಮೊದಲ ಬಾರಿಗೆ ಹತ್ತಿದ್ದು ಎಂದು ಹೇಳಿದ್ದಾರೆ.

ಅಷ್ಟೆಲ್ಲದ ಇತ್ತೀಚಿಗೆ ತನ್ನ ಮಗಳನ್ನು ಯಾವುದೋ ಇಂಟರ್ನ್ಯಾಷನಲ್ ಸ್ಕೂಲ್ ಗೆ ಕಳುಹಿಸದ ಶಿಲ್ಪಾ ಅವರ ಮಗಳನ್ನು ಅಂಗನವಾಡಿಯಲ್ಲಿ ಜಾಯಿನ್ ಮಾಡಿ ಸರ್ಕಾರದ ಯೋಜನೆಗಳ ಬಗ್ಗೆ ಬರಿ ಮಾತನಾಡುವುದು ಅಲ್ಲ ಮೊದಲು ಅದನ್ನು ನಾವು ಪಾಲಿಸಬೇಕು ಎಂದು ಸರ್ಕಾರಿ ಅಧಿಕಾರಿಗಳಿಗೆ ಸಂದೇಶ ಸಾರಿದ್ದಾರೆ ಕಾಟಾಚಾರದ ಪರಿಶೀಲನೆ ಮಾಡದೆ ಜನರನ್ನು ತನ ಕುಟುಂಬದ ಸದಸ್ಯರು ಅನ್ನುವ ಹಾಗೆ ಭಾವಿಸಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಶಿಲ್ಪ ಪ್ರಭಾಕರ್ ಅವರ ಒಳ್ಳೆಯತನ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಕಮೆಂಟ್ ಮೂಲಕ ತಿಳಿಸಿ.

Leave a Reply

Your email address will not be published. Required fields are marked *