ಎಲ್ಲ ಪ್ರದೇಶಗಳಲ್ಲೂ ಬೆಳೆಯುವ ದೊಡ್ಡ ತಗಚಿ ಒಂದು ಪೊದರುಗಿಡ. ಹುಳು ಕಡ್ಡಿ ಗಿಡ ಎಂದೇ ಪ್ರಸಿದ್ದವಾಗಿರುವ ಈ ಸಸ್ಯವನ್ನು ಬೀಜಗಳಿಂದ ಪಡೆಯಬಹುದು. ಆಯುರ್ವೇದ ವೈದ್ಯರಿಗೆ ದದೃಘ್ನ ಎಂದು ಪರಿಚಯವಿರುವ ದೊಡ್ಡ ತಗಚಿ ಸುಂದರವಾದ ಹಳದಿ ಹೂವುಗಳನ್ನು ಬಿಡುತ್ತವೆ. ಹೀಗಾಗಿ ಕೇವಲ ಔಷಧವೇ ಅಲ್ಲದೆ ಮನೆಯ ಅಂಗಳಕ್ಕಿದು ಅಲಂಕಾರವು ಹೌದು.

ಹುಳುಕಡ್ಡಿಗೆ: ದೊಡ್ಡ ತಗಚಿ ಎಲೆಗಳನ್ನು ಮೊಸರಿನಲ್ಲಿ ಚೆನ್ನಾಗಿ ಅರೆದು ಚರ್ಮಕ್ಕೆ ಹಚ್ಚುವುದರಿಂದ ಹುಳುಕಡ್ಡಿ ಕಡಿಮೆಯಾಗುತ್ತದೆ. ಚರ್ಮದ ಕಾಂತಿಗೆ ಅರಿಶಿನ ಮತ್ತು ದೊಡ್ಡ ತಗಚಿ ಎಲೆಗಳನ್ನು ಚೆನ್ನಾಗಿ ಅರೆದು ಚರ್ಮಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ತೊಳೆದುಕೊಳ್ಳುವುದರಿಂದ ಚರ್ಮದ ಸಹಜ ಹೊಳಪು ಹೆಚ್ಚುತ್ತದೆ.

ಚರ್ಮ ರೋಗಕ್ಕೆ: ದೊಡ್ಡ ತಗಚಿ ಎಲೆಗಳನ್ನು ಚೆನ್ನಾಗಿ ಅರೆದು ಒಂದೆರಡು ಹನಿ ನಿಂಬೆರಸ ಮತ್ತು ಕರ್ಪೂರದ ಪುಡಿಯಲ್ಲಿ ಸೇರಿಸಿ ಚರ್ಮಕ್ಕೆ ಹಚ್ಚುವುದರಿಂದ ಅನೇಕ ಸಣ್ಣ ಪುಟ್ಟ ಚರ್ಮದ ತೊಂದರೆಗಳು ನಿವಾರಣೆಯಾಗುತ್ತದೆ.

ಬಾಯಿ ಹುಣ್ಣಿಗೆ: ದೊಡ್ಡ ತಗಚಿ ಎಲೆಗಳನ್ನು ಜಜ್ಜಿ ಎರಡು ಲೋಟ ನೀರು ಹಾಕಿ ಕುಡಿಸಿ ಒಂದು ಲೋಟಕ್ಕಿಳಿಸಬೇಕು. ಇದನ್ನು ಶೋಧಿಸಿ ಬಂಡ ಕಷಾಯದಿಂದ ಆಗಾಗ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಕಡಿಮೆಯಾಗುತ್ತದೆ.

ಹುಳ ಹುಪ್ಪಟೆ ಕಚ್ಚಿದಾಗ: ಹುಳುಹುಪ್ಪಟೆ ಕೀಟಗಳು ಕಚ್ಚಿದಾಗ ಉಂಟಾಗುವ ನಾವೇ ಮತ್ತು ಗಂಧೆಗಳು ಈ ಸೊಪ್ಪಿನ ರಸದ ಲೇಪನದಿಂದ ಕೂಡಲೇ ಶಮನವಾಗುತ್ತದೆ.

ಮಲಬದ್ಧತೆಗೆ: ಆರೆಂಟು ಎಲೆಗಳನ್ನು ಜಜ್ಜಿ ಎರಡು ಲೋಟ ನೀರಿಗೆ ಸೇರಿಸಿ ಕುಡಿಸಿ ಅರ್ಧ ಲೋಟಕ್ಕಿಳಿಸಿ ಶೋಧಿಸಿ ಬಂಡ ಕಷಾಯವನ್ನು ಆಗಾಗ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *