ನಮಸ್ತೆ ಪ್ರಿಯ ಸ್ನೇಹಿತರೆ, ಅಲೋವೆರಾ ಗಿಡ ಈ ಗಿಡವು ಅಥವಾ ಸಸ್ಯವು ಆರೋಗ್ಯಕ್ಕೆ ಮಾತ್ರವಲ್ಲದೆ ಇದರಿಂದ ನಾವು ಅನೇಕ ಬಗೆಯ ಸಮಸ್ಯೆಗಳಿಂದ ಹೊರಗಡೆ ಬರಬಹುದು ಅಂದರೆ ಹಣಕಾಸಿನ ಸಮಸ್ಯೆ ಇರಬಹುದು ಆರೋಗ್ಯದ ಸಮಸ್ಯೆ ಇರಬಹುದು ಶತ್ರುಗಳ ಸಮಸ್ಯೆ ಇರಬಹುದು ಹಲವಾರು. ಹಾಗಾದರೆ ಬನ್ನಿ ಇಂದಿನ ಲೇಖನದಲ್ಲಿ ಅಲೋವೆರಾ ದಿಂದ ಆಗುವ ಹತ್ತಾರು ಲಾಭಗಳ ಬಗ್ಗೆ ತಿಳಿದುಕೊಳ್ಳುವುದು ಜೊತೆಗೆ ಈ ಸಸ್ಯವನ್ನು ಯಾವ ದಿಕ್ಕಿನಲ್ಲಿ ಕಟ್ಟಬೇಕು ಯಾವ ದಿನ ಕಟ್ಟಬೇಕು ಅಂತ ಸವಿಸ್ತಾರವಾಗಿ ತಿಳಿದುಕೊಳ್ಳೋಣ.

ಅಲೋವೆರಾ ಸಸ್ಯವನ್ನು ಸಾಮಾನ್ಯವಾಗಿ ನೋಡಿಯೇ ಇರುತ್ತೀರಿ. ಇದು ಮುಳ್ಳುಗಳಿಂದ ಆವರಿಸಿ ಕೊಂಡಿರುತ್ತದೆ. ಈ ಗಿಡದ ತುತ್ತತುದಿಯಲ್ಲಿ ದೇವಾನು ದೇವತೆಗಳ ವಾಸ ಇರುತ್ತದೆ ಅಂತ ತಿಳಿಯಲಾಗಿದೆ. ಇನ್ನೂ ನೀವು ಏನಾದರೂ ನಿಮ್ಮ ಮನೆಯ ಬಾಗಿಲಿಗೆ ಇದನ್ನು ಕಟ್ಟಬೇಕು ಅಂತ ಇಚ್ಛಿಸಿದರೆ ಈ ಸಸ್ಯವನ್ನು ನೀವು ಬೇರು ಸಮೇತವಾಗಿ ತೆಗೆದುಕೊಳ್ಳಬೇಕು. ಚಿಕ್ಕದಾಗಿರಲಿ ದೊಡ್ಡದಾಗಿರಲಿ ಬೇರು ಸಹಿತವಾಗಿ ತೆಗೆದುಕೊಳ್ಳಿ. ತದ ನಂತರ ಅರಿಶಿಣ ಮತ್ತು ನೀರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಈ ಸಸ್ಯದ ಬೇರಿನ ಮೇಲಿನ ಭಾಗಕ್ಕೆ ಹಚ್ಚಬೇಕು.

ಕೇವಲ ಶಾಸ್ತ್ರಕ್ಕೆ ಮತ್ತು ಹೆಸರಿಗಾಗಿ ಸ್ವಲ್ಪ ಅರಿಶಿಣವನ್ನು ಹಚ್ಚಬೇಕು. ಅಲೋವೆರಾ ಸಸ್ಯದ ಪೂರ್ತಿ ಭಾಗಕ್ಕೆ ಹಚ್ಚಬೇಡಿ. ಇಲ್ಲವಾದರೆ ಆ ಸಸ್ಯವು ಒಣಗುತ್ತಾ ಹೋಗುತ್ತದೆ. ಮನೆಯಲ್ಲಿ ಗಿಡಗಳು ಎಂದಿಗೂ ಒಣಗಿ ಹೋಗಬಾರದು ಇದನ್ನು ಅಪಶಕುನ ಅಂತ ಕರೆಯುತ್ತಾರೆ. ಹೀಗಾಗಿ ಆದಷ್ಟು ಸ್ವಲ್ಪ ಭಾಗ ಮಾತ್ರ ಅದರ ತುದಿಗೆ ಅರಿಶಿಣವನ್ನು ಹಚ್ಚಿ. ಬೇರಿಗೆ ಹಚ್ಚಬೇಡಿ ಅದರ ಮೇಲೆ ಇರುವ ಭಾಗಕ್ಕೆ ಸ್ವಲ್ಪ ಹಚ್ಚಿಕೊಳ್ಳಿ. ತದ ನಂತರ ಮಾರುಕಟ್ಟೆಯಲ್ಲಿ ಕೆಂಪು ಕಪ್ಪು ಮತ್ತು ಹಳದಿ ಬಣ್ಣ ಮಿಶ್ರಿತ ದಾರವು ಸಿಗುತ್ತದೆ. ಇದನ್ನು ಸಾಮಾನ್ಯವಾಗಿ ದೃಷ್ಟಿ ತೆಗೆಯಲು ಬಳಕೆ ಮಾಡುತ್ತಾರೆ.

ಆಮೇಲೆ ನೀವು ಈ ಗಿಡದ ಒಂದು ಭಾಗಕ್ಕೆ ಅರಿಶಿಣ ಕುಂಕುಮವನ್ನೂ ಹಚ್ಚಿ. ನಂತರ ಒಂದು ಹೂವು ಅದರ ಮೇಲಿಟ್ಟು ದೇವರ ಮನೆಯಲ್ಲಿ ಮೊದಲು ಪೂಜೆಯನ್ನು ಮಾಡಬೇಕು. ದೇವರಲ್ಲಿ ನನಗೆ ಈ ಬಗೆಯ ಕಷ್ಟಗಳು ಇವೆ ಅದನ್ನು ಪರಿಹರಿಸು ದೇವರೆ ಅಂತ ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಈ ದಾರದಿಂದ ಅದನ್ನು ಕಟ್ಟಿ ಈ ಸಸ್ಯವನ್ನು ಪೂರ್ವ ಅಥವಾ ಉತ್ತರ ದಿಕ್ಕಿನ ಭಾಗದಲ್ಲಿ ನೀವು ಕಟ್ಟಬೇಕು. ಅಥವಾ ಮನೆಯ ಮುಖ್ಯ ದ್ವಾರದ ಒಳಗಡೆ ಬೇರು ಸಮೇತವಾಗಿ ಕಟ್ಟಬೇಕು. ಹೀಗೆ ಮಾಡುವುದರಿಂದ ನಿಮ್ಮ ಮನೆಯ ಒಳಗಡೆ ಯಾವುದೇ ನಕಾರಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ.

ಜೊತೆಗೆ ಸಕಾರಾತ್ಮಕ ಶಕ್ತಿಗಳ ವಾತಾವರಣ ಸೃಷ್ಟಿ ಆಗುತ್ತದೆ. ಹಾಗೆಯೇ ಯಾವುದೇ ಕೆಟ್ಟ ದೃಷ್ಟ ಶಕ್ತಿಗಳ ಆಹ್ವಾನ ಆಗುವುದಿಲ್ಲ. ಏಕೆಂದರೆ ಈ ಸಸ್ಯದಲ್ಲಿ ಮುಕ್ಕೋಟಿ ದೇವತೆಗಳು ವಾಸ ಮಾಡಿರುತ್ತಾರೆ. ಹಾಗೆಯೇ ತ್ರಿಮೂರ್ತಿಗಳು ಬ್ರಹ್ಮ ವಿಷ್ಣು ಮಹೇಶ್ವರ ವಾಸ ಮಾಡಿರುತ್ತಾರೆ. ಅಂತ ವಾಸ್ತು ಶಾಸ್ತ್ರ ತಿಳಿಸುತ್ತದೆ. ಮತ್ತು ಈ ಸಸ್ಯವನ್ನು ನಾವು ಬೇರು ಸಮೇತವಾಗಿ ಕಟ್ಟುವುದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಸಂತೋಷದ ವಾತಾವರಣ ನೆಲೆಸುತ್ತದೆ. ಹಾಗೆಯೇ ನಿಮ್ಮ ಮನೆಯ ಸದಸ್ಯರಿಗೆ ಯಾವುದೇ ಅನಾರೋಗ್ಯದ ಸಮಸ್ಯೆ ಬರುವುದಿಲ್ಲ. ಅಷ್ಟೊಂದು ನಿಮ್ಮನ್ನು ಈ ಸಸ್ಯ ರಕ್ಷಣೆಯನ್ನು ಮಾಡುತ್ತದೆ.

ಈ ಸಸ್ಯ ಮನೆಯ ರಕ್ಷಣೆಗೆ ಮಾತ್ರವಲ್ಲದೆ ಆರೋಗ್ಯವಾಗಿ ಕೂಡ ಬಳಕೆ ಮಾಡಿಕೊಳ್ಳಬಹುದು. ಹೊಟ್ಟೆ ನೋವಿಗೆ, ಚರ್ಮವ್ಯಾಧಿ ಸಮಸ್ಯೆ ಯಾವುದೇ ಬಗೆಯ ಚರ್ಮದ ಸಮಸ್ಯೆಯಿದ್ದರೆ ಈ ಸಸ್ಯದ ಜೆಲ್ ಅನ್ನು ಹಚ್ಚುವುದರಿಂದ ಕ್ರಮೇಣ ಕಡಿಮೆ ಆಗುತ್ತದೆ. ಹಾಗೆಯೇ ಇನ್ನಿತರ ಹಲವಾರು ಬಗೆಯ ಆರೋಗ್ಯ ಪ್ರಯೋಜನವನ್ನು ಕೂಡ ಹೊಂದಿದೆ. ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಾಸ್ತು ಶಾಸ್ತ್ರದಲ್ಲಿ ಕೂಡ ಈ ಸಸ್ಯ ತುಂಬಾನೇ ಪರಿಣಾಮಕಾರಿ ಆಗಿ ಕೆಲಸವನ್ನು ಮಾಡುತ್ತದೆ. ಈ ಮಾಹಿತಿ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭದಿನ.

Leave a Reply

Your email address will not be published. Required fields are marked *