ಮನೆಯ ಸುತ್ತಮುತ್ತ ಗಿಡ-ಮರಗಳನ್ನು ಬೆಳೆಸುವುದು ಒಳ್ಳೆಯ ಕೆಲಸ ಮತ್ತು ಮನೆಯ ಸುತ್ತಮುತ್ತ ಕೆಲವೊಂದು ಗಿಡಗಳು ಮರಗಳು ಇರುವುದು ಕೂಡ ಮನೆಗೆ ಒಳ್ಳೆಯದು, ಹಾಗೆ ವಾತಾವರಣಕ್ಕೂ ಕೂಡ ಒಳ್ಳೆಯದು.‌ ಆದರೆ ಶಾಸ್ತ್ರಗಳ ಪ್ರಕಾರ ಕೆಲವೊಂದು ಗಿಡಮರಗಳನ್ನು ಮನೆಯ ಆವರಣದಲ್ಲಿ ಹಾಗೂ ಮನೆಯ ಒಳಗೆ ಬೆಳೆಸಲೆ ಬಾರದು.

ಇದರಿಂದ ಮನೆಗೆ ನಕಾರಾತ್ಮಕತೆಯ ಶಕ್ತಿ ಪಸರಿಸಬಹುದು ಎಂಬ ಕಾರಣಕ್ಕಾಗಿ ಹಿರಿಯರು ಇಂತಹ ಕೆಲವೊಂದು ಗಿಡಮರಗಳನ್ನು ಮನೆಯ ಆವರಣದಲ್ಲಿ ಬೆಳಸಲೇಬಾರದು ಅಂತಹ ಗಿಡಮರಗಳ ಬಗ್ಗೆ ನಾವು ಪರಿಚಯಿಸಿ ಕೊಡುತ್ತೇವೆ, ಅವುಗಳನ್ನು ನೀವು ಮನೆಯ ಒಳಗೆ ಅಥವಾ ಮನೆಯ ಆವರಣದಲ್ಲಿ ಬೆಳೆಸಿಕೊಳ್ಳಬೇಡಿ.

“ಮನೆಗೊಂದು ಮರ ಹಾಗೂ ಊರಿಗೊಂದು ವನ” ಈ ಮಾತು ಎಷ್ಟು ಅರ್ಥಪೂರ್ಣವಾಗಿದೆ. ಅದೇ ರೀತಿ ನಾವು ಕೆಲವೊಂದು ಮರಗಿಡಗಳನ್ನು ಮನೆಯ ಬಳಿ ಬೆಳೆಸಿಕೊಂಡರೆ ಅಂತಹಾ ಗಿಡಮರಗಳು ಮನೆಗೆ ನಕಾರಾತ್ಮಕತೆಯನ್ನು ಪಸರಿಸಿ ಮನೆಯ ವಾತಾವರಣವನ್ನು ಹಾಳು ಮಾಡುತ್ತದೆ, ಮನೆಯಲ್ಲಿ ಇರುವ ನೆಮ್ಮದಿಯನ್ನು ನಾಶ ಮಾಡುತ್ತದೆ.

ಅಂತಹ ಮರಗಳಲ್ಲಿ ಮೊದಲನೆಯದಾಗಿ ಹುಣಸೆ ಮರ, ಹೌದು ಹುಣಸೇ ಮರದಲ್ಲಿ ನಕಾರಾತ್ಮಕ ಶಕ್ತಿಯ ವಾಸ ಇರುತ್ತದೆ ಎಂದು ನಾವು ಮೊದಲಿನಿಂದಲೂ ಕೇಳಿಕೊಂಡು ಬಂದಿರುತ್ತೇವೆ.

ಆದ್ದರಿಂದಲೇ ಮನೆಯ ಆವರಣದಲ್ಲಿ ಅಥವಾ ಮನೆಯ ಹತ್ತಿರವೇ ಹುಣಸೆ ಮರವನ್ನು ಬೆಳೆಸಬಾರದು ಮನೆಯಿಂದ ದೂರದಲ್ಲಿ ಜಾಗವಿದ್ದರೆ ಅಲ್ಲಿ ಹುಣಸೆ ಮರವನ್ನು ಬೆಳೆಸಬಹುದು.

ಎರಡನೆಯದಾಗಿ ಅರಳಿಮರ, ಈ ಮರವನ್ನು ಮನೆಯ ಬಳಿ ಬೆಳೆಸಬಾರ ಅಂತ ನೀವು ಅಂದುಕೊಳ್ಳಬಹುದು, ಆದರೆ ಅರಳಿ ಮರದಲ್ಲಿ ಸಕಾರಾತ್ಮಕ ಶಕ್ತಿಯ ಜೊತೆಗೆ ನಕಾರಾತ್ಮಕ ಶಕ್ತಿ ಕೂಡ ವಾಸವಿರುವ ಕಾರಣ, ಇದನ್ನು ಹೆಚ್ಚಾಗಿ ದೇವಸ್ಥಾನಗಳಲ್ಲಿ ಮಾತ್ರ ಬೆಳೆಸಲಾಗುತ್ತದೆ.

ಮನೆಯ ಆವರಣದಲ್ಲಿ ಬೆಳೆಸುವುದಿಲ್ಲ. ಇನ್ನು ಶಮಿ ಗಿಡ ಈ ಗಿಡವನ್ನು ಯಾವುದೇ ಕಾರಣಕ್ಕೂ ನಿಮ್ಮ ಮನೆಯ ಒಳಗೆ ಬೆಳೆಸಬೇಡಿ. ನಿಮಗಿದು ತಿಳಿದಿರಲಿ ತುಳಸಿ ಗಿಡವನ್ನು ಸಹ ಮನೆಯ ಒಳಗೆ ಬೆಳೆಸಬೇಡಿ ತುಳಸಿ ಗಿಡವನ್ನು ನಿಮ್ಮ ಮನೆಯ ಆವರಣದಲ್ಲಿ ಬೆಳೆಸಿದರೆ ಸಾಕು ಇದನ್ನು ಮನೆಯ ಒಳಗೆ ಬೆಳೆಸುವುದು ಬೇಡ.

ಮುಳ್ಳಿನ ಗಿಡ ಅಂದರೆ ಕ್ಯಾಕ್ಟಸ್ ಗಿಡ ಇದನ್ನು ನೀವೂ ನೋಡಿರುತ್ತೀರಿ ಶಾಸ್ತ್ರಗಳು ತಿಳಿಸುತ್ತವೆ ಗಿಡದಲ್ಲಿ ಮುಳ್ಳುಗಳೇ ಇದ್ದರೆ ಅಂತಹ ಗಿಡಗಳನ್ನು ಮನೆಯಲ್ಲಿ ಆಗಲೇ ಮನೆ ಯಾವ ಆವರಣದಲ್ಲಿ ಆಗಲಿ ಬೆಳೆಸಬಾರದು ಯಾಕೆ ಅಂದರೆ ಹೇಗೆ ಈ ಗಿಡ ಮುಳ್ಳನ್ನು ಹೊಂದಿರುತ್ತದೆ,

ಅದೇ ರೀತಿ ಸಂಬಂಧಿಕರ ನಡುವೆ ಕೆಲವೊಂದು ಮನಸ್ತಾಪಗಳು ಉಂಟಾಗಿ ಅದು ಮುಳ್ಳಿನಂತೆ ಸಂಬಂಧಗಳನ್ನೂ ಹಾಳು ಮಾಡುತ್ತದೆ. ಆದಕಾರಣ ಇಂತಹ ಮುಳ್ಳಿರುವ ಗಿಡಗಳನ್ನು ಮನೆಯಲ್ಲಿ ಅಥವಾ ಮನೆಯ ಆವರಣದಲ್ಲಿ ಬೆಳೆಸಬೇಡಿ ಯಾಕೆಂದರೆ ಇಂತಹ ಗಿಡಗಳಿಂದ ಮನೆಗೆ ನಕಾರಾತ್ಮಕತೆಯ ಪ್ರಭಾವ ಹೆಚ್ಚುತ್ತದೆ.

ಸೂಚನೆ: ನಾವು ಹಾಕುವ ಎಲ್ಲ ಮಾಹಿತಿಗಳು ನಮ್ಮ ಸ್ವಂತ ಅನುಭವದ ಮತ್ತು ನಮ್ಮ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದರರಲ್ಲ.

Leave a Reply

Your email address will not be published. Required fields are marked *