ಎರಡು ಹೊತ್ತಿನ ಊಟ ಮಾಡುವ ಸಂದರ್ಭದಲ್ಲಿ ಒಂದು ಹೊತ್ತು ನೀವು ಮಜ್ಜಿಗೆ ಕುಡಿದರೆ ಅದು ನಿಮ್ಮ ಆರೋಗ್ಯ ಕಾಪಾಡು ವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಲಿನ ಉತ್ಪನ್ನಗಳನ್ನು ಮಿತ ಪ್ರಮಾಣದಲ್ಲಿ ಬಳಕೆ ಮಾಡಿದರೆ ಅದರಿಂದ ದೇಹದ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ ಎಂದು ಆಯುರ್ವೇದವು ಹೇಳುತ್ತದೆ. ಅದರಲ್ಲೂ ಹಾಲು, ಮೊಸರು ಹಾಗೂ ಮಜ್ಜಿಗೆಯನ್ನು ದಿನನಿತ್ಯವು ಸೇವಿಸಿದರೆ ಅದರಿಂದ ಆರೋಗ್ಯವಾಗಿರ ಬಹುದು ಎಂದು ಹೇಳಲಾಗುತ್ತದೆ.ಹಾಲಿನ ಉತ್ಪನ್ನಗಳಲ್ಲಿ ಕೊಬ್ಬಿನಾಂಶವಿದ್ದರೂ ಅದು ಮಿತ ಪ್ರಮಾಣದಲ್ಲಿ ದೇಹಕ್ಕೆ ಲಭ್ಯವಾದರೆ ಆಗ ಯಾವುದೇ ಅಡ್ಡ ಪರಿಣಾಮಗಳು ಆಗದು. ಕೆಲವೊಂದು ಆಹಾರ ಗಳನ್ನು ಸಾತ್ವಿಕ ಆಹಾರಗಳು ಎಂದು ಆಯುರ್ವೇದವು ಹೇಳಿದೆ. ಇದರಲ್ಲಿ ಮಜ್ಜಿಗೆಯು ಒಂದಾಗಿದೆ. ಊಟವಾದ ಬಳಿಕ ಒಂದು ಲೋಟ ಮಜ್ಜಿಗೆ ಕುಡಿದರೆ ಆಗ ಹೊಟ್ಟೆ ಉಬ್ಬರ, ತೇಗು, ಬಾಯಿಯಲ್ಲಿ ನೀರು ಬರುವುದು ಇತ್ಯಾದಿ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಊಟದ ಬಳಿಕ ಒಂದು ಲೋಟ ಮಜ್ಜಿಗೆ ಸೇವಿಸಿದರೆ ಆಗ ನಿಮ್ಮ ಊಟವು ಪರಿಪೂರ್ಣವಾಗುವುದು.
ನಾವು ಆಧುನೀಕರಣಕ್ಕೆ ಹೊಂದಿಕೊಂಡು ಮಜ್ಜಿಗೆಯಂತಹ ಆರೋಗ್ಯಕಾರಿ ಪಾನೀಯವನ್ನು ಕಡೆಗಣಿಸಿ, ತಂಪು ಪಾನೀಯ ಗಳನ್ನು ಊಟವಾದ ಬಳಿಕ ಕುಡಿಯುತ್ತಿದ್ದೇವೆ. ಇದು ಆರೋಗ್ಯಕ್ಕೆ ತುಂಬಾ ಮಾರಕ. ಇದರ ಬದಲು ಮಜ್ಜಿಗೆ ಕುಡಿದರೆ ಅದರಿಂದ ದೇಹವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ನೆರವಾಗುವುದು. ಇಷ್ಟು ಮಾತ್ರವಲ್ಲದೆ ತುಂಬಾ ಸೆಕೆ ಅಥವಾ ಉಷ್ಣತೆ ಇರುವ ಸಂದರ್ಭದಲ್ಲಿ ಇದು ದೇಹಕ್ಕೆ ಶಮನ ನೀಡುವುದು. ಎರಡು ಹೊತ್ತಿನ ಊಟ ಮಾಡುವ ಸಂದರ್ಭ ದಲ್ಲಿ ಒಂದು ಹೊತ್ತು ನೀವು ಮಜ್ಜಿಗೆ ಕುಡಿದರೆ ಅದು ನಿಮ್ಮ ಆರೋಗ್ಯ ಕಾಪಾಡು ವುದರಲ್ಲಿ ಯಾವುದೇ ಸಂಶಯವಿಲ್ಲ. ಮಜ್ಜಿಗೆಯಲ್ಲಿ ಸಿಗುವ ಅದ್ಭುತ ಲಾಭಗಳು ಯಾವುದು ಎಂದು ತಿಳಿಯೋಣ ಬನ್ನಿ ಫ್ರೆಂಡ್ಸ್.
ಮಜ್ಜಿಗೆಗೆ ಹಲವಾರು ರೀತಿಯ ಮಸಾಲೆಗಳನ್ನು ಹಾಕಿಕೊಂಡು ತಯಾರಿಸಲಾಗುತ್ತದೆ. ಶುಂಠಿ, ಕಾಳುಮೆಣಸು ಮತ್ತು ಜೀರಿಗೆ, ಹಸಿ ಮೆಣಸುವ ಹಾಕಿಕೊಂಡು ಮಜ್ಜಿಗೆ ತಯಾರಿಸಿದರೆ ಆಗ ಅದು ರುಚಿಕರವಾಗಿರುವುದು ಮಾತ್ರವಲ್ಲದೆ ಜೀರ್ಣಕ್ರಿಯೆ ವ್ಯವಸ್ಥೆಗೆ ನೆರವಾಗುವುದು. ಇದು ಎಣ್ಣೆಯುಕ್ತ ಆಹಾರವನ್ನು ಜೀರ್ಣಿಸಲು ಮತ್ತು ಹೊಟ್ಟೆಯ ಪದರಕ್ಕೆ ಶಮನ ನೀಡುವುದು. ಅಜೀರ್ಣ ಮತ್ತು ದೇಹದ ಉಷ್ಣತೆ ಕಡಿಮೆ ಮಾಡಲು ಇದು ಅತ್ಯುತ್ತಮ ಪಾನೀಯವಾಗಿದೆ.ಜೀರ್ಣಕ್ರಿಯೆಗೆನೆರವಾಗುವ ಜತೆಗೆ ಇದರಲ್ಲಿ ಇರುವಂತಹ ಪ್ರೊಬಯೊಟಿಕ್ ಸೂಕ್ಷ್ಮಜೀವಿಗಳು, ಹೊಟ್ಟೆಯ ಸೋಂಕಿಗೆ ಕಾರಣವಾಗುವಂತಹ ಬ್ಯಾಕ್ಟೀರಿಯಾದ ಬೆಳವಣಿಗೆ ಯನ್ನು ತಡೆಯುವುದು. ಮಜ್ಜಿಗೆ ಯಲ್ಲಿ ಕಂಡುಬರುವಂತಹ ರಿಬೊಫ್ಲಾವಿನ್ ಎನ್ನುವ ವಿಟಮಿನ್ ಯಕೃತ್ ಸರಿಯಾಗಿ ಕಾರ್ಯ ನಿರ್ವಹಿಸಲು ಮತ್ತು ನಿರ್ವಿಷಗೊಳಿಸಲು ನೆರವಾಗುವುದು.