Breaking News
Home / Featured / ನಾಲ್ಕು ಜನ ಗೆಳಯರು ಸ್ನೇಹದ ಗೂಡಲ್ಲಿ ಕಟ್ಟಿದ ಹಾಲಿನ ಡೈರಿ ಇಂದು 100 ಕೋಟಿಯ ವಹಿವಾಟು ನಡೆಸುತಿದ್ದೆ, ಈ ಕಥೆ ನಿಮಗೆ ಸ್ಫೂರ್ತಿಯಾಗಬಹುದು..!

ನಾಲ್ಕು ಜನ ಗೆಳಯರು ಸ್ನೇಹದ ಗೂಡಲ್ಲಿ ಕಟ್ಟಿದ ಹಾಲಿನ ಡೈರಿ ಇಂದು 100 ಕೋಟಿಯ ವಹಿವಾಟು ನಡೆಸುತಿದ್ದೆ, ಈ ಕಥೆ ನಿಮಗೆ ಸ್ಫೂರ್ತಿಯಾಗಬಹುದು..!

ಹೌದು ನಾವು ಒಂದು ಏನಾದರು ಸಾಧನೆ ಮಾಡಬೇಕು ಅಂದ್ರೆ ಅದರ ಹಿಂದೆ ಹಲವು ವ್ಯಕ್ತಿಗಳು ಇರುತ್ತಾರೆ ಆದ್ರೆ ಇವರ ಸಾಧನೆಯಲ್ಲಿ ಈ ನಾಲ್ಕು ಜನ ಗೆಳೆಯರೇ ಒಬ್ಬರಿಗೆ ಒಬ್ಬರು ನಂಬಿಕೊಂಡು ಒಂದು ಸಾಧನೆಯ ಮೆಟ್ಟಿಲು ಹತ್ತಿದ್ದಾರೆ ಖಂಡಿತ ಇದು ಎಷ್ಟೋ ಯುವಕರಿಗೆ ಮಾದರಿ.

ನಾಲ್ಕು ಜನ ಗೆಳೆಯರು ವಿವಿಧ ಸಾಪ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತಿದ್ದರು ಇವರಿಗೆ ಬರುವ ಸಂಬಳ ಅದು ಮನೆಗೆ ಸಾಕಾಗುತ್ತಿತ್ತು ಆದ್ರೆ ಇವರ ಸಂಬಳ ಬಿಟ್ಟು ಕಂಪನಿಯಲ್ಲಿ ಇವರ ಉಳಿತಾಯ ಸಂಬಳದಿಂದ ಈ ನಾಲ್ಕು ಜನ ಒಂದು ದಿನ ಯೋಚನೆ ಮಾಡಿ ತಮ್ಮ ಉಳಿತಾಯದ ಹಣವನ್ನು ಉಪಯೋಗಿಸಕೊಂಡು ನಾವು ಏನಾದ್ರು ಮಾಡಬೇಕು ಅಂತ ಯೋಚನೆ ಮಾಡಿ ಒಂದು ದಿನ ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.

2012 ರಲ್ಲಿ ಪ್ರಾರಂಭವಾದ ನಾಲ್ಕು ಸಂಗಾತಿ-ಕಮ್-ಸ್ನೇಹಿತರು, ಅಭಿನವ್ ಶಾ (35), ಹರ್ಷ ಥಕ್ಕರ್ (40), ರಾಕೇಶ್ ಶರ್ಮಾ (38) ಮತ್ತು ಅಭಿಷೇಕ್ ರಾಜ್ (36) ಇವರು ಯೋಚನೆ ಮಾಡಿ ಕಟ್ಟಿದ ಸಾಧನೆಯೇ ಒಸಾಮ್ ಡೈರಿ ಪ್ರಸ್ತುತ 19 ಜಿಲ್ಲೆಗಳಲ್ಲಿದೆ ಮತ್ತು ಜಾರ್ಖಂಡ್ನ 140 ವಿತರಕರು ಮತ್ತು ಸುಮಾರು 3,000 ಚಿಲ್ಲರೆ ವ್ಯಾಪಾರಿಗಳೊಂದಿಗೆ ಕೆಲಸ ಮಾಡುತ್ತಿದೆ.

ಎಲ್ಲರು ಮಧ್ಯಮ ಕುಟುಂಬದಿಂದ ಬೆಳೆದು ಬಂದವರು ಇದರಲ್ಲಿ ರಾಕೇಶ್ ಶರ್ಮಾ ನಿಗೆ ಈ ಡೈರಿಯ ಬಗ್ಗೆ ಆಸಕ್ತಿ ಇತ್ತು ಯಾಕೆ ಅಂದ್ರೆ ಅವರ ಪಕ್ಕದ ಊರಿನಲ್ಲಿ ಒಂದು ಚಿಕ್ಕ ಡೈರಿ ಇತ್ತು ಅದನ್ನು ನೋಡಿಕೊಂಡು ಬೆಳೆದಿದ್ದ ರಾಕೇಶ್ ಗೆ ಒಂದು ಕನಸಿತ್ತು ಮುಂದೆ ಒಂದು ದಿನ ನಾನು ಒಂದು ದೊಡ್ಡ ಡೈರಿ ಕಟ್ಟಬೇಕು ಅನ್ನೋ ಅಸೆ ಬೆಳೆದಿತ್ತು ಅದಕ್ಕೆ ಸರಿಯಾಗಿ ತನ್ನ ಗೆಳೆಯರ ಬೆಂಬಲ ಕೂಡ ಸಿಕ್ಕಿತು.

ನಾಲ್ಕು ಜನ ಗೆಳೆಯರು ಸೇರಿಕೊಂಡು ಒಂದು ಎಕರೆ ಭೂಮಿಯನ್ನು ಖರೀದಿ ಮಾಡಿ ಅದರಲ್ಲಿ ತಮ್ಮ ಕನಸಿನ ಡೈರಿ ಎಂಬ ಬೀಜವನ್ನು ಬಿಟ್ಟಿದ್ದರು ಅದು ನಿದಾನವಾಗಿ ಬೆಳೆದು ಇಂದು ಜಾರ್ಕಂಡನಲ್ಲಿ ಒಂದು ದೊಡ್ಡ ಮರವಾಗಿ ಬೆಳೆದಿದೆ ಮತ್ತು ಜಾರ್ಕಂಡನಲ್ಲಿ ಇವರ ಹಾಲಿಗೆ ತುಂಬಾನೇ ಬೇಡಿಕೆ ಇದೆ.

ಆದ್ರೆ ಇವರಲ್ಲಿ ಇಂದಿಗೂ ಯಾವುದೇ ಬಿನ್ನಾಭಿಪ್ರಾಯ ಕಂಡುಬಂದಿಲ್ಲವಂತೆ ಮತ್ತು ಯಾರಾದರೂ ಒಂದು ವಿಚಾರ ಹೇಳಿದ್ರೆ ನಾಲ್ಕು ಜನ ಗೆಳೆಯರು ಕೂತು ಆ ವಿಚಾರವನ್ನು ಚರ್ಚೆ ಮಾಡಿ ಒಂದು ಅಂತಿಮ ನಿರ್ಧಾರಕ್ಕೆ ಬರುವುದು ಇವರ ಅಭ್ಯಾಸ.


ನೋಡಿ ಗೆಳೆಯರು ಅಂದ್ರೆ ಕೇವಲ ಮೋಜು ಮಸ್ತಿ ಮಾಡುವಾಗ ಜೊತೆಗೆ ಇರುವ ಗೆಳೆಯರಿಗಿಂತ ನಾವು ಕಷ್ಟ ಪಟ್ಟು ಬೆಳೆಯುವಾಗ ಮತ್ತು ನಮ್ಮ ಆಸೆಗೆ ಬೆಂಬಲ ಕೊಟ್ಟು ಬೆಳೆಸುವಂತ ಗೆಳೆಯರು ನಮ್ಮ ಜೀವನದಲ್ಲಿ ಇದ್ರೆ ಏನ್ ಬೇಕಾದರೂ ಸಾದಿಸಬಹುದು.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *