ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ ಆಸ್ಪತ್ರೆಗೆ ಹೋಗಲು ಆಗುವುದಿಲ್ಲ ಆದ್ದರಿಂದ ದಕ್ಕೆ ನಮ್ಮ ಮನೆಯಲ್ಲಿಯೇ ಸಿಂಪಲ್ ಮದ್ದುಗಳನ್ನೂ ಬಳಸುವುದರಿಂದ ತಲೆನೋವನ್ನು ಗುಣಪಡಿಸಿಕೊಳ್ಳಬಹುದಾಗಿದೆ.

ತಲೆ ನೋವಿಗೆ ಶೀಘ್ರ ಪರಿಹಾರ ಬೇಕಾದರೆ ನೀರಿಗೆ ಸ್ವಲ್ಪ ಚಕ್ಕೆಯ ಪುಡಿಯನ್ನು ಮಿಶ್ರಣ ಮಾಡಿ ಹಚ್ಚಿ 30 ನಿಮಿಷಗಳ ನಂತರ ತೊಳೆಯುವುದರಿಂದ ತಲೆನೋವು ಕಡಿಮೆಯಾಗುತ್ತದೆ.

ಒಣ ದ್ರಾಕ್ಷಿ: ದ್ರಾಕ್ಷಿ ಹಣ್ಣಿಗೆ ನೀರು ಹಾಕಿ ರುಬ್ಬಿಕೊಳ್ಳಬೇಕು,ರುಬ್ಬಿಕೊಂಡ ಮಿಶ್ರಣವನ್ನು ದಿನದಲ್ಲಿ 2 ಬಾರಿ ಸೇವಿಸುತ್ತಾ ಬಂದರೆ ತಲೆನೋವಿನ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.

ಹಸಿ ಶುಂಠಿ: ನೀವು ಕುಡಿಯುವ ಕಾಫಿ ಅಥವಾ ಟೀ ಜೊತೆ ಸ್ವಲ್ಪ ಹಸಿ ಶುಂಠಿಯನ್ನು ಬೆರಸಿ ಕುಡಿಯುವುದರಿಂದನು ಸಹ ತಲೆನೋವಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ತಲೆನೋವಿಗೆ ತಲೆಗೆ ವಾರದಲ್ಲಿ ಒಂದು ದಿನ ಆಯಿಲ್ ಮಸಾಜ್ ಮಾಡುವುದರಿಂದ ಸಹ ತಲೆನೋವಿಗೆ ಗುಡ್ ಬಾಯ್ ಹೇಳಬಹುದಾಗಿದೆ.

Leave a Reply

Your email address will not be published. Required fields are marked *