ಕಪ್ಪು, ಹಸಿರು ಬಣ್ಣದ ದ್ರಾಕ್ಷಿ ನೀವು ಸವಿದಿರಬಹುದು, ಆದ್ರೆ ಟೊಮ್ಯಾಟೋದಂತೆ ಕೆಂಪಾಗಿರುವ ದುಬಾರಿ ದ್ರಾಕ್ಷಿ ಹಣ್ಣನ್ನು ಟೇಸ್ಟ್ ಮಾಡಿದ್ದೀರಾ? ಬಿಡಿ, ಭಾರತೀಯ ಶ್ರೀ ಸಾಮಾನ್ಯ ಈ ಹಣ್ಣಿನ ಬೆಲೆ ಕೇಳಿದರೆ ದೂರ ಹೋಗುತ್ತಾನೆ. ಜಪಾನಿನಲ್ಲಿ 24 ಕೆಂಪು ದ್ರಾಕ್ಷಿ ಹಣ್ಣಿನ ಬೆಲೆ ಬರೋಬ್ಬರಿ 7.5 ಲಕ್ಷ ರು.

ಇದು ಜೋಕ್ ಅಲ್ಲ. ವಿಶೇಷ ಜಾತಿಗೆ ಸೇರಿದ ಈ ಕೆಂಪು ದ್ರಾಕ್ಷಿಯ ಒಂದು ಹಣ್ಣು ಸುಮಾರು 20 ಗ್ರಾಂ ತೂಗುತ್ತದೆ. ಹನ್ನೆರಡು ವರ್ಷಗಳ ಹಿಂದೆ ಜಪಾನಿನ ಇಶಿಕಾವಾ ಪ್ರಾಂತ್ಯದ ಸರ್ಕಾರ ಈ ತಳಿಯನ್ನು ಬೆಳೆಸಿತು. ಬೆಲೆ ಕೇಳಿದರೆ ಸಾಕು, ಇದು ಸಿರಿವಂತರ ಹಣ್ಣೆಂದು ಹೇಳುವುದೇ ಬೇಡ.

ಈ ಹಣ್ಣನ್ನು ರೂಬಿ ರೋಮನ್ ಎಂದು ಕರೆಯುತ್ತಾರೆ. ಇದು ಸಿಹಿಯಾಗಿದ್ದು, ರಸಭರಿತವಾಗಿರುತ್ದೆ. ಜೊತೆಗೆ ಸ್ವಲ್ಪ ಅಸಿಡಿಕ್ ಕೂಡ ಆಗಿದೆ. ಇದನ್ನು ಇಲ್ಲಿ ಶುಭ ಸಂದರ್ಭದಲ್ಲಿ ಅಥವಾ ಕೆಲಸದ ಪ್ರೊಮೋಷನ್ ವೇಳೆ ಉಡುಗೊರೆಯಾಗಿ ನೀಡುತ್ತಾರೆ. ಈ ಹಣ್ಣಿಗೆ ಬೇಡಿಕೆ ಹೆಚ್ಚಿರುವುದರಿಂದ ಬೆಲೆಯೂ ಹೆಚ್ಚು. ಈ ಹಣ್ಣು ತಯಾರಾಗಿ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಹಣ್ಣನ್ನು ಹರಾಜು ಮಾಡಲಾಗಿತ್ತು. ಈ ಹಣ್ಣನ್ನು 7.5 ಲಕ್ಷ ರೂ. ಕೊಟ್ಟು ಜಪಾನಿನ ಹಯಕುರಾಕೂಸೋ ಕಂಪನಿ ಖರೀದಿಸಿದೆ. ನೀವೇ ಲೆಕ್ಕ ಹಾಕಿ ಈ ಹಣ್ಣಿಗೆ ಅದೆಂಥಾ ಡಿಮ್ಯಾಂಡ್, ಅದೆಷ್ಟು ರುಚಿ ಇರಬಹುದೆಂದು.

Leave a Reply

Your email address will not be published. Required fields are marked *