ಸಾಮಾನ್ಯವಾಗಿ ವೈದ್ಯರು ಅನಾರೋಗ್ಯದ ಸಮಯದಲ್ಲಿ ಮೋಸಂಬಿ ಹಣ್ಣು ಅಥವಾ ಮೋಸಂಬಿ ಜ್ಯೂಸ್ ಕುಡಿಯಲು ಹೇಳುತ್ತಾರೆ. ಕಾರಣ ಅದರಲ್ಲಿರುವ ಅಂತಹ ಆರೋಗ್ಯಕಾರಿ ಗುಣಗಳು. ಅಂತಹ ಎಷ್ಟೋ ಆರೋಗ್ಯಕಾರಿ ಗುಣವನ್ನು ಹೊಂದಿರುವ ಈ ಮೋಸಂಬಿ ಹಣ್ಣು ಇನ್ನು ಎಷ್ಟು ರೋಗಗಳಿಗೆ ರಾಮಬಾಣ ಅನ್ನೋದನ್ನು ನೋಡೋಣ ಬನ್ನಿ.

ನಿಮಗೆ ವಾಕರಿಕೆ ಸಮಸ್ಯೆ ಇದ್ದರೆ ಮೋಸಂಬಿ ಹಣ್ಣಿನ ರಸದ ಜೊತೆ ಅಷ್ಟೇ ಸಮ ಪ್ರಮಾಣದಲ್ಲಿ ಎಳನೀರನ್ನು ಸಮಪ್ರಮಾಣದಲ್ಲಿ ಬೆರೆಸಿ ಕುಡಿದರೆ ವಾಕರಿಕೆ ಅಥವಾ ವಾಂತಿ ಕಡಿಮೆಯಾಗುತ್ತದೆ.

ಮೋಸಂಬಿಯನ್ನು ಅರ್ಧಕ್ಕೆ ಕತ್ತರಿಸಿ ಅದರ ಒಂದು ಭಾಗವನ್ನು ತೆಗೆದುಕೊಂಡು ಮುಖದ ಮೇಲೆ ಮತ್ತು ಕಣ್ಣಿನ ಸುತ್ತ ಕಪ್ಪು ಕಲೆಗಳೇನಾದರೂ ಇದ್ದರೆ ಅದರ ಮೇಲೆ ಉಜ್ಜಿದರೆ ಕಲೆಗಳು ಶಮನವಾಗುತ್ತದೆ. ಅಷ್ಟೇ ಅಲ್ಲದೆ ಕುತ್ತಿಗೆ, ಮೊಣಕಾಲು, ಮೊಣಕೈ ಕಪ್ಪಾಗಿದ್ದರೆ ಆ ಜಾಗಕ್ಕೆ ಮೋಸಂಬಿ ರಸವನ್ನು ಹಾಕಿ ತಿಕ್ಕಿದರೆ ಕಪ್ಪುಕಲೆ ಕಡಿಮೆಯಾಗುತ್ತದೆ.

ನಿಮಗೆ ಅಜೀರ್ಣ ಸಮಸ್ಯೆ ಅಥವಾ ಮಲಬದ್ಧತೆಯ ಸಮಸ್ಯೆ ಇದ್ದರೆ ಮೋಸಂಬಿ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ಈ ಸಮಸ್ಯೆಗಳು ನಿವಾರಣೆಯಾಗುತ್ತವೆ.

ಮೋಸಂಬಿ ಸಿಪ್ಪೆಯ ಪೇಸ್ಟ್‌ಗೆ ಅರಿಶಿನ ಹಾಕಿ ಕಲಸಿ ಮುಖಕ್ಕೆ ಪ್ಯಾಕ್‌ ಮಾಡಿದರೆ ಮೊಡವೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ತುಟಿ ಚರ್ಮ ಒಡೆದಿದ್ದರೆ ದಿನಕ್ಕೆ 2 ರಿಂದ 3 ಬಾರಿ ಮೋಸಂಬಿ ರಸ ಹಚ್ಚುವುದರಿಂದ ತುಟಿ ಮೃದುವಾಗುತ್ತದೆ.

Leave a Reply

Your email address will not be published. Required fields are marked *