ಈ ಶಿವನ ದೇವಾಲಯ ಪವಾಡ ಹಾಗು ನಿಗೂಢತೆಯಿಂದ ಕೂಡಿದೆ. ರಾಜಸ್ಥಾನ ಮೂಲದ ಅಚಲೇಶ್ವರ ಮಹಾದೇವ ಮಂದಿರ ಮೌಂಟ್‌ ಅಬುವಿನಿಂದ ಸುಮಾರು 11 ಕಿಲೋ ಮೀಟರ್‌ ದೂರದಲ್ಲಿ ಉತ್ತರ ಭಾಗದಲ್ಲಿದೆ.

ಈ ಅಚಲೇಶ್ವರ ಮಹಾದೇವ ಮಂದಿರ ಕಾಡಿನ ನಡುವೆ ಇರುವುದರಿಂದ ಅತಿ ಕಡಿಮೆ ಜನ ಇಲ್ಲಿ ದರ್ಶನ ಪಡೆಯಲು ಬರುತ್ತಿದ್ದರು. ಆದರೆ ಕೆಲವು ದಿನಗಳ ನಂತರ ಈ ಮಂದಿರದ ಮಹಿಮೆಯ ಬಗ್ಗೆ ಜನರಿಗೆ ತಿಳಿದು ಬರಲು ಆರಂಭವಾದ ಮೇಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರಲಾರಂಭಿಸಿದ್ದಾರೆ.

ಈ ದೇವಾಲಯದಲ್ಲಿ ನಡೆಯುವ ಶಿವನ ಪವಾಡ: ರಾಜಸ್ಥಾನದ ಈ ಶಿವಾಲಯವು ನಿಗೂಢ ಮಂದಿರವೆಂದು ನಂಬಲಾಗಿದೆ. ಈ ಅಚಲೇಶ್ವರ ಮಹಾದೇವ ಮಂದಿರದ ಶಿವಲಿಂಗವು ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ. ಬೆಳಿಗ್ಗೆ ಶಿವಲಿಂಗವು ಕೆಂಪು ಬಣ್ಣದಲ್ಲಿದ್ದರೆ, ಮಧ್ಯಾಹ್ನದ ವೇಳೆಗೆ ಕೇಸರಿ ಬಣ್ಣಕ್ಕೆ ಬದಲಾಗುತ್ತದೆ, ರಾತ್ರಿ ವೇಳೆಯಲ್ಲಿ ಶಿವಲಿಂಗದ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಪವಾಡವನ್ನು ನೋಡಲು ಪ್ರತಿ ದಿನ ಭಕ್ತರ ದಂಡು ತುಂಬಿರುತ್ತದೆ. ಭಕ್ತರು ಇದರಿಂದ ತಮ್ಮ ಇಷ್ಟಾರ್ಥಗಳು ಸಿದ್ದಿಸುತ್ತವೆಂದು ಭಾವಿಸುತ್ತಾರೆ.

ಮತ್ತೊಂದು ವಿಶೇಷ ಏನೆಂದರೆ? ಈ ನಿಗೂಢದ ಬಗ್ಗೆ ತಿಳಿಯಲು ನೆಲದಲ್ಲಿ ಸಾವಿರಾರು ಅಡಿ ಅಗೆದರೂ ಕೂಡ ಶಿವಲಿಂಗದ ಅಂತ್ಯ ಎಲ್ಲಿದೆಯೆಂದು ಇಲ್ಲಿಯವರೆಗೂ ತಿಳಿದುಬಂದಿಲ್ಲ. ಆದ್ದರಿಂದ ಈ ಶಿವಲಿಂಗದ ನಿಖರ ಉದ್ದವು ಯಾರಿಗೂ ಗೊತ್ತಾಗಿಲ್ಲ. ಅವಿವಾಹಿತ ಯುವಕರು ಮತ್ತು ಯುವತಿಯರು ತಮಗೆ ಸರಿಯಾದ ಜೋಡಿ ಸಿಗದಿದ್ದಾಗ ದೇವರ ಆಶೀರ್ವಾದ ಕೋರಿ ಮಂದಿರಕ್ಕೆ ಭೇಟಿ ನೀಡುತ್ತಾರೆ.

Leave a Reply

Your email address will not be published. Required fields are marked *