ಇತ್ತೀಚಿನ ದಿನಗಳಲ್ಲಿ ಮದುಮೇಹ ಕಾಯಿಲೆ ಅಥವಾ ಸಕ್ಕರೆ ಕಾಯಿಲೆಯು ಯಾವ ವಯಸ್ಸಿನ ಅಂತರವೇ ಇಲ್ಲದೆ ಚಿಕ್ಕವರಿಂದ ಇಡಿದು ದೊಡ್ಡವರ ತನಕ ಹರಡಿಕೊಂಡಿದೆ. ಆದರೆ ಇದನ್ನು ನಿಯಂತ್ರಿಸಲು ಏನು ಮಾಡಬೇಕು ಅನ್ನೋ ಚಿಂತೆ ಬಿಡಿ ಹಲವಾರು ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ನಾವು ಕೆಲವೊಂದು ಆಹಾರದ ಪದ್ದತಿಯನ್ನು ತಪ್ಪದೆ ಪಾಲಿಸಿದರೆ ಈ ರೋಗವನ್ನು ನಿಯಂತ್ರಿಸುವುದು ಕಷ್ಟವೇನಲ್ಲ ಆದ್ದರಿಂದ ಈ ಕೆಳಗಿನ ಆಹಾರ ಪದ್ಧತಿ ನೋಡಿ ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳಿ.

ಒಣ ಬೀಜಗಳು: ಬಾದಾಮಿ, ಗೇರು ಬೇಜ, ಪಿಸ್ತಾ, ಶೇಗಾ ಬೀಜ, ವಾಲ್ನಟ್ ನಂತಹ ಒಣ ಹಣ್ಣಿಗಳಲ್ಲಿ ಆರೋಗ್ಯಕರ ಪೌಷ್ಟಿಕಾಂಶ ಇರುತ್ತದೆ. ಆದ್ದರಿಂದ ಇವುಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ ಮತ್ತು ದೇಹದಲ್ಲಿ ಸಕ್ಕರೆ ಅಂಶ ಮಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಮೀನುಗಳು: ಮೀನು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಅದರಲ್ಲಿ ನಮ್ಮ ದೇಹಕ್ಕೆ ಬೇಕಾಗುವಂತಹ ಪ್ರೊಟೀನ್ ಅಂಶ ಇರುತ್ತದೆ ಆದ್ದರಿಂದ ಇಂತಹ ಮೀನಿನಲ್ಲಿರುವ ಪೌಷ್ಟಿಕಾಂಶವು ರಕ್ತನಾಳದಲ್ಲಿರುವ ಜೀವಕೋಶಗಳನ್ನು ಕಾಪಾಡಿ, ದೇಹದಲ್ಲಿ ರಕ್ತ ಸಂಚಲನವನ್ನು ವೃದ್ಧಿಸುತ್ತದೆ ಹಾಗೂ ಇದನ್ನು ಸೇವಿಸುವುದರಿಂದ ಡಯಾಬಿಟಿಸ್ ನಿಯಂತ್ರಿಸಬಹುದು.

ಮೊಟ್ಟೆ: ಪ್ರತಿದಿನವು ಕೋಳಿ ಮೊಟ್ಟೆಯನ್ನು ಆಹಾರದಲ್ಲಿ ಸೇವಿಸುವುದರಿಂದ ಇದು ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ನೊಡಿಕೊಳ್ಳುತ್ತದೆ. ಮೊಟ್ಟೆಯಲ್ಲಿ ಉತ್ತಮ ಪೌಷ್ಟಿಕಾಂಶ ಹಾಗೂ ಕೊಬ್ಬಿನಾಂಶ ಇರುವುದರಿಂದ ದೇಹಕ್ಕೆ ಒಳ್ಳೆಯ ಕೊಲೆಸ್ಟ್ರಾಲ್‍ಗಳನ್ನು ನೀಡಿ ಕೆಟ್ಟ ಕೊಲೆಸ್ಟ್ರಾಲ್‍ಗಳನ್ನು ದೂರವಿಡುತ್ತದೆ.

ಕಾಮಕಸ್ತೂರಿ ಬೀಜ: ದಿನನಿತ್ಯ ಆಹಾರದಲ್ಲಿ ನೇರವಾಗಿ ಅಥವಾ ಹಾಲು ನೀರು ಜ್ಯೂಸ್‍ನಲ್ಲಿ ಕಾಮಸ್ತೂರಿ ಬೀಜವನ್ನು ಸೇರಿಸಿ ತಿನ್ನುವುದರಿಂದ ದೇಹಕ್ಕೆ ಫೈಬರ್ ಅಂಶ ದೊರೆಯುತ್ತದೆ. ಹಾಗೆಯೆ ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಹಸಿರು ತರಕಾರಿಗಳು: ಹಸಿರು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶದ ಜೊತೆಗೆ ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರಿಸುತ್ತದೆ. ಅಷ್ಟೆ ಅಲ್ಲದೆ ಹಸಿರು ತರಕಾರಿ ಹೃದಯಕ್ಕೆ ಹಾಗೂ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಅಗಸೆ ಬೀಜ: ಅಗಸೆ ಬೀಜವನ್ನು ನೇರವಾಗಿ ಅಥವಾ ಪುಡಿ ಮಾಡಿ ಆಹಾರದೊಂದಿಗೆ ಸೇರಿಸಿ ತಿನ್ನುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುವುದರಿಂದ ದೇಹದಲ್ಲಿ ಸಕ್ಕರೆ ಅಂಶವು ಕೂಡ ನಿಯಂತ್ರಣವಾಗುತ್ತದೆ.

Leave a Reply

Your email address will not be published. Required fields are marked *