ಸರ್ಪಸುತ್ತು ಆದ ಜಾಗಕ್ಕೆ ಶುದ್ಧ ಜೇನುತುಪ್ಪವನ್ನು ತೆಳ್ಳಗೆ ಲೇಪ ಮಾಡಿದರೆ ನೋವು, ತುರಿಕೆ ಕಡಿಮೆಯಾಗುತ್ತದೆ. ದಾಸವಾಳದ ದಳಗಳನ್ನು ನೀರಲ್ಲಿ ಪೇಸ್ಟ್‌ ಮಾಡಿ ಗುಳ್ಳೆಗಳ ಮೇಲೆ ಲೇಪಿಸಿದರೆ ಉರಿ, ನೋವು ಮತ್ತು ಗುಳ್ಳೆಗಳು ಶಮನವಾಗುತ್ತವೆ.

ಜೇಷ್ಠಮಧುಗೆ ನೀರನ್ನು ಬೆರೆಸಿ ಕಷಾಯ ಮಾಡಿ ಸೇವಿಸಿದರೆ ಪಿತ್ತ ಶಮನವಾಗಿ ರಕ್ತ ಶುದ್ಧಿಯಾಗುತ್ತದೆ ಸರ್ಪಸುತ್ತು ಕಡಿಮೆಯಾಗುತ್ತದೆ.ಸರ್ಪಸುತ್ತು ಆದ ಜಾಗಕ್ಕೆ ಶುದ್ಧ ಕೊಬ್ಬರಿ ಎಣ್ಣೆಯನ್ನು ದಿನಕ್ಕೆ 2ರಿಂದ 3 ಬಾರಿ ಹಚ್ಚಿದರೆ ಉರಿ, ಕಡಿತ ಕಡಿಮೆಯಾಗಿ ಚರ್ಮ ಮೃದುವಾಗುತ್ತದೆ.

ಹಸುವಿನ ಹಾಲಿಗೆ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ ರಾತ್ರಿ ಮಲಗುವ ಮುನ್ನ ಸೇವಿಸಿದರೆ ರಕ್ತ ಶುದ್ಧಿಯಾಗಿ ಸರ್ಪಸುತ್ತು ಕಡಿಮೆಯಾಗುತ್ತದೆ. ಸರ್ಪಸುತ್ತು ಇರುವ ಜಾಗಕ್ಕೆ ಅಲೋವೆರಾ ಜೆಲ್‌ ಜತೆ ಜೇನುತುಪ್ಪ ಸೇರಿಸಿ ಲೇಪ ಮಾಡಿದರೆ ಬೇಗ ಗಾಯಗಳು ಮಾಯುತ್ತದೆ ಮತ್ತು ಕಲೆಗಳೂ ಇರುವುದಿಲ್ಲ.

ಬಾಳೆ ಎಲೆಯನ್ನು ನೀರಲ್ಲಿ ಪೇಸ್ಟ್‌ ಮಾಡಿ ಸರ್ಪಸುತ್ತು ಆದ ಜಾಗಕ್ಕೆ ಹಚ್ಚಿದರೆ ಉರಿ, ನೋವು ಎಲ್ಲಾ ಕಡಿಮೆಯಾಗಿ ಬೇಗ ಗುಣವಾಗುತ್ತದೆ. ಅಮೃತಬಳ್ಳಿ ಕಷಾಯವನ್ನು ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸೇವಿಸಿದರೆ ರಕ್ತ ಶುದ್ಧಿಯಾಗಿ ಸರ್ಪಸುತ್ತು ಗುಣವಾಗುತ್ತದೆ.

Leave a Reply

Your email address will not be published. Required fields are marked *