ನೀವು ಅಡುಗೆಗೆ ಅರಿಶಿನವನ್ನು ಹೆಚ್ಚು ಬಳಸಿದರೆ ಅಪಾಯ ಇದರಿಂದ ಹಲವು ರೋಗಗಳು ಬರುತ್ತವೆ. ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅರಸಿನವೂ ಹೆಚ್ಚು ಸೇವಿಸಿದರೆ ತೊಂದರೆ ಉಂಟುಮಾಡಬಹುದು.

ಜ್ವರ: ಹೌದು ನಾವು ಅರಿಶಿನವನ್ನು ಮಿತಕ್ಕಿಂತ ಹೆಚ್ಚಾಗಿ ಬಳಸಿದರೆ ಅದು ನಮಗೆ ಅನೇಕ ರೋಗಗಳನ್ನು ತರುವುದು ಖಂಡಿತಾ. ನೀವು ಅರಿಶಿನವನ್ನು ಹೆಚ್ಚಾಗಿ ಬಳಸಿದರೆ ನಿಮಗೆ ಜ್ವರದ ಸಮಸ್ಯೆ ಕಾಣಿಸಿಕೊಳ್ಳಬಹುದು ಆದೊಷ್ಟು ಮಿತವಾಗಿ ಬಳಸಿ.

ಹೊಟ್ಟೆ ಹಾಳು: ಒಂದು ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಅರಸಿನ ಪುಡಿ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಹೊಟ್ಟೆ ಹಾಳು ಮಾಡುತ್ತದೆ. ಹೆಚ್ಚು ಅರಸಿನ ಪುಡಿ ಸೇವಿಸುವುದರಿಂದ ಕೆಳಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.

ಮೂತ್ರಪಿಂಡ ಕಲ್ಲು: ಅರಸಿನದಲ್ಲಿರುವ ಆಕ್ಸಾಲೇಟ್ ಗಳು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು. ಈ ಆಕ್ಸಲೇಟ್ ಗಳು ಕ್ಯಾಲ್ಶಿಯಂ ಕಲ್ಲುಗಳಾಗಿ ಪರಿವರ್ತಿತವಾಗಬಹುದು.

ಬೇಧಿ, ತಲೆಸುತ್ತು: ಅರಸಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದರಿಂದ ಜೀರ್ಣಸಂಬಂಧಿ ಸಮಸ್ಯೆಗಳುಂಟಾಗಬಹುದು. ಇದರಿಂದ ತಲೆಸುತ್ತು, ಬೇಧಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಅಲರ್ಜಿ ಸಮಸ್ಯೆ: ಅರಸಿನದಲ್ಲಿರುವ ಕೆಲವು ಅಂಶಗಳಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಕಜ್ಜಿ, ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು.

Leave a Reply

Your email address will not be published. Required fields are marked *