Breaking News
Home / Featured / ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ ಕರ್ನಾಟಕ ಬ್ಯಾಂಕ್ ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ…!

ಉದ್ಯೋಗ ಆಕಾಂಕ್ಷಿಗಳಿಗೆ ಸುವರ್ಣಾವಕಾಶ ಕರ್ನಾಟಕ ಬ್ಯಾಂಕ್ ನಲ್ಲಿ ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ…!

ಕರ್ನಾಟಕದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಕರ್ನಾಟಕ ಬ್ಯಾಂಕ್ ಖಾಲಿ ಇರುವ ಕ್ಲರ್ಕ್ ಗಳ ನೇಮಕಕ್ಕೆ ಅರ್ಜಿಯನ್ನು ಅರ್ಹ ಅಭರ್ತಿಗಳಿಂದ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಏನೆಲ್ಲಾ ಅರ್ಹತೆಯನ್ನು ಹೊಂದಿರಬೇಕು ಎಂಬುದು ಇಲ್ಲಿದೆ ನೋಡಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯ ಮಾಡಿರುವ ಯಾವುದಾದರು ಒಂದು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಅದರಲ್ಲಿ ಕನಿಷ್ಠ 60 ಗಳಿಸದ್ದರು ಅರ್ಜಿ ಸಲ್ಲಿಸಲು ಅರ್ಹರು. ಅಂತವರು ದಿನಾಂಕ 01-07-2019 ರೊಳಗಾಗಿ ಪದವಿ ಮುಗಿಸಿರಬೇಕು. ಪದವಿ ಫಲಿತಾಂಶಕ್ಕೆ ಕಾಯುತ್ತಿರುವವರು ಅರ್ಜಿ ಸಲ್ಲಿಸಲು ಅವಕಾಶ ಇಲ್ಲ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗಿರುವ ವಯೋಮಿತಿ: 01-07-2019 ಕೊನೆಗೊಂಡಂತೆ ಗರಿಷ್ಠ 26 ವರ್ಷದವರಿಗೆ ಮಾತ್ರ ಅವಕಾಶ. SC ಮತ್ತು ST ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ ಇದೆ. Sc ಮತ್ತು St ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 500ರೂ. ಹಾಗು ಉಳಿದ ಇತರೆ ಅಭ್ಯರ್ಥಿಗಳಿಗೆ 600 ರೂ. ನಿಗದಿಪಡಿಸಿದೆ.

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 10-7-2019 ರಿಂದ 20-07-2019 ರವರೆಗೆ ಅವಕಾಶ ಇದೆ. ಇ ಹುದ್ದೆಯ ವೇತನ ಶ್ರೇಣಿ 37 ಸಾವಿರ ರೂ. ನಿಗದಿ ಮಾಡಲಾಗಿದೆ ಮತ್ತು ಆಯ್ಕೆಯಾಗುವ ಅಭ್ಯರ್ಥಿಗಳು 3 ವರ್ಷದ ಬಾಂಡ್ ನೀಡಬೇಕಾಗುತ್ತದೆ.

ಈ ಹುದ್ದೆಗಳಿಗೆ ಆಗಸ್ಟ್ 8, 2019ರಂದು ಆನ್ ಲೈನ್ ನಲ್ಲಿ ಪರೀಕ್ಷೆಯು ಬೆಂಗಳೂರು ದೆಹಲಿ ಹುಬ್ಬಳ್ಳಿ-ಧಾರವಾಡ ಮಂಗಳೂರು ಮುಂಬೈ, ಮೈಸೂರಿನಲ್ಲಿ ಏಕಕಾಲಕ್ಕೆ ನಡೆಯಲಿದೆ. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ ಮಾಹಿತಿಗೆ ಈ ಬ್ಯಾಂಕ್ ನ ವೆಬ್ ಆದ karnatakabank.com ಗೆ ಭೇಟಿ ನೀಡಬಹುದು.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *