Breaking News
Home / Featured / ನವಗ್ರಹ ಪ್ರದಕ್ಷಿಣೆ ಹಾಕುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದಂತೆ..!

ನವಗ್ರಹ ಪ್ರದಕ್ಷಿಣೆ ಹಾಕುವಾಗ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬಾರದಂತೆ..!

ನಮ್ಮ ಹಿಂದೂ ಧರ್ಮದಲ್ಲಿ ವಿವಿಧ ಬಗೆ ಆಚರಣೆ ಪೂಜೆ ಯಜ್ಞ ಯಾದಿ ಮುಂತಾದವುಗಳನ್ನು ಮಾಡಲಾಗುತ್ತದೆ, ಇದೆ ರೀತಿ ನಮ್ಮ ನಂಬಿಕೆಯ ಮೇಲೆ ಎಲ್ಲವು ಕೂಡ ನಿಂತಿದೆ, ಒಳ್ಳೆಯದು ಕೆಟ್ಟದು ಎರಡು ಕೂಡ ನಮ್ಮಲ್ಲಿಏ ಇರುತ್ತದೆ ಎಲ್ಲದನ್ನು ದೇವರ ಮೇಲೆ ನಂಬಿಕೆ ಇಡುತ್ತೇವೆ. ಗ್ರಹ ದೋಷ ನಿವಾರಣೆ ಹಾಗು ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ದೊರೆಯಲು ಹಲವು ಪ್ರಯತ್ನಗಳನ್ನು ಮಾಡುತ್ತೇವೆ ಎಲ್ಲದನ್ನು ಕೂಡ ಸರಿಯಾಗಿ ಶಸ್ತ್ರ ನಿಮಿತ್ತವಾಗಿ ಮಾಡಿದರೆ ಮಾಡುವಂತ ಪೂಜಾ ಕಾರ್ಯಗಳು ಸಫಲತೆಯನ್ನು ಕಾಣುತ್ತವೆ.

ನಮ್ಮ ಹಿಂದೂ ಧರ್ಮದಲ್ಲಿ ಒಟ್ಟು ಒಂಬತ್ತು ಗ್ರಹಗಳಿವೆ, ನಮ್ಮ ಜಾತಕ ಚಕ್ರದ ಅನುಸಾರವಾಗಿ ಆ ಒಂಬತ್ತು ಗ್ರಹಗಳು ಕರ್ಮಾ, ಪುಣ್ಯ, ಪಾಪಗಳ ಫಲವನ್ನ ನಮಗೆ ನೀಡುತ್ತಾ ಇರುತ್ತದೆ, ಆ ಒಂಬತ್ತು ಗ್ರಹಗಳು ನಮ್ಮನ್ನು ಒಂದೇ ಬಾರಿ ಕಾಡುವುದಿಲ್ಲ, ನಮ್ಮ ಜಾತಕ ಚಕ್ರದಲ್ಲಿ ಯಾವ ಗ್ರಹ ಉಚ್ಚಸ್ಥಾನದಲ್ಲಿ ಇರುತ್ತದೋ ಆ ಗ್ರಹಕ್ಕೆ ಹೆಚ್ಚಿನ ಪೂಜೆ ಮಾಡಿದರೆ ಉಳಿದ ಗ್ರಹಗಳು ಕೂಡ ಅನುಕೂಲವಾಗಿರುತ್ತದೆ.

ಗ್ರಹ ದೋಷದಿಂದ ಎದುರಾಗುವ ಸಮಸ್ಯೆಗಳ ಪರಿಹಾರಕ್ಕೆ ಸರಳ ವಿಧಾನವೆಂದರೆ ಅದು ನವಗ್ರಹ ಪ್ರದಕ್ಷಣೆ ಎಂದು ಶಾಸ್ತ್ರ ಹೇಳುತ್ತದೆ, ಹಾಗು ಪ್ರದಕ್ಷಣೆ ಮಾಡುವುದರಿಂದ ದೈವಿಕ ಶಕ್ತಿಯು ಮನುಷ್ಯನನ್ನು ಕಾಪಾಡುತ್ತದೆ ಎಂದು ನಂಬಲಾಗಿದೆ. ಪದ್ದತಿಯ ಪ್ರಕಾರ ನವಗ್ರಹ ಪ್ರದಕ್ಷಣೆ ಮಾಡಿದರೆ ಬೇಗನೆ ಅದರ ಫಲಿತಾಂಶ ಕಾಣಬಹುದಾಗಿದೆ, ಇನ್ನು ಪ್ರದಕ್ಷಣೆ ಮಾಡುವಾಗ ನವಗ್ರಹ ಮೂರ್ತಿಯನ್ನ ಮುಟ್ಟಿ ಪ್ರದಕ್ಷಣೆ ಮಾಡುತ್ತೇವೆ ಆದರೆ ಅದು ತಪ್ಪು ಸಾಧ್ಯವಾದಷ್ಟು ಅವುಗಳನ್ನ ಮುಟ್ಟದೆ ಪ್ರದಕ್ಷಣೆ ಮಾಡಿ.

ನವಗ್ರಹಗಳಲ್ಲಿ ಸೂರ್ಯನು ಅಧಿಪತಿ ಯಾಗಿರುವುದರಿಂದ ಸೂರ್ಯನನ್ನು ಮಧ್ಯ ಅಥವಾ ಪೂರ್ವ ದಿಕ್ಕಿನಲ್ಲಿರುತ್ತಾನೆ, ಸೂರ್ಯನಿಗೆ ಬಲಭಾಗದಲ್ಲಿ ಅಂಗಾರಕನು ದಕ್ಷಿಣಾಭಿಮುಖವಾಗಿ ಇರುತ್ತಾನೆ, ನವಗ್ರಹ ದೇವಸ್ಥಾನಕ್ಕೆ ಒಳ ಪ್ರವೇಶ ಮಾಡುವಾಗ ಸೂರ್ಯನನ್ನ ನೋಡುತ್ತಾ ಪ್ರವೇಶ ಮಾಡಬೇಕು, ನಂತರ ಚಂದ್ರನ ಕಡೆಯಿಂದ ಬಲಭಾಗಕ್ಕೆ ಒಂಬತ್ತು ಪ್ರದಕ್ಷಣೆ ಮಾಡಬೇಕು. ಹೀಗೆ ಪ್ರದಕ್ಷಣೆ ಪೂರ್ಣಗೊಂಡ ಬಳಿಕ ಭುಧನ ಕಡೆಯಿಂದ ರಾಹು, ಕೇತುವನ್ನ ಸ್ಮರಿಸುತ್ತಾ ಎರಡು ಪ್ರದಕ್ಷಣೆ ಮಾಡಬೇಕು, ಕೊನೆಯಲ್ಲಿ ಸೂರ್ಯನನ್ನು, ಚಂದ್ರನನ್ನು ಕುಜ ಬುಧ ಭ್ರಮಸ್ಮತಿ ಶುಕ್ರ ಶನಿ ರಾಹುಕೇತುವನ್ನ ಸ್ಮರಿಸುತ್ತ ಒಂದೊಂದು ಪ್ರದಕ್ಷಿಣೆ ಮಾಡಿ ನವಗ್ರಹಗಳಿಗೆ ಬೆನ್ನು ತೋರಿಸದೆ ಬರಬೇಕು.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *