Breaking News
Home / Featured / ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಶುಭ ಸುದ್ದಿ…!

ಆಧಾರ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದ ಕಡೆಯಿಂದ ಶುಭ ಸುದ್ದಿ…!

ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹೊಂದಿದವರಿಗೆ ಶುಭ ಸುದ್ದಿಯೊಂದನ್ನು ನೀಡಿದೆ. ಅದೇನು ಗೊತ್ತ. ಹೌದು ಆಧಾರ್ ಕಾರ್ಡ್ ಹೊಂದಿದವರು ಇನ್ನು ಮುಂದೆ ಆಧಾರ್ ನಂಬರ್ ನೀಡಿ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಕೆ ಮಾಡಿದವರಿಗೆ ತೆರಿಗೆ ಇಲಾಖೆಯಿಂದಲೇ ಪಾನ್ ಕಾರ್ಡ್ ವಿತರಿಸಲಾಗುವುದು ಎಂದು ತಿಳಿಸಿದೆ.

ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಲು ಪಾನ್ ಕಾರ್ಡ್ ಗೆ ಪರ್ಯಾಯವಾಗಿ ಆಧಾರ್ ಕಾರ್ಡ್ ಅನ್ನು ನೀಡುವಂತೆ ಕೇಂದ್ರ ಸರ್ಕಾರದ ಮೊನ್ನೆ ಮಂಡಿಸಿದ ಬಜೆಟ್ ನಲ್ಲಿ ತಿಳಿಸಿತ್ತು. ಹಾಗೆಂದು ಪಾನ್ ಕಾರ್ಡ್ ಗೆ ಯಾವುದೇ ತೊಂದರೆ ಇಲ್ಲ. ಆಧಾರ್ ನಂಬರ್ ನೀಡಿ ಐಟಿ ರಿಟರ್ನ್ ಸಲ್ಲಿಸಿದವರಿಗೆ ತೆರಿಗೆ ಇಲಾಖೆ ವತಿಯಿಂದ ಪಾನ್ ಕಾರ್ಡ್ ಅನ್ನು ಸ್ವಯಂ ವಿತರಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷರಾದ ಪ್ರಮೋದ್ ಚಂದ್ರ ಅವರು ಹೇಳಿದ್ದಾರೆ.

ಈ ಮೊದಲು ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಆಧಾರ್ ಮತ್ತು ಪಾನ್ ಸಂಖ್ಯೆ ಜೋಡಣೆ ಕಡ್ಡಾಯಗೊಳಿಸಲಾಗಿತ್ತು. ತೆರಿಗೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಪಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಬಳಸಲು ಅವಕಾಶ ನೀಡಿದೆ. ಇದರಿಂದಾಗಿ ಪಾನ್ ಕಾರ್ಡ್ ಅಸ್ತಿತ್ವಕ್ಕೆ ತೊಡಕಾಗುವುದಿಲ್ಲ. ಹಣಕಾಸು ವ್ಯವಹಾರಗಳಲ್ಲಿ ಪಾನ್ ಮುಖ್ಯವಾಗಿ ಬೇಕಿದೆ. ಹೆಚ್ಚುವರಿ ಆಯ್ಕೆಯಾಗಿ ಆಧಾರ್ ಬಳಸಲು ಅವಕಾಶವನ್ನು ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *