ಹಾಗಲಕಾಯಿ ತಿನ್ನುವುದರಿಂದ ಅನೇಕ ಆರೋಗ್ಯಕಾರಿ ಲಾಭಗಳಿವೆ. ಹಾಗಲಕಾಯಿ ಅಂದರೆ ಸಾಕು ಕೆಲವರು ಮೂಗು ಮುರಿಯುತ್ತಾರೆ. ಆದರೆ ಅದರಿಂದ ನಮ್ಮ ದೇಹಕ್ಕೆ ಸಿಗುವ ಲಾಭಗಳನ್ನು ತಿಳಿದರೆ ನೀವು ಖಂಡಿತ ತಪ್ಪದೆ ತಿನ್ನುತ್ತಿರಾ. ಹಾಗಲಕಾಯಿ ರುಚಿಗೆ ಕಹಿ ಅನಿಸಿದರು ಇದರಲ್ಲಿ ಹತ್ತಾರು ಉಪಯೋಗಕಾರಿ ಅಂಶಗಳನ್ನು ನಾವು ಕಾಣಬಹುದು. ಹಾಗಲಕಾಯಿಯು ವಿಟಮಿನ್ ಸಿ ಅಂಶವನ್ನು ಒಳಗೊಂಡಿದ್ದು ನಮ್ಮ ದೇಹಕ್ಕೆ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳನ್ನು ನೀಡುತ್ತಿದೆ.

ಕೆಲವರು ವಯಸ್ಸಿಗೂ ಮುನ್ನವೇ ವಯಸ್ಸಾದವರಂತೆ ಕಾಣುತ್ತಾರೆ ಅಂತವರಿಗೆ ಯಂಗ್ ಆಗಿ ಕಾಣುವಂತೆ ಮಾಡುತ್ತದೆ ಈ ಹಾಗಲಕಾಯಿ. ಅಡುಗೆಯಲ್ಲಿ ಹಾಗಲಕಾಯಿಯನ್ನು ಬಳಸಿ ಸೇವನೆ ಮಾಡುವುದರಿಂದ ಸುಕ್ಕುಗಟ್ಟಿದ ಚರ್ಮವನ್ನು ಯಂಗ್ ಆಗಿ ಕಾಣುವಂತೆ ಮಾಡುವುದು.

ಅಷ್ಟೇ ಅಲ್ಲದೆ ಮಧುಮೇಹಿಗಳಿಗೆ ಅಂದರೆ ಸಕ್ಕರೆ ಕಾಯಿಲೆ ಇರುವವರಿಗೆ ಹಾಗಲಕಾಯಿ ಉಪಯೋಗಕಾರಿಯಾಗಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಹಾಗಲಕಾಯಿ ನಿಯಂತ್ರಿಸುತ್ತದೆ. ಹಾಗಲಕಾಯಿಯಲ್ಲಿ ಅಧಿಕ ಪ್ರಮಾಣದ ಆ್ಯಂಟಿ ಆ್ಯಕ್ಸಿಡೆಂಟ್ ಇರುತ್ತದೆ. ಇದು ರಕ್ತದಲ್ಲಿರುವ ಟಾಕ್ಸಿನ್ ಅಂಶವನ್ನು ದೇಹದಿಂದ ಹೊರ ಹಾಕುತ್ತದೆ. ಇದರಿಂದ ದೇಹದಲ್ಲಿ ರಕ್ತವು ಶುದ್ಧ ಆಗುತ್ತದೆ.

ಚರ್ಮಕ್ಕೆ ಸಂಬಂದಿಸಿದ ಸಮಸ್ಯೆಯನ್ನೂ ಕೂಡ ಹಾಗಲಕಾಯಿ ನಿವಾರಿಸುತ್ತದೆ. ಸ್ಕಿನ್ ಮೇಲಿನ ಕಲೆ ನಿವಾರಿಸಲು ಎರಡು ಚಮಚ ಹಾಗಲಕಾಯಿ ಜ್ಯೂಸ್, ಎರಡು ಚಮಚ ಕಿತ್ತಳೆ ಹಣ್ಣಿನ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ, ಅದು ಒಣಗಿದ ಮೇಲೆ ಮುಖವನ್ನು ತೊಳೆಯಿರಿ. ಇದರಿಂದ ಮುಖದ ಕಲೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಮುಖದಲ್ಲಿ ಮೊಡವೆ, ಕೆಂಪು ಚುಕ್ಕೆ ಇದ್ದರೆ ಹಾಗಲಕಾಯಿ ರಸವನ್ನು ಬೇರೆ ಹಣ್ಣಿನ ರಸದೊಂದಿಗೆ ಮಿಕ್ಸ್ ಮಾಡಿ ಸೇವಿಸಿ. ಇದರಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣ ತ್ವಚಾ ಸಂಬಂಧಿ ಸಮಸ್ಯೆಗಳನ್ನು ದೂರಮಾಡುವಲ್ಲಿ ಉಪಯೋಗಕಾರಿಯಾಗಿದೆ.

Leave a Reply

Your email address will not be published. Required fields are marked *