Breaking News
Home / Featured / ಕೇಂದ್ರ ಸರ್ಕಾರದ ಭರಪೂರ ಯೋಜನೆಗಳೊಂದಿಗೆ ಬಜೆಟ್ ನ ಹೈಲೆಟ್ಸ್ ಇಲ್ಲಿವೆ..!

ಕೇಂದ್ರ ಸರ್ಕಾರದ ಭರಪೂರ ಯೋಜನೆಗಳೊಂದಿಗೆ ಬಜೆಟ್ ನ ಹೈಲೆಟ್ಸ್ ಇಲ್ಲಿವೆ..!

ಲೋಕಸಭೆ ಚುನಾವಣೆಯಲ್ಲಿ ಎಲ್ಲಾ ವರ್ಗದ ಜನರು ನಮ್ಮ ಸರ್ಕಾರದ ಆಡಳಿತವನ್ನು ಮೆಚ್ಚಿ ಮತ ಚಲಾಯಿಸಿದ್ದಾರೆ. ದೇಶದ ಜನರು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ವೃದ್ಧಿಯ ಉದ್ದೇಶದಿಂದ ನಮಗೆ ಮತ ನೀಡಿದ್ದಾರೆ ಎಂದು ತಮ್ಮ ಭಾಷಣ ಮುಂದುವರಿಸಿದ ನಿರ್ಮಲಾ ಸೀತಾರಾಮನ್​.

2014 ರಲ್ಲಿ ಭಾರತದ ಆರ್ಥಿಕತೆ 1.85 ಟ್ರಿಲಿಯನ್​ ಡಾಲರ್​ ಇತ್ತು, ಪ್ರಸ್ತುತ ಅದು 2.7 ಟ್ರಿಲಿಯನ್​ ಡಾಲರ್​ಗೆ ತಲುಪಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಭಾರತದ ಆರ್ಥಿಕತೆ 5 ಟ್ರಿಲಿಯನ್​ ಡಾಲರ್​ಗೆ ತಲುಪಲಿದೆ.

5 ವರ್ಷದ ಹಿಂದ ಭಾರತದ ಆರ್ಥಿಕತೆ ಜಗತ್ತಿನಲ್ಲಿ 11ನೇ ಸ್ಥಾನದಲ್ಲಿತ್ತು. ಪ್ರಸ್ತುತ 6 ನೇ ಸ್ಥಾನದಲ್ಲಿದೆ.

ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಕಳೆದ 5 ವರ್ಷಗಳಲ್ಲಿ 9.6 ಕೋಟಿ ಶೌಚಗೃಹಗಳ ನಿರ್ಮಾಣ, ಸ್ಟಾರ್ಟ್​ಅಪ್​ಗಳಿಗಾಗಿ ಪ್ರತ್ಯೇಕ ಟಿವಿ ಚಾನಲ್​ ಪ್ರಾರಂಭಿಸಲು ಸರ್ಕಾರದ ಚಿಂತನೆ.

ಪ್ರಧಾನ ಮಂತ್ರಿ ಆವಾಸ ಯೋಜನೆ (ನಗರ) ಅಡಿಯಲ್ಲಿ 81 ಲಕ್ಷ ಮನೆಗಳ ನಿರ್ಮಾಣಕ್ಕೆ 4.83 ಲಕ್ಷ ಕೋಟಿ ನೆವು ನೀಡಲಾಗಿದೆ. ಇದರ ಅಡಿಯಲ್ಲಿ 47 ಲಕ್ಷ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದರೆ, 26 ಲಕ್ಷ ಮನೆಗಳ ನಿರ್ಮಾಣ ಮುಕ್ತಾಯವಾಗಿದೆ. 24 ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.

ಸಂಶೋಧನಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ರಾಷ್ಟ್ರೀಯ ಸಂಶೋಧನಾ ಫೌಂಡೇಷನ್​ ಸ್ಥಾಪಿಸಲಾಗುವುದು. ಇದರ ಮೂಲಕ ಸಂಶೋಧನೆ ನಡೆಸುವವರಿಗೆ ನೆರವು ನೀಡಲಾಗುವುದು. ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಸ್ಥಾಪನೆ.

ದೆಹಲಿಯ ರಾಜಘಾಟ್​ನಲ್ಲಿ 2019ರ ಅಕ್ಟೋಬರ್​ 2 ರಂದು ರಾಷ್ಟ್ರೀಯ ಸ್ವಚ್ಛತಾ ಕೇಂದ್ರ ಉದ್ಘಾಟಿಸಲಾಗುವುದು. ಜತೆಗೆ ಗಾಂಧಿ ತತ್ವಗಳನ್ನು ಪಸರಿಸಲು ಗಾಂಧಿಪೀಡಿಯಾ ಅಭಿವೃದ್ಧಿಪಡಿಸಲಾಗುವುದು.

ಭಾರತವನ್ನು ಎಜುಕೇಷನಲ್​ ಹಬ್​ ಆಗಿ ರೂಪಿಸಲು ಮತ್ತು ಉನ್ನತ ವ್ಯಾಸಂಗಕ್ಕಾಗಿ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಯೋಜನೆ ರೂಪಿಸಲಾಗುವುದು. 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ

2024ರ ವೇಳೆಗೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ಒದಗಿಸಲು ಹರ್​ ಘರ್​ ಜಲ್​ ಯೋಜನೆ.

ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ 2014 ಅಕ್ಟೋಬರ್​ 2 ರಿಂದ ಇದುವರೆಗೆ 9.6 ಕೋಟಿ ಶೌಚಗೃಹಗಳ ನಿರ್ಮಾಣ. 5.6 ಲಕ್ಷ ಗ್ರಾಮಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಲಾಗಿದೆ.

ಮುಂದಿನ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್​ ಯೋಜನೆ ಹಂತ 3 ರಲ್ಲಿ 80,250 ಕೋಟಿ ರೂ. ವೆಚ್ಚದಲ್ಲಿ 1 ಲಕ್ಷದ 25 ಸಾವಿರ ಕಿ.ಮೀ. ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುವುದು.

2019-20 ರಿಂದ 2021-22ರ ಅವಧಿಯಲ್ಲಿ ಪ್ರಧಾನ ಮಂತ್ರಿ ಆವಾಸ ಯೋಜನೆ – ಗ್ರಾಮೀಣ ಯೋಜನೆಯಲ್ಲಿ 1.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಈ ಮನೆಗಳು ಎಲ್​ಪಿಜಿ ಹಾಗೂ ವಿದ್ಯುತ್​ ಸಂಪರ್ಕ ಮತ್ತು ಶೌಚಗೃಹ ಹೊಂದಿರುತ್ತವೆ.

2022ರ ವೇಳೆಗೆ ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೆ ವಿದ್ಯುತ್​ ಮತ್ತು ಎಲ್​ಪಿಜಿ ಸಂಪರ್ಕ ಕಲ್ಪಿಸಲಾಗುವುದು.

ಪ್ಲಾಸ್ಟಿಕ್​ ತ್ಯಾಜ್ಯ ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಪ್ರಧಾನ ಮಂತ್ರಿ ಗ್ರಾಮ ಸಡಕ್​ ಯೋಜನೆಯಲ್ಲಿ 30 ಸಾವಿರ ಕಿ.ಮೀ. ರಸ್ತೆ ನಿರ್ಮಾಣ.

ದೇಶದಲ್ಲಿ ಎಲೆಕ್ಟ್ರಿಕ್​ ವಾಹಗಳ ಬಳಕೆಯನ್ನು ಉತ್ತೇಜಿಸಲು 2019ರ ಏಪ್ರಿಲ್​ವರೆಗೆ 10 ಸಾವಿರ ಕೋಟಿ ರೂ. ಒದಗಿಸಲಾಗಿದೆ.

ಜಿಎಸ್​ಟಿಯಲ್ಲಿ ನೊಂದಾಯಿಸಿರುವ ಸಣ್ಣ ಉದ್ದಿಮೆದಾರರಿಗೆ ಶೇ. 2 ಬಡ್ಡಿ ದರದಲ್ಲಿ ಸಾಲ ಒದಗಿಸಲು 350 ಕೋಟಿ ರೂ. ಮೀಸಲು.

ವಾರ್ಷಿಕ ವಹಿವಾಟು 1.5 ಕೋಟಿಗಿಂತ ಕಡಿಮೆ ಇರುವ 3 ಕೋಟಿ ವ್ಯಾಪಾರಿಗಳಿಗೆ ಪ್ರಧಾನ ಮಂತ್ರಿ ಕರಮ್​ಯೋಗಿ ಮಾನ್​ ಧನ್​ ಯೋಜನೆಯಲ್ಲಿ ಪಿಂಚಣಿ ಸೌಲಭ್ಯ.

2018 ರಿಂದ 2030ರ ಅವಧಿಯಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ 50 ಲಕ್ಷ ಕೋಟಿ ರೂ. ಅಗತ್ಯವಿದೆ. ಖಾಸಗಿ ಸಹಭಾಗಿತ್ವದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು.

ಭಾರತದ ಆರ್ಥಿಕತೆ 1 ಟ್ರಿಲಿಯನ್​ ಡಾಲರ್​ಗೆ ತಲುಪಲು 55 ವರ್ಷ ಬೇಕಾಯಿತು. ಆದರೆ ನಮ್ಮ ಸರ್ಕಾರ ಕಳೆದ 5 ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 1 ಟ್ರಿಲಿಯನ್​ ಡಾಲರ್​ ನಷ್ಟು ಹೆಚ್ಚಿಸಿದೆ.

ಭಾರತ್​ ಮಾಲಾ, ಸಾಗರ್​ಮಾಲಾ ಮತ್ತು ಉಡಾನ್​ ಯೋಜನೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಲಾಗಿದೆ. ಮೂಲಸೌಕರ್ಯವನ್ನು ಉತ್ತಮಪಡಿಸಲಾಗಿದೆ. ಉಡಾನ್​ ಯೋಜನೆಯಿಂದ ಸಣ್ಣ ನಗರಗಳಿಗೂ ವಿಮಾನ ಯಾನ ಸೇವೆ ಸಿಗುವಂತಾಗಿದೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *