Breaking News
Home / Featured / ಸಬ್ಸಿಡಿರಹಿತ LPG ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂ. ಇಳಿಕೆ..!

ಸಬ್ಸಿಡಿರಹಿತ LPG ಸಿಲಿಂಡರ್‌ಗಳ ಬೆಲೆಯಲ್ಲಿ 100 ರೂ. ಇಳಿಕೆ..!

ಅಡುಗೆ ಅನಿಲ ಸಿಲಿಂಡರ್ ಬೆಲೆ ಇಂದಿನಿಂದ ಕಡಿಮೆಯಾಗಲಿದ್ದು, ಸಬ್ಸಿಡಿರಹಿತ ಎಲ್‍ಪಿಜಿ ಸಿಲಿಂಡರ್ ನ ಬೆಲೆಯಲ್ಲಿ ರೂ.100 ರೂ. ಇಳಿಕೆಯಾಗಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯಾಗುತ್ತಿರುವ ಹಿನ್ನೆಲೆ ಎಲ್‍ಪಿಜಿ ದರದಲ್ಲೂ ಇಳಿಕೆಯಾಗಿದೆ. ಸಬ್ಸಿಡಿರಹಿತ ಅಥವಾ ಮಾರುಕಟ್ಟೆಯಲ್ಲಿನ ಎಲ್‍ಪಿಜಿ ಸಿಲಿಂಡರ್ ದರ 737.50 ಯಿಂದ 637ಕ್ಕೆ ಇಳಿಯಲಿದೆ.

ಸದ್ಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿದ ಹಿನ್ನೆಲೆಯಲ್ಲಿ ಎಲ್‍ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.

ಗೃಹ ಬಳಕೆಗೆ ಒಂದು ಕುಟುಂಬಕ್ಕೆ ವಾರ್ಷಿಕ 12 ಸಿಲಿಂಡರ್‌ಗಳನ್ನು ಸರ್ಕಾರ ವಿತರಿಸುತ್ತದೆ. ಪ್ರತಿ ಸಿಲಿಂಡರ್ 737.50 ರೂ. ಬೆಲೆ ಬೀಳುತ್ತದೆ. ಆದರೆ ಸಬ್ಸಿಡಿ ಸಹಿತ ಇದರ ಬೆಲೆ 494.35 ರೂಪಾಯಿ ಮಾತ್ರ. ಉಳಿದ 142.65 ರೂ. ಸಬ್ಸಿಡಿ ಮೊತ್ತವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಇಂಡಿಯನ್ ಆಯಿಲ್ ಪ್ರಕಾರ, ಜೂನ್ 1 ರಿಂದ ಜಾರಿಗೆ ಬರುವಂತೆ ಶೇ3.65 ರಷ್ಟು ಬೆಲೆ ಏರಿಕೆ ಕಂಡ ಒಂದು ತಿಂಗಳ ನಂತರ ಈ ಕಡಿತವು ಬರುತ್ತದೆ. ಆದ್ದರಿಂದ ಹಿಂದಿನ ತಿಂಗಳಿಗೆ ಹೋಲಿಸಿದರೆ ಸಿಲಿಂಡರ್‍ಗೆ 25 ರೂ. ಏರಿಕೆಯಾಗಿತ್ತು ಎಂದಿದೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *