Breaking News
Home / Featured / ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ, ಈ ನಿಯಮ ಪಾಲಿಸದೇ ಇದ್ದರೆ ಬೀಳುತ್ತೆ ಭಾರಿ ದಂಡ…!

ಕರ್ನಾಟಕ ಮೋಟಾರ್ ವಾಹನ ಕಾಯ್ದೆ ತಿದ್ದುಪಡಿ, ಈ ನಿಯಮ ಪಾಲಿಸದೇ ಇದ್ದರೆ ಬೀಳುತ್ತೆ ಭಾರಿ ದಂಡ…!

ರಾಜ್ಯ ಸರ್ಕಾರ ಗುರುವಾರ ಕರ್ನಾಟಕ ಮೋಟಾರು ವಾಹನ ಕಾಯಿದೆಯಲ್ಲಿ ತಿದ್ದುಪಡಿ ಮಾಡಿ ಹೊಸ ನಿಯಮವನ್ನು ರೂಪಿಸಿ ಜಾರಿಗೆ ತರಲು ಆದೇಶ ಹೊರಡಿಸಿದೆ. ಈ ಹಿಂದೆ ಇದ್ದಂತ ಮೊತ್ತ ಎಷ್ಟು ಯಾವುದಕ್ಕೆ ಎಷ್ಟು ದಂಡ ಬಾರಿಸಬೇಕು ಅನ್ನೋದನ್ನ ಮುಂದೆ ನೋಡಿ.

ಅತಿಯಾದ ಸ್ಪೀಡ್ ಆಗಿ ವಾಹನ ಚಲಾಯಿಸಿದ್ರೆ 1 ಸಾವಿರ ರೂ. ದಂಡ. ಮುಂಚೆ 500 ರೂ. ಇತ್ತು. ವಾಹನ ಚಲಾಯಿಸುವಾಗ ಮೊಬೈಲ್ ಬಳಿಸಿದರೆ 1 ಸಾವಿರ ರೂ. ದಂಡ. ಚಾಲನೆ ವೇಳೆ 2ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿಬಿದ್ದರೆ 2 ಸಾವಿರ ರೂ. ದಂಡ. ನೊಂದಣಿ ಇಲ್ಲದೆ ವಾಹನ ಚಲಾವಣೆ ಮಾಡಿದರೆ ಮೊದಲ ಬಾರಿಗೆ 5 ಸಾವಿರ ರೂ. ದಂಡ. ಮುಂಚೆ 100 ರೂ. ಇತ್ತು.

ನೊಂದಣಿ ಇಲ್ಲದೆ ಚಲಾಯಿಸಿ 2 ಬಾರಿಗೆ ಸಿಕ್ಕಿ ಬಿದ್ದರೆ 10 ಸಾವಿರ ರೂ.-ಮುಂಚೆ 300 ರೂ. ಇತ್ತು. ಇನ್ಷೂರೆನ್ಸ್, DL ಇಲ್ಲದೆ ಚಾಲನೆ ಮಾಡಿದರೆ 1 ಸಾವಿರ ರೂ. ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದ ವಾಹನ ಚಲಾಯಿಸಿದರೆ 2 ಸಾವಿರ ರೂ. ಫಿಟ್ನೆಸ್ ಸರ್ಟಿಫಿಕೆಟ್ ಇಲ್ಲದೆ 2ನೇ ಬಾರಿ ಚಲಾಯಿಸಿದರೆ 5 ಸಾವಿರ ರೂ. ಬಸ್ ನಲ್ಲಿ ಚಿಲ್ಲರೆ ಹಿಂದಿರುಗಿಸದಿದ್ದರೆ ಕಂಡಕ್ಟರ್ ಗೆ 500 ರೂ. ದಂಡಮುಂಚೆ 100 ರೂ. ಇತ್ತು

ಅವಧಿ ಮೀರಿದ ಟಿಕೆಟ್ ನೀಡಿದರೆ ಕಂಡಕ್ಟರ್ ಗೆ 500 ರೂ. ದಂಡಮುಂಚೆ 100 ರೂ. ಇತ್ತು. ಪ್ರಯಾಣದ ದೂರಕ್ಕೆ ತಕ್ಕಂತೆ ಟಿಕೆಟ್ ನೀಡದಿದ್ದರೆ ಕಂಡಕ್ಟರ್ 500 ರೂ. ದಂಡ. ಮುಂಚೆ 100 ರೂ. ಇತ್ತು. ಈ ರೀತಿಯ ನಿಯಮವನ್ನು ಜಾರಿಗೆ ಜಾರಲು ನಿರ್ಧರಿಸಲಾಗಿದೆ ವಾಹನ ಚಾಲನೆ ಮಾಡುವ ಜಾಗರೂಕತೆಯಿಂದ ಚಲಾಯಿಸಿ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *