ಪಂಚಮುಖಿ ಆಂಜನೇಯನ ಈ ಐದು ಅವತಾರಗಳನ್ನು ವಿಶೇಷವಾಗಿ ಕಾಣಬಹುದು. ಆಂಜನೇಯನನ್ನು ರಾಮನ ಪರಮ ಭಕ್ತ ಎಂಬುದಾಗಿ ಕರೆಯಲಾಗುತ್ತದೆ. ಐದು ಮುಖಗಳನ್ನು ಹೊಂದಿರುವಂತ ಈ ಆಂಜನೇಯನನ್ನು ಪಂಚಮುಖಿ ಆಂಜನೇಯ ಎಂದು ಕರೆಯಲಾಗುತ್ತದೆ.

ಹನುಮಂತ: ಇವನ ಮುಖವು ಪೂರ್ವದೆಡೆಗೆ ಇರುತ್ತದೆ. ಮನಸ್ಸಿನಲ್ಲಿ ಸಾತ್ತ್ವಿಕತೆ ಮತ್ತು ಪವಿತ್ರತೆಯನ್ನು ನಿರ್ಮಿಸುವುದರೊಂದಿಗೆ ಯಶಸ್ಸನ್ನು ನೀಡುವುದೇ ಈ ಮುಖದ ಕಾರ್ಯವಾಗಿದೆ.

ನರಸಿಂಹ: ಈ ಮುಖವು ದಕ್ಷಿಣದತ್ತ ಇದ್ದು ನಿರ್ಭಯತೆ ಮತ್ತು ಸಂಕಟಗಳನ್ನು ಎದುರಿಸುವ ಪ್ರಬಲ ಶಕ್ತಿಯನ್ನು ಸೂಚಿಸುತ್ತದೆ. ಭೂತಪ್ರೇತ ಸಂಬಂಧಬಾಧೆ ಮತ್ತು ಶತ್ರು ಇವುಗಳ ನಿವಾರಣೆ ಮಾಡುವುದು, ಈ ಮುಖದ ಕಾರ್ಯವಾಗಿದೆ.

ಗರುಡ: ಇದು ಪಶ್ಚಿಮದಿಕ್ಕಿಗಿದ್ದು ಜಾದುಮಾಟ, ಮಂತ್ರ-ತಂತ್ರ, ಪಿಶಾಚಬಾಧೆ, ಭೂತಬಾಧೆ, ವಿಷಬಾಧೆ ಇವುಗಳಿಂದ ಸಂರಕ್ಷಣೆ ಮಾಡುತ್ತದೆ. ಕೋಟಿ ಸೂರ್ಯಗಳ ತೇಜದಂತೆ ಈ ಮುಖದ ತೇಜವಿದೆ.

ವರಾಹ: ಇದು ಉತ್ತರದಿಕ್ಕಿನಲ್ಲಿದ್ದು ಇದರ ಕಾರ್ಯವು ಮುಖ್ಯವಾಗಿ ಪ್ರಗತಿ, ಧನಸಂಪತ್ತು ಮತ್ತು ಸುಖೋಪಭೋಗವನ್ನು ನೀಡುವುದು, ಪುತ್ರಪೌತ್ರಾದಿಗಳ ವೃದ್ಧಿ ಮಾಡುವುದಿರುತ್ತದೆ. ಲಕ್ಷ್ಮಣನಿಗೆ ಶಕ್ತಿ ಬೇಕಾಗಿದ್ದಾಗ ಈ ಮುಖವು ಅವನಿಗೆ ಜೀವನದಾನ ನೀಡಿತು ಮತ್ತು ಲಂಕೆಯನ್ನು ದಹಿಸಿತ್ತು.

ಹಯಗ್ರೀವ: ಈ ಮುಖವು ಆಕಾಶದೆಡೆಗೆ ಇರುತ್ತದೆ. ಸ್ವಲ್ಪಮಟ್ಟಿಗೆ ಡೊಂಕಾದ ಅವಸ್ಥೆಯಲ್ಲಿರುವ ಈ ಮುಖವು ಹನುಮಾನನ ಮುಖದ ಮೇಲಿನ ಬದಿಗೆ ತೋರಿಸಲಾಗಿದೆ. ಈ ಮುಖದ ಸಂಬಂಧವು ಜ್ಞಾನ ಮತ್ತು ಸಂತತಿ ಈ ಎರಡು ಸಂಗತಿಗಳೊಂದಿಗೆ ಬರುತ್ತದೆ.

ಐದು ದೀಪಗಳಲ್ಲಿ ಐದನೇ ಅಸುರಾಸುರ ರಾಕ್ಷಸ, ಪಂಚಮುಖಿ ಮಾರುತಿಯ ಪಾದದ ಕೆಳಗಡೆಯಲ್ಲಿರುವ ರಾಕ್ಷಸನಾಗಿದ್ದಾನೆ. ಪಂಚಮುಖಿ ಮಾರುತಿಯು ಒಂದರ್ಥದಲ್ಲಿ ಮಾನವೀ ಜೀವನದ ಎಲ್ಲ ಅಂಗಗಳ ವಿಕಾಸ ಮಾಡಿಸಿ ತರುವುದಕ್ಕಾಗಿ ಮಹತ್ವ ಪೂರ್ಣ ಸಾಧನವಾಗಿದೆ.

Leave a Reply

Your email address will not be published. Required fields are marked *