ಈ ಶ್ಲೋಕಗಳು ಕೇವಲ ಪಠಣೆಗೆ ಮಾತ್ರ ಸೀಮಿತವಾಗದೇ ಸಮಾಜದಲ್ಲಿ ಎಲ್ಲರನ್ನೂ ಸಮಾನವಾಗಿ ತನ್ನಂತೆಯೇ ನೋಡಿ, ಗೌರವಿಸಬೇಕೆಂಬುದನ್ನೂ ತಿಳಿಸುವುದರಿಂದ. ಶ್ಲೋಕದ ಜೊತೆ ಜೊತೆಗೇ ಮಕ್ಕಳ ವ್ಯಕ್ತಿತ್ವವೂ ವಿಕಾಸಗೊಳ್ಳಲಿದೆ.

ಮಕ್ಕಳಿಗೆ ಕಲಿಸಬಹುದಾದ ಸರಳ ಶ್ಲೋಕಗಳು ಇಂತಿವೆ: ಓಂ ಸಹನಾ ಭವತುಃ ಸಹನೋ ಭುನಕ್ತುಃ ಸಹವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾವಿದ್ವಿಶಾವಹೈ ಓಂ ಶಾಂತಿ ಶಾಂತಿ ಶಾಂತಿ.

ಶ್ಲೋಕದ ಅರ್ಥ ಹೀಗಿದೆ: ನಮ್ಮೆಲ್ಲರನ್ನೂ ದೈವಿಕ ಶಕ್ತಿ ರಕ್ಷಿಸಲಿ, ಎಲ್ಲರೂ ಜೊತೆಯಾಗಿ ಆಹಾರ ಸೇವಿಸೋಣ, ಅಗಾಧವಾದ ಶಕ್ತಿಯಿಂದ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ ನಮ್ಮೆಲ್ಲರ ಬೌದ್ಧಿಕ ಬೆಳವಣಿಗೆ ಮತ್ತಷ್ಟು ವೃದ್ಧಿಯಾಗಲಿ. ನಮ್ಮೆಲ್ಲರ ನಡುವೆ ವೈರತ್ವ ಬಾರದೇ ಇರಲಿ ಎಂಬುದು ಈ ಶ್ಲೋಕದ ಅರ್ಥವಾಗಿದೆ.

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ: ಈ ಶ್ಲೋಕವನ್ನು ಮಕ್ಕಳಿಗೆ ಕಲಿಸುವುದರಿಂದ ಮಕ್ಕಳಲ್ಲಿ ಬಾಲ್ಯದಿಂದಲೇ ಬೋಧನೆ ಮಾಡುವ ಗುರುಗಳ ಬಗ್ಗೆ ಗೌರವಾದರಗಳು ಬೆಳೆಯುತ್ತವೆ. ಗುರುವನ್ನು ಬ್ರಹ್ಮ ವಿಷ್ಣು ಮಹೇಶ್ವರಿಗೆ ಹೋಲಿಕೆ ಮಾಡಲಾಗಿದ್ದು, ಗುರುವೇ ಸಾಕ್ಷಾತ್ ಪರಬ್ರಹ್ಮ ಎಂಬ ಅರ್ಥವನ್ನು ಈ ಶ್ಲೋಕ ನೀಡುತ್ತದೆ.

Leave a Reply

Your email address will not be published. Required fields are marked *