ಹೊಟ್ಟೆಯಲ್ಲಿ ಹುಣ್ಣು ಉಂಟಾದರೆ ಹೊಟ್ಟೆಯಲ್ಲಿ ನೋವು ಉಂಟಾಗಿ ಬಂಧನವಾಗುತ್ತದೆ. ಆಗ ವಾಂತಿ ಬರುವುದು, ಉರಿ ಮೂತ್ರ ಬರುವುದು, ಹೊಟ್ಟೆ ಉಬ್ಬುವುದು ಈ ರೀತಿಯಾಗಿ ಲಕ್ಷಣಗಳು ಕಂಡು ಬರುತ್ತವೆ. ಈ ಸಮಸ್ಯೆಗೆ ಪದೇ ಪದೇ ಆಸ್ಪತ್ರೆ ಬಾಗಿಲು ತಟ್ಟುವುದಕ್ಕಿಂತ ನಿಮ್ಮ ಮನೆಯಲ್ಲಿಯೇ ಸಿಗುವ ಈ ಪದಾರ್ಥಗಳಿಂದ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.

ಎಳನೀರು: ಎಳನೀರು ಸರ್ವ ರೋಗಗಳಿಗೆ ರಾಮಬಾಣ ಅಂತ ಹೇಳುತ್ತಾರೆ ಅದೇ ರೀತಿ ಈ ಸಮಸ್ಯೆಗೆ ಎಳನೀರು ಮತ್ತು ತೆಂಗಿನಕಾಯಿ ನೀರು ರಾಮಬಾಣವಾಗಿದೆ. ಯಾಕೆಂದರೆ ಇವು ಹೊಟ್ಟೆಯಲ್ಲಿರುವ ಅಲ್ಸರ್ ಕಡಿಮೆ ಮಾಡುತ್ತವೆ. ಮತ್ತು ಹೊಟ್ಟೆಯಲ್ಲಿರುವ ಹುಳವನ್ನು ಕೊಲ್ಲುತ್ತದೆ. ಆದ್ದರಿಂದ ಎಳನೀರನ್ನು ಹೆಚ್ಚಾಗಿ ಕುಡಿಯಿರಿ.

ಜೇನುತುಪ್ಪ : ಜೇನುತುಪ್ಪದಲ್ಲಿ ಗ್ಲುಕೋಸ್ ಪೆರಾಕ್ಸೈಡ್ ಹೆಚ್ಚಾಗಿರುತ್ತದೆ. ಇದು ಹೊಟ್ಟೆಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಜೇನುತುಪ್ಪ ಸೇವನೆ ಮಾಡುವುದರಿಂದ ಅಲ್ಸರ್ ರೋಗಿಗೆ ನೆಮ್ಮದಿ ಸಿಗುತ್ತದೆ.

ಬಾದಾಮಿ: ಬಾದಾಮಿಯು ದೇಹಕ್ಕೆ ಅಗತ್ಯವಾದ ಕ್ಯಾಲೋರಿಯಷ್ಟು ಶಕ್ತಿಯನ್ನು ಒದಗಿಸುತ್ತದೆ ಮತ್ತು ಹಲವು ರೋಗಗಳ ವಿರುದ್ಧ ಹೋರಾಡಲು ಶಕ್ತಿಯನ್ನು ತುಂಬುತ್ತದೆ. ಆದ್ದರಿಂದ ಬಾದಾಮಿಯನ್ನು ರುಬ್ಬಿ ಸೇವನೆ ಮಾಡುವುದು ಅಲ್ಸರ್ ರೋಗವನ್ನು ಗುಣಪಡಿಸುತ್ತದೆ.

ಬಾಳೆಹಣ್ಣು : ಬಾಳೆಹಣ್ಣು ಹೊಟ್ಟೆಗೆ ಸಂಭಂದಿಸಿದ ಸಮಸ್ಯೆಗಳಿಗೆ ರಾಮಬಾಣ. ಕಾರಣ ಬಾಳೆ ಹಣ್ಣಿನಲ್ಲಿ ಎನ್ಟಿಬ್ಯಾಕ್ಟೀರಿಯಲ್ ಅಂಶವಿರುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಹೊಟ್ಟೆ ಹುಣ್ಣಿನಿಂದ ಬಳಲುವವರು ಬಾಳೆಹಣ್ಣು ಸೇವನೆ ಮಾಡಲು ನೀಡುವುದು ಒಳ್ಳೆಯದು.

ಬೆಳ್ಳುಳ್ಳಿ : ಮೂರು ಬೆಳ್ಳುಳ್ಳಿಯ ಎಸಳನ್ನು ಪೇಸ್ಟ್ ಮಾಡಿ, ಅದನ್ನು ನೀರಿಗೆ ಬೆರೆಸಿ ಕುಡಿಯುವುದರಿಂದ ಅಲ್ಸರ್ ನಿಯಂತ್ರಣಕ್ಕೆ ಬರುತ್ತದೆ.

Leave a Reply

Your email address will not be published. Required fields are marked *