ತಾಯಿ ಅನ್ನಪೂರ್ಣಿಯ ಸನ್ನಿದಿಯಲ್ಲಿ ಬಂದು ಪೂಜೆ ಸಲ್ಲಿಸಿದರೆ ಎಂದಿಗೂ ಅನ್ನದ ಕೊರತೆ ಇರೋದಿಲ್ಲ ಅನ್ನೋ ನಂಬಿಕೆ ಭಕ್ತರದ್ದು ಈ ದೇವಾಲಯದ ಹಲವು ವಿಶೇಷತೆ ಇಲ್ಲಿದೆ ನೋಡಿ. ಶ್ರೀ ಕ್ಷೇತ್ರ ಹೊರನಾಡು ಎಂದೂ ಕರೆಯಲಾಗುವ ಅನ್ನಪೂರ್ಣೇಶ್ವರಿ ದೇವಸ್ಥಾನ, ಚಿಕ್ಕಮಗಳೂರಿನ ಹೊರನಾಡಿನಲ್ಲಿರುವ ಭದ್ರಾ ನದಿಯ ದಡದ ಮೇಲಿದೆ. ಈ ದೇವಾಲಯವು ಪ್ರಾಚೀನ ಇತಿಹಾಸವನ್ನು ಹೊಂದಿದೆ.

ಈ ದೇವಸ್ಥಾನವನ್ನು ಅಗಸ್ತ್ಯ ಮುನಿಗಳು 400 ವರ್ಷಗಳ ಹಿಂದೆ ಕಟ್ಟಿಸಿದ್ದು. ವಾಸ್ತು ಶಿಲ್ಪ ಹಾಗು ಜ್ಯೋತಿಷ್ಯವನ್ನು ಅವಲಂಬಿಸಿ ಈ ಸಣ್ಣ ದೇವಸ್ಥಾನಕ್ಕೆ ನವೀಕರಣ ಹಾಗು ಸೇರ್ಪಡೆಗಳನ್ನು ಮಾಡಲಾಯಿತು. ಇಲ್ಲಿ ದೇವಿ, ಪೀಠದ ಮೇಲೆ ಶಂಖ, ಚಕ್ರ ಹಾಗು ಶ್ರೀ ಚಕ್ರವನ್ನು ಹಿಡಿದು ನಿಂತಿದ್ದಾಳೆ.

ವಿಶೇಷ: ತಾಯಿಯ ಸನ್ನಿದಿಗೆ ಬಂದಂತ ಭಕ್ತರಿಗೆ ತಿಂಡಿ, ಮಧ್ಯಾಹ್ನದ ಊಟ ಹಾಗು ರಾತ್ರಿ ಊಟವನ್ನು ನೀಡಲಾಗುತ್ತದೆ ಹಾಗು ಉಳಿದುಕೊಳ್ಳಲು ದೇವಸ್ಥಾನದ ಆವರಣದಲ್ಲೇ ಸ್ಥಳ ನೀಡಲಾಗುತ್ತದೆ.

ಭಕ್ತರ ನಂಬಿಕೆ: ಭಕ್ತರ ಪ್ರಕಾರ ಇಲ್ಲಿ ಪೂಜೆ ಸಲ್ಲಿಸಿದವರಿಗೆ ತಮ್ಮ ಜೀವನದಲ್ಲಿ ಎಂದಿಗೂ ಅನ್ನದ ಕೊರತೆ ಬರುವುದಿಲ್ಲ ಎಂಬುದು.

ಅನ್ನ ಪೂರ್ಣೇಸರಿ ಎಂದು ಹೆಸರು ಬರಲು ಕಾರಣ: ತನ್ನ ಸನ್ನಿದಿಗೆ ಬಂದಂತ ಭಕ್ತರಿಗೆ ಮೂರೂ ಹೊತ್ತು ಅನ್ನವನ್ನು ಕೊಡುತ್ತಾಳೆ ಹಾಗು ಯಾವುದೇ ತೊಂದರೆ ಇಲ್ಲದೆ ತನ್ನ ದರುಶನವನ್ನು ಪಡೆಯುವಂತೆ ಮಾಡುತ್ತಲೇ ಹಾಗಾಗಿ ಭಕ್ತರು ಎಲ್ಲರಿಗೂ ಅನ್ನ ನೀಡುವ ತಾಯಿ ಅನ್ನಪೂರ್ಣೇಶ್ವರಿ ಎಂದು ಕರೆಯುತ್ತಾರೆ.

Leave a Reply

Your email address will not be published. Required fields are marked *