Breaking News
Home / Featured / ಉತ್ತಮ ಆರೋಗ್ಯಕ್ಕೆ ಬಿಳಿ ಅಕ್ಕಿ ಅಥವಾ ಕೆಂಪು ಅಕ್ಕಿ ಯಾವ ಅಕ್ಕಿ ಬೆಸ್ಟ್ ಗೊತ್ತಾ..!

ಉತ್ತಮ ಆರೋಗ್ಯಕ್ಕೆ ಬಿಳಿ ಅಕ್ಕಿ ಅಥವಾ ಕೆಂಪು ಅಕ್ಕಿ ಯಾವ ಅಕ್ಕಿ ಬೆಸ್ಟ್ ಗೊತ್ತಾ..!

ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯಲ್ಲಿ ಪಾಸ್ಪರಸ್ ಹಾಗೂ ಮ್ಯಾಂಗನೀಸ್ ಅಂಶಗಳು ಹೆಚ್ಚು ಇರುತ್ತದೆ. ಇದು ನರಮಂಡಲವನ್ನು ವೃದ್ಧಿಗೊಳಿಸುತ್ತದೆ ಹಾಗೂ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವಂತಹ ಸೆಲೆನಿಯಂ ಅಂಶ, ಹೃದಯ ನಾಳಗಳನ್ನು ಬಲಪಡಿಸುತ್ತದೆ. ಜೊತೆಗೆ ಹೃದಯ ನಾಳಗಳಲ್ಲಿರುವ ಅನಾವಶ್ಯಕ ಕೊಬ್ಬು ಸೇರದಂತೆ ತಡೆಯುತ್ತದೆ. ಹಾಗೆಯೇ ಹೃದಯ ಸಂಬಂಧಿತ ಸಮಸ್ಯೆಗಳನ್ನ ಇದು ನಿವಾರಿಸುತ್ತದೆ.

ತೂಕ ಇಳಿಕೆಗೆ ಸಹಾಯ ನೈಸರ್ಗಿಕವಾಗಿ ಹೆಚ್ಚು ಫೈಬರ್‌ ಇರುವ ಅಹಾರದಲ್ಲಿ ತೂಕ ನಿರ್ವಹಣೆಗೆ ಸಹಾಯವಾಗುತ್ತದೆ. ಇದೇ ರೀತಿ, ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯಲ್ಲಿ 6 ಪಟ್ಟು ಹೆಚ್ಚು ಆಹಾರದ ಫೈಬರ್ ಅಂಶವಿರುತ್ತದೆ. ತಿನ್ನುವ ಆಸೆ ಕಡಿಮೆಯಾಗುತ್ತದೆ! ;ಕೆಂಪು ಅಕ್ಕಿ ತಿಂದರೆ ಹೆಚ್ಚು ಕಾಲ ನಿಮ್ಮ ಹೊಟ್ಟೆ ತುಂಬಿದಂತೆ ಆಗುತ್ತದೆ. ಹೀಗಾಗಿ, ಇತರೆ ಸಿಹಿ ತಿಂಡಿ ಸೇರಿದಂತೆ ಇತರೆ ಆಹಾರ ತಿನ್ನುವ ಬಯಕೆ ಕಡಿಮೆಯಾಗುತ್ತದೆ.

ಕೆಂಪು ಅಕ್ಕಿಯಲ್ಲಿ ಫೈಬರ್ ಅಂಶ ಇರುತ್ತದೆ. ಇದು ಹೊಟ್ಟೆಯ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ದೇಹದ ತೂಕವನ್ನ ಇಳಿಸುತ್ತದೆ. ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನ ಬ್ಯಾಲನ್ಸ್ ಮಾಡುತ್ತದೆ

ಹೆಚ್ಚು ಆ್ಯಂಟಿಆಕ್ಸಿಡೆಂಟ್‌ಗಳು ಇವೆ ;ಕೆಂಪಕ್ಕಿಯಲ್ಲಿ ಹಣ್ಣು, ತರಕಾರಿಗಳಂತೆ ಹೆಚ್ಚು ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿದೆ. ಅಲ್ಲದೆ, ಪರಿಸರದ ವಿಚಾರದಲ್ಲಿ ಸೃಷ್ಟಿಯಾಗಿರುವ ಫ್ರೀ ರ‍್ಯಾಡಿಕಲ್ಸ್‌ಗಳ ವಿರುದ್ಧ ಹೋರಾಡಲಿದೆ. ಸೆಲೆನಿಯಮ್ ಅಂಶ ಹೆಚ್ಚಿದೆ ;ಕೆಂಪು ಅಕ್ಕಿಯಲ್ಲಿ ಸೆಲೆನಿಯಮ್ ಅಂಶ ಹೆಚ್ಚಿದ್ದು, ಹೃದಯ ರೋಗ ತಡೆಯಲು ಸಹಾಯ ಮಾಡುತ್ತದೆ.

ಕ್ಯಾಲ್ಸಿಯಂ ಹೆಚ್ಚಿದೆ: ಕೆಂಪು ಅಕ್ಕಿಯಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಿದೆ. ಇದರಿಂದ ನಮ್ಮ ದೇಹದ ಮೂಳೆಗಳನ್ನು ಗಟ್ಟಿಯಾಗಿಡಲು ಸಹಾಯ ಮಾಡುತ್ತದೆ. ದೇಹದ ಚಯಾಪಚಯ ಕ್ರಿಯೆ ಉತ್ತಮಗೊಳಿಸುತ್ತದೆ ;ದೇಹದ ಚಯಾಪಚಯ ಕ್ರಿಯೆ ಹೆಚ್ಚಿಸಲು ಕೆಂಪು ಅಕ್ಕಿ ಸಹಾಯ ಮಾಡುತ್ತದೆ. ಕೆಂಪು ಅಕ್ಕಿಯಿಂದ ನಿಮ್ಮ ದೇಹದಲ್ಲಿ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *