Breaking News
Home / Featured / ರೈಲಿನಲ್ಲಿಯೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದು ಟಿಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭೂತ ಪೂರ್ವ ಮೆಚ್ಚುಗೆ..!

ರೈಲಿನಲ್ಲಿಯೇ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದು ಟಿಟಿಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭೂತ ಪೂರ್ವ ಮೆಚ್ಚುಗೆ..!

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ TTE (Travelling Ticket Examiner) ಯೊಬ್ಬರು ಹೆರಿಗೆ ಮಾಡಿಸಿ ಮಾನವೀಯತೆ ಮೆರೆದು ಬೇಷ್ ಎನಿಸಿಕೊಂಡಿದ್ದಾರೆ.

ದೆಹಲಿ ವಿಭಾಗದ ರೈಲ್ವೇ ಟಿಟಿಇ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಎಸ್. ರಾಣಾ ಅವರು ಕಾರ್ಯಕ್ಕೆ ರೈಲ್ವೇ ಇಲಾಖೆ ಬೇಷ್ ಎಂದಿದೆ. ರೈಲಿನಲ್ಲಿ ರಾತ್ರಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ಹೆರಿಗೆ ನೋವು ಕಾಣಿಕೊಂಡಿತ್ತು. ಈ ವೇಳೆ ರೈಲಿನಲ್ಲಿ ವೈದ್ಯರು ಇಲ್ಲದ ಕಾರಣ ರಾಣಾ ಅವರೇ ಇತರೇ ಪ್ರಯಾಣಿಕರ ಸಹಾಯ ಪಡೆದು ಹೆರಿಗೆ ಮಾಡಿಸಿದ್ದಾರೆ.

ಟಿಟಿಇ ಈ ಕೆಲಸವನ್ನು ಭಾರತೀಯ ರೈಲ್ವೆ ಇಲಾಖೆ ಮೆಚ್ಚಿದೆ. ರಾಣಾ ಅವರ ಮಾನವೀಯ ಮತ್ತು ಉದಾತ್ತ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ರೈಲ್ವೇ ಸಚಿವಾಲಯವು ಟ್ವೀಟ್ ಮಾಡಿ ಸಿಬ್ಬಂದಿ ಕೆಲಸವನ್ನು ಹೆಮ್ಮೆಯಿಂದ ಹೇಳಿಕೊಂಡಿದೆ.

ಟ್ವೀಟ್‍ನಲ್ಲಿ ಏನಿದೆ: ಭಾರತೀಯ ರೈಲ್ವೇ ಇಲಾಖೆ ಪ್ರಯಾಣಿಕರ ಮೊಗದಲ್ಲಿ ನಗು ಮೂಡಿಸಿದೆ. ದೆಹಲಿ ವಿಭಾಗದ ಟಿಟಿಇ ಎಚ್.ಎಸ್ ರಾಣಾ ಅವರು ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಗೆ ರಾತ್ರಿ ಇತರೆ ಪ್ರಯಾಣಿಕರ ಸಹಾಯ ಪಡೆದು ಹೆರಿಗೆ ಮಾಡಿಸಿದ್ದಾರೆ. ರೈಲಿನಲ್ಲಿ ವೈದ್ಯರು ಇರದ ಕಾರಣ ಅವರೇ ಹೆರಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಸಿಬ್ಬಂದಿಯ ಈ ಕಾರ್ಯಕ್ಕೆ ನಾವು ಹೆಮ್ಮೆ ಪಡುತ್ತೇವೆ ಎಂದು ಬರೆದು ಟ್ವೀಟ್ ಮಾಡಿದೆ.

About SSTV Kannada

Check Also

ಪದೇ ಪದೇ ತಲೆನೋವು ಬರುತ್ತದೆಯೋ ಜಸ್ಟ್ ಹೀಗೆ ಮಾಡಿ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ..!

ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡ, ಬದಲಾದ ವಾತಾವರಣದಿಂದ ತಲೆನೋವು ಅನ್ನೋದು ಸಾಮಾನ್ಯವಾಗಿ ಬರುವಂತ ರೋಗವಾಗಿದೆ. ಇದಕ್ಕೆ ನಾವು ಪ್ರತಿ ದಿನ …

Leave a Reply

Your email address will not be published. Required fields are marked *