ಹಲಸಿನ ಹಣ್ಣುಗಳ ಸೀಸನ್ ಆರಂಭವಾಗುತ್ತಿದೆ. ಹಲಸಿನ ಹಣ್ಣು ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹಲಸಿನ ಹಣ್ಣಿನಲ್ಲಿ ಹಲವಾರು ರೀತಿಯಾದ ಆರೋಗ್ಯಕಾರಿ ಲಾಭಗಳಿವೆ. ಅಷ್ಟೇ ಹಲಸಿನ ಹಣ್ಣಿನ ಬೀಜದಲ್ಲೂ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳಿವೆ ಎಂದರೆ ಆಶ್ಚರ್ಯ ಪಡುತ್ತೀರಾ. ಖಂಡಿತ ಹಲಸಿನ ಬೀಜದಲ್ಲಿ ಹಲವಾರು ಆರೋಗ್ಯಕಾರಿ ಲಾಭಗಳಿವೆ.

ರಕ್ತಹೀನತೆ ಸಮಸ್ಯೆ ನಿವಾರಿಸುತ್ತದೆ: ಹಲಸಿನ ಬೀಜದಲ್ಲಿ ಕಬ್ಬಿನಾಂಶ ಇದೇ. ಈ ಕಬ್ಬಿನಾಂಶವು ರಕ್ತ ಹೀನತೆ ಸಮಸ್ಯೆ ಹೊಂದಿರುವವರಿಗೆ ಉತ್ತಮ ಪರಿಹಾರವಾಗಿದೆ. ಹಲಸಿನ ಬೀಜವನ್ನು ತಿನ್ನುವುದರಿಂದ ಕೆಂಪು ರಕ್ತಕಣವು ಸಹ ಹೆಚ್ಚಾಗುತ್ತದೆ.

ಮಲಬದ್ಧತೆ ನಿವಾರಿಸುತ್ತದೆ: ಈ ಬೀಜಗಳಲ್ಲಿ ನಾರಿನಂಶ ಜಾಸ್ತಿ ಇರುವುದರಿಂದ ಇದನ್ನು ಬೇಯಿಸಿ ಒಣಗಿಸಿ ಪುಡಿ ಮಾಡಿಟ್ಟುಕೊಂಡು ಪ್ರತಿದಿನ 2-3 ಗ್ಲಾಸ್ ನೀರಿನಲ್ಲಿ 2-3 ಚಮಚ ಪುಡಿ ಸೇರಿಸಿ ಕುಡಿಯುವುದರಿಂದ ಮಲಬದ್ಧತೆ ನೈಸರ್ಗಿಕವಾಗಿ ನಿವಾರಣೆಯಾಗುತ್ತದೆ.

ಲೈಂಗಿಕ ಶಕ್ತಿ ವೃದ್ಧಿಸುತ್ತದೆ: ಹಲಸಿನಬೀಜಗಳನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಿ ಇದನ್ನು ಕಡ್ಲೆಕಾಯಿ ಹುರಿದಂತೆ ಹುರಿದು ಪ್ರತಿದಿನ 30-40 ದಿನಗಳ ಕಾಲ 10-15 ಪೀಸ್​ಗಳನ್ನು ಸೇವಿಸಿದಲ್ಲಿ ಲೈಂಗಿಕ ನಿರಾಸಕ್ತಿ ಸಮಸ್ಯೆ ನಿವಾರಣೆಯಾಗುತ್ತದೆ.

ಕಣ್ಣಿನ ದೃಷ್ಟಿಯನ್ನು ವೃದ್ಧಿಸುತ್ತದೆ: ಈ ಬೀಜಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಬಹಳ ಸಹಕಾರಿ. ಕ್ಯಾಟರಾಕ್ಟ್ ಹಾಗೂ ಡಿಜನರೇಶನ್ ತಡೆಗಟ್ಟಲು ಇವುಗಳ ಸೇವನೆ ಸಹಾಯ ಮಾಡಬಲ್ಲದು.

ಅಷ್ಟೇ ಅಲ್ಲದೆ ಹಲಸಿನ ಬೀಜಗಳಲ್ಲಿ ಮ್ಯಾಂಗನೀಸ್ ಇದೆ. ಈ ಅಂಶ, ರಕ್ತ ದೇಹದಲ್ಲಿ ಅನಗತ್ಯವಾಗಿ ಹೆಪ್ಪುಗಟ್ಟದಂತೆ ತಡೆಯುತ್ತದೆ.

Leave a Reply

Your email address will not be published. Required fields are marked *