Breaking News
Home / Featured / ನಿಮ್ಮ ವಾಹನಗಳು ಯಾವುದೇ ಕಾರಣಕ್ಕೂ ಅಪಘಾತವಾಗದೆ ಸುರಕ್ಷಿತವಾಗಿರಬೇಕು ಅಂದ್ರೆ ಈ ರೀತಿಯಾಗಿ ಮಾಡಲೇಬೇಕು..!

ನಿಮ್ಮ ವಾಹನಗಳು ಯಾವುದೇ ಕಾರಣಕ್ಕೂ ಅಪಘಾತವಾಗದೆ ಸುರಕ್ಷಿತವಾಗಿರಬೇಕು ಅಂದ್ರೆ ಈ ರೀತಿಯಾಗಿ ಮಾಡಲೇಬೇಕು..!

ವಾಹನಗಳಿಗೆ ದೃಷ್ಟಿ ತಗಲಿದರೆ ಅದರಲ್ಲಿ ಪ್ರಯಾಣ ಮಾಡುವ ನಿಮಗೆ ಒಂದಲ್ಲಾ ಒಂದು ರೀತಿಯ ತೊಂದರೆಗಳು ನಿರ್ಮಾಣವಾಗುತ್ತದೆ ಉದಾಹರಣೆಗೆ ಅಪಘಾತದ ಪ್ರಸಂಗಗಳು, ವಾಹನದಲ್ಲಿ ಸವಾರಿ ಮಾಡಿದರೆ ತಲೆ ಭಾರವಾಗುವುದು, ವಾಹನ ಸವಾರಿ ನಂತರ ಸುಸ್ತಾಗುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ನಿಮ್ಮ ವಾಹನಗಳಿಗೆ ದೃಷ್ಟಿ ತಗಲಿದೆ ಎಂದು ಅರ್ಥ.

ವಾಹನಗಳ ದೃಷ್ಟಿಯನ್ನು ತೆಗೆಯಲು ಆಂಜನೇಯ ಸ್ವಾಮಿ ಅಥವಾ ಇತರ ಉಚ್ಚ ದೇವತೆಗಳ ದೇವಸ್ಥಾನಗಳಿಗೆ ತೆರಳಿ ಅಲ್ಲಿ ದೃಷ್ಟಿಯನ್ನು ತೆಗೆಯಬೇಕು, ದೃಷ್ಟಿ ತೆಗೆಯಲು ಮೊದಲು ವಾಹನದ ಬಾಗಿಲು ಮತ್ತು ಮುಂದಿನ ಭಾಗವನ್ನು ತೆರೆದು ಇಡಬೇಕು, ನಂತರ ವಾಹನದ ಮುಂದೆ ನಿಂತು ಒಂದು ತೆಂಗಿನಕಾಯಿಯಿಂದ ಬಲ ಭಾಗಕ್ಕೆ ವರ್ತುಲ ಕೃತಿಯಲ್ಲಿ ಮೂರು ಬಾರಿ ತೆಂಗಿನಕಾಯಿಯನ್ನು ನಿವಾಳಿಸಬೇಕು ದೃಷ್ಟಿ ತೆಗೆದ ನಂತರ ಆ ತೆಂಗಿನಕಾಯಿಯನ್ನು ಮಾರುತಿಯ ದೇವಾಲಯ ಅಥವಾ ಉಚ್ಚ ದೇವಾಲಯ ಮೆಟ್ಟಿಲಿನ ಮೇಲೆ ಹೊಡೆಯಬೇಕು, ಹೀಗೆ ಮಾಡುವುದರಿಂದ ತೆಂಗಿನಕಾಯಿಯಲ್ಲಿ ಸೆಳೆಯಲ್ಪಟ್ಟ ತ್ರಾಸದಾಯಕ ಸ್ಪಂದನಗಳು ದೇವತೆಯ ಆಶೀರ್ವಾದದೊಂದಿಗೆ ನಾಶವಾಗುತ್ತದೆ.

ಅಥವಾ ನೀವು ಇರುವ ಜಾಗದಲ್ಲಿ ದೇವಾಲಯಗಳು ಸಿಗದಿದ್ದರೆ ನೀವು ಇರುವ ಸ್ಥಳದಲ್ಲಿ ತೆಂಗಿನಕಾಯಿಯಿಂದ ವಾಹನ ದೃಷ್ಟಿಯನ್ನು ತೆಗೆದ ನಂತರ ಸಂಪೂರ್ಣ ಬಲವನ್ನು ಉಪಯೋಗಿಸಿ ನಿಮ್ಮ ತೆಂಗಿನಕಾಯಿಯನ್ನು ನೆಲಕ್ಕೆ ಹೊಡೆಯಬೇಕು, ಒಡೆದ ತೆಂಗಿನಕಾಯಿಯ ತುಂಡುಗಳನ್ನು ಒಟ್ಟುಗೂಡಿಸಿ ಅವುಗಳನ್ನು ಗಾಡಿಯ ಮೇಲಿಂದ ನಾಲ್ಕು ದಿಕ್ಕುಗಳಿಗೆ ಎಸೆಯಬೇಕು, ಹೀಗೆ ಬಲವಾಗಿ ಭೂಮಿಗೆ ಕಾಯಿಂದ ಹೊಡೆಯುವುದರಿಂದ ತ್ರಾಸದಾಯಕ ಸ್ಪಂದನಗಳು ಭೂಮಿಯಲ್ಲಿ ವಿಸರ್ಜಿಸಲ್ಪಡುತ್ತದೆ.

ಹೀಗೆ ದೃಷ್ಟಿ ತೆಗೆದ ನಂತರ ನಿಮ್ಮ ವಾಹನವನ್ನು ಊದುಬತ್ತಿ ಗಳಿಂದ ಬೆಳಗಿಸಿ ಮತ್ತು ದೇವತೆಯ ಜಯಘೋಷ ಮಾಡಿ ಹೊರಡಿ, ಊದುಬತ್ತಿ ಗಳಿಂದ ಬೆಳಗುವುದರಿಂದ ಆ ಸ್ಥಳದ ಶುದ್ಧೀಕರಣವಾಗುತ್ತದೆ, ಹಾಗೂ ಯಾವುದೇ ಅಪಾಯ ಅವಗಡ ಗಳಿಲ್ಲದೆ ನಿಮ್ಮ ಪ್ರಯಾಣ ಸಂಪೂರ್ಣವಾಗುತ್ತದೆ.

About SSTV Kannada

Check Also

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ …

Leave a Reply

Your email address will not be published. Required fields are marked *