ನಾವು ಸಾಮಾನ್ಯವಾಗಿ ಒಂದು ಅಥವಾ ಎರಡು ದೇವರಿರುವ ದೇವಾಲಯಗಳನ್ನು ನೋಡಿದ್ದೇವೆ. ಆದರೆ ಇಂದು ನಾವು ತಿಳಿಸುವ ದೇವಸ್ಥಾನವು ನಾಲ್ಕು ದೇವರಿರುವ ಕರ್ನಾಟಕದ ಏಕೈಕ ದೇವಸ್ಥಾನ. ಈ ದೇವಸ್ಥಾನದಲ್ಲಿ ಭಕ್ತರು ಬೇಡಿದ್ದನ್ನು ಕರುಣಿಸುವ ದೇವಾಲಯ. ದಿನನಿತ್ಯ ಸಾವಿರಾರು ಭಕ್ತಾದಿಗಳು ಈ ಸ್ಥಳಕ್ಕೆ ಬಂದು ತಮ್ಮ ಕಷ್ಟಗಳನ್ನು ಬಗೆಹರಿಸಿಕೊಂಡು ಹೋಗುತ್ತಾರೆ. ಈ ದೇವಸ್ಥಾನದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಈ ಪುಣ್ಯಕ್ಷೆತ್ರ ಕಾನತ್ತೂರು ನಾಲ್ವರು ದೈವವಿರುವ ಸುಕ್ಷೆತ್ರ. ಕರ್ನಾಟಕ ಮತ್ತು ಕೇರಳದ ಗಡಿಭಾಗವಾದ ಕಾಸರಗೋಡಿನ ಬೋವಿಕಾಳ ಬಳಿ ಇದೆ. ಈ ದೇವಾಲಯದಲ್ಲಿ ವಿಷ್ಣು, ರಕ್ತೇಶ್ವರಿ. ಉಗ್ರಮಾರ್ತಿ, ರಕ್ತಚಾಮುಂಡಿ ಎಂಬ ನಾಲ್ಕು ದೈವವಿರುವ ಏಕೈಕ ದೇವಾಲಯ. ಈ ದೇವಾಲಯದಲ್ಲಿ ದಿನನಿತ್ಯ ವಿಶೇಷ ಪೂಜೆಗಳು ನೆಡೆಯುತ್ತವೆ. ಕೇರಳ ಮತ್ತು ಕರ್ನಾಟಕದ ಗಡಿ ಭಾಗದ ಜನರು ಈ ದೇವಾಲಯವನ್ನು ಸುಪ್ರೀಂ ಕೋರ್ಟ್ ಗಿಂತಲೂ ಹೆಚ್ಚಿನದಾಗಿ ನಂಬುತ್ತಾರೆ. ಯಾಕೆಂದರೆ ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಇದ್ದಂತೆ.

ನ್ಯಾಯಾಲಗಳಲ್ಲಿ ಕೂಡ ಬಗೆಹರಿಯದ ಎಷ್ಟೋ ಪ್ರಕರಣಗಳು ಈ ದೇವಸ್ಥಾನದಲ್ಲಿ ಬಗೆಹರಿದಿವೆ. ಸುಳ್ಳು ಸಾಕ್ಷಿ ಕೊಟ್ಟು ನ್ಯಾಯಾಲಯದಲ್ಲಿ ತಪ್ಪಿಸಿಕೊಳ್ಳಬಹುದು ಆದರೆ ಈ ದೇವಸ್ಥಾನದಲ್ಲಿ ಸುಳ್ಳು ಹೇಳಿದರೆ ಅವರಿಗೆ ಶಿಕ್ಷೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ದೇವಸ್ಥಾನದಲ್ಲಿ ತಪ್ಪಿಗೆ ಶಿಕ್ಷೆ ಹೇಗೋ ಅದೇ ರೀತಿಯಲ್ಲಿ ಪ್ರೇತಾತ್ಮಗಳ ಸಮಸ್ಯೆಯನ್ನು ಸಹ ಈ ನಾಲ್ವರಿರುವ ದೈವಾಲಯ ಬಗೆಹರಿಸುತ್ತದೆ.

ಭಕ್ತರ ಕಷ್ಟ ಪರಿಹಾರ ಆದರೆ ತಪ್ಪದೆ ಇಲ್ಲಿಗೆ ಸೇವೆಗಳನ್ನು ಅರ್ಪಿಸುತ್ತಾರೆ. ನಿಗದಿತ ವಿವಾಹಗಳು ಮುರಿದುಬಿದ್ದರೆ ಈ ದೇವಾಲಯಕ್ಕೆ ದೂರನ್ನು ಕೊಡುತ್ತಾರೆ. ಆಗ ಎರಡು ಕಡೆಯವರನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿ ಮತ್ತೆ ವಿವಾಹವಾದ ಘಟನೆಗಳು ಸಹ ನಡೆದಿವೆ. ನ್ಯಾಯಯುತವಾಗಿ ಹಣ ಪಡೆದುಕೊಂಡು ಕೊಡದೆ ಇದ್ದಾಗ ಇಲ್ಲಿಗೆ ದೂರು ನೀಡಿದರೆ ಹಣ ಯಾರಿಗೆ ಸೇರಬೇಕೋ ಅವರಿಗೆ ಸೇರುತ್ತದೆ.

ಈ ದೇವಸ್ಥಾನಕ್ಕೆ ಯಾರಾದರೂ ದೂರು ನೀಡಿದರೆ ಅವರು ಯಾರ ವಿರುದ್ಧ ದೂರು ನೀಡಿರುತ್ತಾರೋ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ನೋಟೀಸ್ ಜಾರಿ ಮಾಡುತ್ತದೆ. ಆ ನೋಟೀಸ್ ಗೆ ಅವರು ಎದುರು ಮಾತನಾಡದೆ ಎರಡು ಕಡೆಯವರು ಕೂಡ ಆಡಳಿತ ಮಂಡಳಿ ನಿಗದಿ ಮಾಡಿದ ದಿನಾಂಖದಂದು ಹಾಜರಾಗಬೇಕು ಆಗ ವಿಚಾರಣೆ ನೆಡೆಸಿ ನ್ಯಾಯವನ್ನು ದೈವರ ಆಜ್ಞೆಯಂತೆ ನೀಡುತ್ತಾರೆ.

ಈ ದೇವಾಲಯದಲ್ಲಿ ಯಾವುದೇ ಧರ್ಮ ಜಾತಿ ಭೇದವಿಲ್ಲ ಹಿಂದೂ, ಮುಸ್ಲಿಂ, ಕ್ರಿಸ್ತರು ಎಲ್ಲ ಜಾತಿ ಧರ್ಮದವರು ಸಹ ಈ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ದೇವಾಲಯಕ್ಕೆ ತಮ್ಮದೇ ಅದ ಸೇವೆಯನ್ನು ಅರ್ಪಿಸುತ್ತಾರೆ.

ಈ ರೀತಿಯಾಗಿ ಭಕ್ತರು ಎಲ್ಲ ವಿಧದ ಸಮಸ್ಯೆಗಳಿಗೆ ಕೋರ್ಟು ಕಛೇರಿ ಎಂದು ಅಲಿಯದೆ ಈ ದೇವಾಲಯಕ್ಕೆ ಭೇಟಿನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಂಡು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *