Breaking News
Home / Featured / ಬಾಲಕನನ್ನು ಸುಮಾರು 8 ಕಿ.ಮೀ ಹೊತ್ಕೊಂಡು ಹೋಗಿ ಕ್ಯಾಂಪ್‍ನಲ್ಲಿ ಚಿಕಿತ್ಸೆ – ನಮ್ಮ ಹೆಮ್ಮೆಯ ಸೈನಿಕರ ವಿಡಿಯೋ ವೈರಲ್..!

ಬಾಲಕನನ್ನು ಸುಮಾರು 8 ಕಿ.ಮೀ ಹೊತ್ಕೊಂಡು ಹೋಗಿ ಕ್ಯಾಂಪ್‍ನಲ್ಲಿ ಚಿಕಿತ್ಸೆ – ನಮ್ಮ ಹೆಮ್ಮೆಯ ಸೈನಿಕರ ವಿಡಿಯೋ ವೈರಲ್..!

ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನನ್ನು ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಮೂಲಕ ಸೈನಿಕರು ಮಾನವೀಯತೆ ಮೆರೆದಿದ್ದಾರೆ.

ಚತ್ತೀಸ್‍ಗಢದ ದಾಂತೇವಾಡ ಪ್ರದೇಶದಲ್ಲಿರುವ ಗುಮೋದಿ ಗ್ರಾಮದ 13 ವರ್ಷದ ಬಾಲಕ ಅನಾರೋಗ್ಯದಿಂದ ಬಳಲುತ್ತಿದ್ದ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ 231 ಬೆಟಾಲಿಯನ್ ಪಡೆಯ ಸೈನಿಕರು ಬಾಲಕನನ್ನು ನೋಡಿದ್ದಾರೆ. ಆತನ ಸ್ಥಿತಿಯನ್ನು ಅರಿತ ಯೋಧರು ಮಂಚವನ್ನು ಹಗ್ಗದ ಸಹಾಯದಿಂದ ಉದ್ದದ ಕಟ್ಟಿಗೆ ಕಟ್ಟಿದ್ದಾರೆ. ಬಳಿಕ ಇಬ್ಬರು ಯೋಧರು ಅದನ್ನು ಹೆಗಲ ಮೇಲೆ ಇಟ್ಟುಕೊಂಡು ಬಾಲಕನನ್ನು ಕ್ಯಾಂಪ್‍ಗೆ ಸಾಗಿಸಿದ್ದಾರೆ.

ಗುಮೋದಿ ಗ್ರಾಮದಿಂದ 8 ಕಿ.ಮೀ. ದೂರದಲ್ಲಿದ್ದ ಕ್ಯಾಂಪ್‍ವರೆಗೂ ಯೋಧರು ಬಾಲಕನನ್ನು ಹೊತ್ತುಕೊಂಡು ಸಾಗಿದ್ದಾರೆ. ಸೈನಿಕರ ಹಿಂದೆ ಬಾಲಕನ ಸಂಬಂಧಿಕರು, ಸ್ನೇಹಿತರು ಕೂಡ ಹೆಜ್ಜೆಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯೋಧರ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಬಾಲಕನಿಗೆ ಕಾಮಾಲೆ ಕಾಯಿಲೆ ಕಾಣಿಸಿಕೊಂಡಿತ್ತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿಕಿತ್ಸೆ ಮುಂದುವರಿದಿದೆ ಎಂದು ವರದಿಯಾಗಿದೆ.

About SSTV Kannada

Check Also

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ …

Leave a Reply

Your email address will not be published. Required fields are marked *