Breaking News
Home / Featured / ಬ್ಯಾಂಕ್ ಗ್ರಾಹಕರಿಗೆ RBI ಕಡೆಯಿಂದ ಗುಡ್ ನ್ಯೂಸ್…!

ಬ್ಯಾಂಕ್ ಗ್ರಾಹಕರಿಗೆ RBI ಕಡೆಯಿಂದ ಗುಡ್ ನ್ಯೂಸ್…!

ಭಾರತೀಯ ರಿಸರ್ವ್ ಬ್ಯಾಂಕ್ ಆನ್ಲೈನ್ ನಲ್ಲಿ ಹಣದ ವಹಿವಾಟು ಮಾಡುವವರಿಗೆ ಸಿಹಿ ಸುದ್ದಿ ನೀಡಿದೆ. ರೆಪೋ ಕಡಿತ ಮಾಡುವ ಮೂಲಕ ಜನಸಾಮಾನ್ಯರಿಗೆ ಸಿಹಿ ಸುದ್ದಿ ನೀಡಿರುವ ಆರ್ಬಿಐ ಜೊತೆಗೆ RTGS ಹಾಗೂ NEFT ಮೇಲೆ ವಿಧಿಸಲಾಗುತ್ತಿದ್ದ ವಹಿವಾಟು ಶುಲ್ಕವನ್ನು ರದ್ದುಗೊಳಿಸಿದೆ.

ಅಂದರೆ ನೀವು ದೊಡ್ಡ ಮೊತ್ತವನ್ನು ಉಚಿತವಾಗಿ ಆನ್ಲೈನ್ ಮೂಲಕ ವರ್ಗಾವಣೆ ಮಾಡಬಹುದು. RTGS ಒಂದು ಹಣ ವರ್ಗಾವಣೆ ಮಾಧ್ಯಮ. ದೊಡ್ಡ ಮೊತ್ತದ ಹಣವನ್ನು ಈ ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಇದರ ಮೂಲಕ ಕನಿಷ್ಠ 2 ಲಕ್ಷ ರೂಪಾಯಿ ವರ್ಗಾವಣೆ ಮಾಡಬಹುದು.

ಭಾನುವಾರ ಹಾಗೂ ರಜಾ ದಿನಗಳಲ್ಲಿ RTGS ಲಭ್ಯವಿರುವುದಿಲ್ಲ. ಆನ್ಲೈನ್ ಹಾಗೂ ಬ್ಯಾಂಕ್ ಶಾಖೆ ಮೂಲಕ ಇದನ್ನು ಬಳಕೆ ಮಾಡಬಹುದು. ಇಲ್ಲಿಯವರೆಗೆ ಬೇರೆ ಬೇರೆ ಬ್ಯಾಂಕ್ ಗಳು RTGS ಗೆ ಬೇರೆ ಬೇರೆ ಶುಲ್ಕ ವಿಧಿಸುತ್ತಿದ್ದವು.

ದೇಶದ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 12 ಗಂಟೆಯೊಳಗೆ 2 ಲಕ್ಷದಿಂದ 5 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ರೆ 25 ರೂಪಾಯಿ ಶುಲ್ಕ ವಸೂಲಿ ಮಾಡುತ್ತಿತ್ತು. 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತಕ್ಕೆ 51 ರೂಪಾಯಿ ಶುಲ್ಕ ನೀಡಬೇಕಾಗಿತ್ತು.

ಇನ್ನು NEFT ಮೂಲಕವೂ ಆನ್ಲೈನ್ ಹಾಗೂ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಬಹುದು. ಇದು ವರ್ಗಾವಣೆ ಮಾಡಿದ ತಕ್ಷಣ ತಲುಪುವುದಿಲ್ಲ. ವರ್ಗಾವಣೆ ಪ್ರಕ್ರಿಯೆಗೆ ಸ್ವಲ್ಪ ಸಮಯ ಹಿಡಿಯುತ್ತದೆ. ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರು NEFT ಮೂಲಕ 10,000 ರೂಪಾಯಿ ವರ್ಗಾವಣೆ ಮಾಡಿದ್ರೆ 2.50 ರೂಪಾಯಿ ಶುಲ್ಕ ಪಾವತಿ ಮಾಡಬೇಕಾಗಿತ್ತು. 1 ಲಕ್ಷಕ್ಕೆ 5 ರೂಪಾಯಿಯಾದ್ರೆ 1 ರಿಂದ 2 ಲಕ್ಷಕ್ಕೆ 15 ರೂಪಾಯಿ ಶುಲ್ಕ ಪಾವತಿಸಬೇಕಾಗಿತ್ತು. ಈಗ ಈ ಎರಡೂ ಶುಲ್ಕ ಪಾವತಿ ರದ್ದಾಗಿದೆ.

About SSTV Kannada

Check Also

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ …

Leave a Reply

Your email address will not be published. Required fields are marked *