Breaking News
Home / Featured / ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನವನದ ಚೆಲುವೆ ಸುಮನ್ ರಂಗನಾಥನ್, ಮದುವೆ ಆಗಿದ್ದು ಯಾರು ಗೊತ್ತಾ..!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನವನದ ಚೆಲುವೆ ಸುಮನ್ ರಂಗನಾಥನ್, ಮದುವೆ ಆಗಿದ್ದು ಯಾರು ಗೊತ್ತಾ..!

ಕನ್ನಡ, ತೆಲಗು, ತಮಿಳು, ಹಿಂದಿ, ಭೋಜ್‍ಪುರಿ ಹೀಗೆ ಬಹುಭಾಷೆಗಳಲ್ಲಿ ಸಿನಿಮಾ ಮಾಡಿ ಮಿಂಚಿರುವ ಚಂದನವನದ ಚೆಲುವೆ ಸುಮನ್, ಉದ್ಯಮಿ ಸಜನ್ ಅವರನ್ನು ವರಿಸಿದ್ದಾರೆ. ಮೂಲತಃ ಕೊಡಗಿನವರಾದ ಸಜನ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಸೋಮವಾರದಂದು ಖಾಸಗಿಯಾಗಿ ತಮ್ಮ ಆತ್ಮೀಯ ಬಳಗ ಹಾಗೂ ಕುಟುಂಬಸ್ಥರ ಆಶೀರ್ವಾದ ಪಡೆದು ಸಿಂಪಲ್ ಆಗಿ ಸಜನ್ ಅವರ ಜೊತೆ ಸುಮನ್ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ.

ತಮ್ಮ ಪತಿ ಬಗ್ಗೆ ಮಾತನಾಡಿದ ಸುಮನ್, 8 ತಿಂಗಳ ಹಿಂದೆ ನಮ್ಮಿಬ್ಬರ ಪರಿಚಯವಾಗಿತ್ತು. ಕೆಲವು ಭೇಟಿ ನಂತರ ಸ್ನೇಹ ಬೆಳೆಯಿತು. ಹೀಗೆ ಭೇಟಿ ಮಾಡುತ್ತಾ ನಾವಿಬ್ಬರು ಪ್ರೀತಿಯಲ್ಲಿ ಬಿದ್ದು, ಡೇಟಿಂಗ್ ಮಾಡಿದೆವು. ಬಳಿಕ ಇದು ಮದುವೆಯಾಗಲು ಸರಿಯಾದ ಸಮಯವೆಂದು ನಿರ್ಧರಿಸಿ, ಎರಡೂ ಕುಟುಂಬದವರ ಒಪ್ಪಿಗೆ ಪಡೆದು ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದರು.

ನಾವಿಬ್ಬರು ಕೂಡ ಹೆಚ್ಚಾಗಿ ಯಾರೊಂದಿಗೂ ಬೇರೆಯುವುದಿಲ್ಲ. ಹೆಚ್ಚು ಖಾಸಗಿಯಾಗಿ ಇರಲು ಬಯಸುತ್ತೇವೆ. ಹೀಗಾಗಿ ಸಿಂಪಲ್ ಆಗಿ ಹೊಸ ಜೀವನ ಶುರುಮಾಡಬೇಕೆಂದು ತೀರ್ಮಾನಿಸಿ, ನಮ್ಮ ಆತ್ಮೀಯ ಬಳಗ ಹಾಗೂ ಕುಟುಂಬಸ್ಥರ ನಡುವೆ ವಿವಾಹವಾದೆವು. ನಮ್ಮಿಬ್ಬರ ಆಲೋಚನೆಗಳು ಕೂಡ ಒಂದೇ ರೀತಿ ಇರುವುದೇ ನಾವು ಒಂದಾಗಲು ಕಾರಣ. ನನ್ನ ಪತಿ ಬಹಳ ಸರಳ ಜೀವಿ. ಹೀಗಾಗಿ ಅವರೊಂದಿಗೆ ನಾನು ಬೇರೆಯಲು ಸುಲಭವಾಯ್ತು. ನಮ್ಮಿಬ್ಬರ ಆಲೋಚನೆ, ಜೀವನದ ಹಾದಿ ಚೆನ್ನಾಗಿ ಹೊಂದಾಣಿಕೆಯಾಗುತ್ತದೆ. ಆದ್ದರಿಂದ ನಾವು `ಮೇಡ್ ಫಾರ್ ಈಚ್ ಅದರ್’ ಎಂದು ಖುಷಿಯನ್ನು ವ್ಯಕ್ತಪಡಿಸಿದರು.

About SSTV Kannada

Check Also

ತುಳು ನಾಡಿನ ಹಿರಿಯ ಬ್ರಾಹ್ಮಣ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರಿಂದ ಈ ದಿನದ ರಾಶಿ ಭವಿಷ್ಯ..!

ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ …

Leave a Reply

Your email address will not be published. Required fields are marked *