ಈಗ ಬೇಸಿಗೆಯಾಗಿದ್ದು ಮಕ್ಕಳು ಮನೆಯಲ್ಲೇ ಇರುತ್ತಾರೆ. ಆಗ ಅವರಿಗೆ ಏನಾದರು ತಿನಿಸು ಮಾಡಿಕೊಡಬೇಕೆಂದು ಅಂದುಕೊಂಡಿದ್ದರೆ ಅನಾನಸ್ ಬರ್ಫಿ ಮಾಡಬಹುದು ನೋಡಿ. ನಿಮ್ಮ ಮನೆಯಲ್ಲೇ ಈ ಕೆಳಗಿನ ಸಾಮಗ್ರಿಗಳ ಮೂಲಕ ನಿಮ್ಮ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾಗಿದೆ.

ಅನನಾಸ್‌ ಬರ್ಫಿ ತಯಾರಿಸಲು ಬೇಕಾಗುವ ಸಾಮಗ್ರಿಗಳು: ಅನಾನಸ್‌ ಹೋಳು – 5 , ತೆಂಗಿನ ತುರಿ- 2 ಕಪ್‌, ತುಪ್ಪ- 2 ಚಮಚ, ಸಕ್ಕರೆ- 1 ಕಪ್‌, ಏಲಕ್ಕಿ ಪುಡಿ- ಅರ್ಧ ಚಮಚ.

ಅನನಾಸ್‌ ಬರ್ಫಿ ಮಾಡುವ ವಿಧಾನ: ದಪ್ಪ ತಳದ ಪಾತ್ರೆಗೆ ತುಪ್ಪ ಹಾಗೂ ತೆಂಗಿನತುರಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಅನಾನಸ್‌ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು, ಹುರಿದ ತೆಂಗಿನತುರಿಗೆ ಹಾಕಿ. ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ, ಈ ಮಿಶ್ರಣವನ್ನು ಕರಗುವವರೆಗೆ ಕುದಿಸಿ. ಗಟ್ಟಿಯಾಗುವವರೆಗೆ ಕುದಿಸಿದ ಅನಂತರ ತುಪ್ಪ ಹಾಕಿ ತಳ ಹತ್ತದಂತೆ ಕೈಯಾಡಿಸಿ. ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ, ತಣ್ಣಗಾದ ಅನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

Leave a Reply

Your email address will not be published. Required fields are marked *