ಇದೊಂದು ವಿಭಿನ್ನವಾದ ರಸಂ, ಈ ವಾತಾವರಣಕ್ಕೆ ಹೇಳಿ ಮಾಡಿಸಿದ ಹಾಗಿದೆ, ಕೆಮ್ಮು, ಶೀತ ಇದಕ್ಕೆಲ್ಲ ಒಳ್ಳೆಯ ಮನೆ ಔಷಧಿ, ವೀಳ್ಯದೆಲೆಯಲ್ಲಿ ಕ್ಯಾಲ್ಸಿಯಂ ಅಂಶವು ಹೇರಳವಾಗಿದೆ, ಇದರಿಂದ ರಸಂ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳೋಣ.

ಇದನ್ನು ಬಿಸಿಬಿಸಿ ಅನ್ನಕ್ಕೆ ತುಪ್ಪದ ಜೊತೆ ಮತ್ತು ಸೂಪ್ ರೀತಿಯಲ್ಲಿ ಕುಡಿಯಲು ತುಂಬಾ ತುಂಬಾ ರುಚಿಯಾಗಿರುತ್ತದೆ.

ಬೇಕಾಗುವ ಸಾಮಾಗ್ರಿಗಳು ಮತ್ತು ತಯಾರಿಸುವ ವಿಧಾನ.
ಒಂದು ಮಿಕ್ಸಿ ಜಾರಿಗೆ 5 ಎಸಳು ಬೆಳ್ಳುಳ್ಳಿ, 10 ಕಾಳುಮೆಣಸು, ಅರ್ಧ ಚಮಚ ಜೀರಿಗೆ, 1 ಒಣಮೆಣಸಿನಕಾಯಿ ಮತ್ತು ಸಣ್ಣಗೆ ಹೆಚ್ಚಿದ 2 ವೀಳ್ಯದೆಲೆಯನ್ನು ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ.2 ಟೊಮ್ಯಾಟೋವನ್ನು ರುಬ್ಬಿಟ್ಟುಕೊಳ್ಳಿ ಹಾಗು ಹುಣಸೆಹಣ್ಣನ್ನು ನೆನೆಸಿ ರಸ ತೆಗೆದಿಟ್ಟುಕೊಳ್ಳಿ.

ಒಂದು ಪ್ಯಾನ್ ಗೆ ಸ್ವಲ್ಪ ಎಣ್ಣೆ, ರುಬ್ಬಿದ ಮಿಶ್ರಣವನ್ನು ಹಾಕಿ ಸ್ವಲ್ಪ ಹುರಿಯಿರಿ ನಂತರ ಅದಕ್ಕೆ ರುಬ್ಬಿದ ಟೊಮ್ಯಾಟೋ, ಸ್ವಲ್ಪ ಹುಣಸೇರಸ, ಅಗತ್ಯಕ್ಕೆ ತಕ್ಕಂತೆ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಿ.

ಕೊನೆಯಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿಸೊಪ್ಪನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿ. ಈಗ ಬಿಸಿಬಿಸಿಯಾದ ರುಚಿ ರುಚಿಯಾದ ವೀಳ್ಯದೆಲೆ ರಸಂ ಸವಿಯಲು ಸಿದ್ಧ, ಈ ಮಾಹಿತಿ ಇಷ್ಟವಾದರೆ ಮರೆಯದೆ ಶೇರ್ ಮಾಡಿ. ಸಂಧ್ಯಾ ಪ್ರಸಾದ್.

Leave a Reply

Your email address will not be published. Required fields are marked *