ರವಿವಾರ- ಭಾನುವಾರ ಜನಿಸಿದವರು ಶೂರನೂ ಧೀರನೂ ಯುದ್ದದಲ್ಲಿ ಜಯಶಾಲಿಯೂ, ಉತ್ಸಹವುಳ್ಳವನೂ ಸಾಧಾರಣ ರೂಪವಂತನೂ ಆಗುವರು.

ಸೋಮವಾರ- ಜನಿಸಿದವರು ಸಕಲರಿಗೂ ಸವಿಮಾತುಗಳನ್ನು ಆಡುವನು, ಚತುರನೂ, ಶಾಂತಚಿತ್ತನೂ, ರಾಜಾಶ್ರಯುಳ್ಳವನೂ, ಸುಖವನು ಅನುಭವಿಸುವವನೂ, ಗಾಯನದಲ್ಲಿ ಪ್ರೇಮವುಳ್ಳವನೂ ಆಗುವರು.

ಮಂಗಳವಾರ- ಜನಿಸಿದವರು ಬಲಿಷ್ಟನೂ, ಜಗಳಗಂಟನೂ, ಅವಸರದ ಸ್ವಭಾವಗವನೂ, ಮುಂಗೋಪಿಯೂ, ದಯಾರಹಿತನೂ ಕ್ರೂರ ಸ್ವಭಾವದವನೂ ಯುದ್ದಪ್ರೇಮಿಯೂ, ಸಾಹಸಿಯೂ ಆಗುವರು.

ಬುಧವಾರ- ಜನಿಸಿದವರು ಶ್ರೀಮಂತನೂ, ರೂಪವಂತನೂ, ಮಧುರಭಾಷಿ, ವ್ಯಾಪಾರದಲ್ಲಿ ಕುಶಲನೂ, ಕಲೆಗಳಲ್ಲಿ ಪ್ರವೀಣನೂ, ಸಮಾಧನಯೂ, ವಿದ್ಯಾವಂತನೂ, ಸಂಗೀತಪ್ರೇಮಿಯೂ, ದಾನ ಧರ್ಮಗಳಲ್ಲಿ ಆಸಕ್ತನೂ, ಗುರು ಹಿರಿಯರಲ್ಲಿ ಭಕ್ತಿವಂತನೂ ಆಗವರು.

ಗುರುವಾರ- ಜನಿಸಿದವರು ಧನವಂತನು, ವಿದ್ಯಾವಂತನೂ, ಸದ್ಗುಣಿಯೂ, ಜನಪ್ರೇಮಿಯೂ, ದಾನಧರ್ಮಾಧಿ ಸತ್ಕಾರ್ಯಗಳಲ್ಲಿ ಆಸಕ್ತನೂ, ವಿವೇಕಿಯೂ ಆಗುವರು.

ಶುಕ್ರವಾರ- ಜನಿಸಿದವರು ಸನ್ಮಾರ್ಗಗಾಮಿಯೂ, ವಿನಯವುಳ್ಳವನು, ಶೃಂಗಾರಪ್ರಿಯನೂ, ಸುಗಂಧದ್ರವ್ಯ ಪ್ರೇಮಿಯೂ, ಚಂಚಲಚಿತ್ತನೂ, ಯುಕ್ತಿವಂತನೂ ಆಗುವನು.

ಶನಿವಾರ- ಹುಟ್ಟಿದವನು ಜಿಪುನರು ಸ್ವಭಾವದವನೂ ಮಂದಮತಿಯೂ ಆಲಸ್ಯಗಾರನೂಮ, ದುರ್ಬಲನೂ, ಪರದ್ರವ್ಯಾಪಹಾರಿಯೂ ಆಗುವರು.

Leave a Reply

Your email address will not be published. Required fields are marked *