ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗು ವಿಟಮಿನ್ ಸಿ ಅಂಶವನ್ನು ಒದಗಿಸುವ ಮೋಸಂಬಿಯಾ ಔಷಧಿಯ ಗುಣಗಳನ್ನು ತಿಳಿದಿರುವುದಿಲ್ಲ, ಈ ಮೂಲಕ ಮೂಸಂಬಿಯ ಉಪಯೋಗವನ್ನು ಇಲ್ಲಿವೆ ನೋಡಿ.

ವಿಟಮಿನ್ ಸಿ, ಅಂಶವನ್ನು ಸಂವೃದ್ದಿಯಾಗಿ ಹೊಂದಿರುವಂತ ಮೂಸಂಬಿ ಮನುಷ್ಯನ ದೇಹಕ್ಕೆ ಉತ್ತಮವಾದ ಉಪಯೋಗಗಳನ್ನು ಹೊಂದಿದೆ. ದಿನಕ್ಕೆ ೨-೩ ಲೋಟ ಮೂಸಂಬಿ ರಸವನ್ನು ಸೇವಿಸುವುದರಿಂದ ಉರಿ ಮೂತ್ರ, ಮೂತ್ರ ತಡೆ ಸಮಸ್ಯೆ ನಿವಾರಣೆಯಾಗುವುದು.

ದೇಹಕ್ಕೆ ಸುಸ್ತು ಹಾಗು ಜ್ವರದ ಸಮಸ್ಯೆ ಕಾಡುತ್ತಿದ್ದರೆ, ಮೂಸಂಬಿ ರಸವನ್ನು ಸೇವಿಸುವುದರಿಂದ ಜ್ವರ ಹಾಗು ಸುಸ್ತು ನಿವಾರಣೆಯಾಗುವುದು ದೇಹಕ್ಕೆ ಎನರ್ಜಿಯನ್ನು ಒದಗಿಸುತ್ತದೆ ಈ ಮೂಸಂಬಿ. ನೆಗಡಿ ಸಮಸ್ಯೆ ಇದ್ರೆ, ಬಿಸಿನೀರಿನಲ್ಲಿ ಮೂಸಂಬಿ ರಸವನ್ನು ಹಿಂದಿ ಕುಡಿಯುವುದರಿಂದ ನೆಗಡಿ ಬೇಗನೆ ಕಡಿಮೆಯಾಗುವುದು.

ಮಲಬದ್ಧತೆ ಸಮಸ್ಯೆ ಇದ್ರೆ ಊಟದ ನಂತರ ಮೂಸಂಬಿ ಸೇವನೆ ಮಾಡುವುದರಿಂದ ಉತ್ತಮ ಪರಿಣಾಮವನ್ನು ಕಾಣಬಹುದು. ಅಷ್ಟೇ ಅಲ್ಲದೆ ಕೆಮ್ಮು ಕಫ ಸಮಸ್ಯೆ ಕಾಡುತ್ತಿದ್ದರೆ ಮೂಸಂಬಿ ರಸ, ಉಪ್ಪು, ಮತ್ತು ಶುಂಠಿ ರಸ, ಇವು ಕಫ ಮತ್ತು ಕೆಮ್ಮು ಸಮಸ್ಯೆಯನ್ನು ನಿವಾರಿಸುತ್ತದೆ.

ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಮೂಸಂಬಿ ರಸವನ್ನು ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ಮುಖ ತೊಳೆದರೆ ಮುಖದ ಕಾಂತಿ ಹೆಚ್ಚುತ್ತದೆ.

Leave a Reply

Your email address will not be published. Required fields are marked *