ಹೊಟ್ಟೆಯನ್ನು ಆರೋಗ್ಯವಾಗಿ ಇರಿಸುತ್ತದೆ: ಕುಂಬಳಕಾಯಿ ನಮ್ಮ ಹೊಟ್ಟೆಗೆ ಲಾಭದಾಯಕ. ಅದರ ಸೇವನೆಯಿಂದ ನಮ್ಮ ಹೊಟ್ಟೆಯನ್ನು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಕುಂಬಳಕಾಯಿಯಲ್ಲಿ ಡೈಯಟ್ರಿ ಫೈಬರ್ ಇರುವುದರ ಕಾರಣ ಹೊಟ್ಟೆ ಸಂಬಂಧಿತ ಕಾಯಿಲೆಯನ್ನು ದೂರ ಮಾಡುತ್ತದೆ. ಅಲ್ಲದೇ ಇದು ನಮಗೆ ಆ್ಯಸಿಡಿಟಿ ಮತ್ತು ಹೊಟ್ಟೆ ಉರಿಯನ್ನು ದೂರ ಮಾಡುತ್ತೆ.

ಡಯಾಬಿಟಿಸ್ ರೋಗಿಗಳಿಗೆ ಉತ್ತಮ: ಕುಂಬಳಕಾಯಿಯಲ್ಲಿ ವಿಟಮಿನ್ ಸಿ ಅಂಶವಿರುವ ಕಾರಣ ಇನ್ಸೂಲಿನ್‍ಗೆ ಸಮಾವಾಗಿರುತ್ತದೆ. ಅಲ್ಲದೇ ಜಾಸ್ತಿಯಾಗಿರುವ ಶುಗರ್ ಕಡಿಮೆ ಮಾಡುತ್ತದೆ. ಡಯಾಬಿಟಿಸ್ ರೋಗಿಗಳು ವಾರಕ್ಕೆ ಎರಡು ಬಾರಿ ಕುಂಬಳಕಾಯಿಯನ್ನು ಸೇವಿಸಬೇಕು.

ಕ್ಯಾನ್ಸರ್ ತಡೆಗಟ್ಟುತ್ತದೆ: ಕುಂಬಳಕಾಯಿಯಲ್ಲಿ ಆ್ಯಂಟಿ- ಆಕ್ಸಿಡೆಂಟ್ ಅಂಶವಿರುತ್ತದೆ. ಇದು ದೇಹದಲ್ಲಿರುವ ಕ್ಯಾನ್ಸರ್ ಸ್ಲೇಸ್ ಹೆಚ್ಚುವುದನ್ನು ತಡೆಯುತ್ತದೆ. ಹಾಗಾಗಿ ನಿಮ್ಮ ಡಯಟ್ ಲಿಸ್ಟ್ ನಲ್ಲಿ ಕುಂಬಳಕಾಯಿ ಪಲ್ಯ, ಜ್ಯೂಸ್ ಅನ್ನು ಸೇರಿಸಿಕೊಳ್ಳಿ. ಇದರ ಸೇವನೆಯಿಂದ ಕ್ಯಾನ್ಸರ್ ಅಂತಹ ಗಂಭೀರ ರೋಗವನ್ನು ತಡೆಯುತ್ತದೆ.

ಒತ್ತಡವನ್ನು ದೂರ ಮಾಡುತ್ತದೆ: ಕುಂಬಳಕಾಯಿ ಸೇವನೆಯಿಂದ ಒತ್ತಡ, ನಿದ್ರಾಹೀನತೆ, ಕೋಪ, ಖಿನ್ನತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಇದರ ಹೊರತು ಕುಂಬಳಕಾಯಿ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೃದಯವನ್ನು ಆರೋಗ್ಯವಾಗಿ ಇರಿಸುತ್ತದೆ: ಕುಂಬಳಕಾಯಿ ಸೇವಿಸಿದರೆ ಅದು ನಮ್ಮ ದೇಹದ ಕೋಲೆಸ್ಟ್ರಾಲ್ ಲೆವೆಲ್ ಮೆಂಟೇನ್ ಮಾಡಿ ಹೃದಯವನ್ನು ಆರೋಗ್ಯವಾಗಿರುತ್ತದೆ. ನಿಮಗೆ ಹೃದಯ ಸಂಬಂಧಿತ ಸಮಸ್ಯೆಯಿದರೆ, ಇದರ ಸೇವನೆಯಿಂದ ಆರೋಗ್ಯಕ್ಕೆ ಲಾಭವಾಗುತ್ತದೆ.

ತೂಕ ಇಳಿಸಲು ಸಹಾಯ: ಕುಂಬಳಕಾಯಿಯಲ್ಲಿ ಕ್ಯಾಲೋರಿ ಕಡಿಮೆ ಹಾಗೂ ಫೈಬರ್ ಜಾಸ್ತಿಯಿರುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಪದೇ ಪದೇ ಹೊಟ್ಟೆ ಹಸಿಯುವುದಿಲ್ಲ. ಇದು ನಿಮ್ಮ ಹೊಟ್ಟೆಯನ್ನು ತುಂಬಿರಿಸುತ್ತದೆ. ಹಾಗಾಗಿ ನೀವು ಅಧಿಕ ಆಹಾರ ಸೇವಿಸುವುದಿಲ್ಲ. ಇದರಿಂದಾಗಿ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ: ಕುಂಬಳಕಾಯಿಯಲ್ಲಿ ವಿಟಮಿನ್ ಎ ಅಂಶವಿರುವುದರಿಂದ ನಿಮ್ಮ ಕಣ್ಣುಗಳಿಗೆ ಇದು ಒಳ್ಳೆಯದು. ದಿನ ಒಂದು ಕಪ್ ಕುಂಬಳಕಾಯಿ ಸೇವಿಸಿದರೆ, ಕೆಲವೇ ದಿನಗಳಲ್ಲಿ ಇದು ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆ.

Leave a Reply

Your email address will not be published. Required fields are marked *